ಚೆನ್ನೈ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 36 ರನ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಗೆಲುವನ್ನು ತಂಡದ ಆಟಗಾರರಿಗಿಂತಲ್ಲೂ ಹೆಚ್ಚು ಸಂಭ್ರಮಿಸಿದ್ದು ತಂಡದ ಮಾಲಕಿ ಕಾವ್ಯಾ ಮಾರನ್(Kavya Maran). ಗ್ಯಾಲರಿಯಲ್ಲಿದ್ದ ಕಾವ್ಯಾ(Kavya Maran’s Happiness) ತಂಡ ಗೆಲ್ಲುತ್ತಿದ್ದಂತೆ ಫುಲ್ ಜೋಶ್ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ. ಪಂದ್ಯ ಸೋತಾಗ ಅತಿಯಾದ ಬೇಸರಿಂದ ಸಪ್ಪೆ ಮೋರೆ ಹಾಕಿ ಕುಳಿತಿದ್ದ ವಿಡಿಯೊ ಮತ್ತು ಫೋಟೊಗಳು ಕೂಡ ಹಲವು ಬಾರಿ ವೈರಲ್ ಆಗಿತ್ತು.
ಖ್ಯಾತ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಐಪಿಎಲ್ ಆರಂಭಕ್ಕೂ ಮುನ್ನ ನಡೆದಿದ್ದ ಸಿನೆಮಾ ಕಾರ್ಯಕ್ರಮದ ಸಮಾರಂಭದ ವೇದಿಕೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ ಏಕೆಂದರೆ ಈ ಪಂದ್ಯ ಸೋತಾಗ ಕಾವ್ಯಾ ಅವರು ನೋಡಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದರು.
ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.
ನಿನ್ನೆ(ಶುಕ್ರವಾರ) ನಡೆದ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಂಗ್ ಇನಿಂಗ್ಸ್ ವೇಳೆ ಸಪ್ಪೆಯಾಗಿದ್ದ ಕಾವ್ಯಾ ಆ ಬಳಿಕ ಪಂದ್ಯದಲ್ಲಿ ತನ್ನ ತಂಡ ಹಿಡಿತ ಸಾಧಿಸುತ್ತಿದ್ದಂತೆ ಸಂಭ್ರಮಿಸಲು ಆರಂಭಿಸಿದರು. ರಾಜಸ್ಥಾನ್ ತಂಡ ಒಂದೊಂದು ವಿಕೆಟ್ ಬೀಳುತ್ತಿದ್ದಾಗಲೂ ಕೂಡ ಆಟಗಾರರಿಗಿಂತಲೂ ಹೆಚ್ಚು ಸಂಭ್ರಮಾಚರಣೆ ಮಾಡುತ್ತಿದ್ದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಹಲವು ಬಾರಿ ಓಡಿ ಬಂದು ತಮ್ಮ ತಂದೆಯನ್ನು ಅಪ್ಪಿಕೊಂಡು ಸಂಭ್ರಮಿಸಿದ್ದು ಕೂಡ ಕಂಡು ಬಂತು.
ಇದನ್ನೂ ಓದಿ SRH vs RR: ಹೈದರಾಬಾದ್ಗೆ ಗೆಲುವಿನ ‘ಸನ್ರೈಸ್’; ಫೈನಲ್ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ
ಫೈನಲ್ನಲ್ಲಿ ಕೆಕೆಆರ್ ಎದುರಾಳಿ
ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಿನ್ನೆ(ಶುಕ್ರವಾರ) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 175 ರನ್ ಬಾರಿಸಿತು. ಜವಾಬಿತ್ತ ರಾಜಸ್ಥಾನ್ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್ ನಷ್ಟಕ್ಕೆ 139 ರನ್ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ತಂಡದ ಸೋಲು ಕಂಡು ಪುಟ್ಟ ಅಭಿಮಾನಿಯೊಬ್ಬಳು ಕಣ್ಣೀರು ಸುರಿಸಿದ ದೃಶ್ಯ ಕೂಡ ಕಂಡು ಬಂತು. ನಾಳೆ(ಭಾನುವಾರ) ನಡೆಯುವ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ವಿರುದ್ಧ ಆಡಲಿದೆ.