Site icon Vistara News

viral video: ಐತಿಹಾಸಿಕ ಗೆಲುವನ್ನು ಅಗ್ರೆಸಿವ್​ನಿಂದ ಸಂಭ್ರಮಿಸಿದ ಟೀಮ್​ ಇಂಡಿಯಾ ಆಟಗಾರರು

Gill & Yashasvi's Aggressive Celebration

ಕೇಪ್​ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನು ಸಮಬಲಗೊಳಿಸಿದೆ. ಈ ಗೆಲುವನ್ನು ಆಟಗಾರರು ಡ್ರೆಸ್ಸಿಂಗ್​ ರೂಮ್​ನಲ್ಲಿ ಅಗ್ರೆಸಿವ್​ ಆಗಿ ಸಂಭ್ರಮಿಸಿದ್ದಾರೆ. ಅದರಲ್ಲೂ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​ ಮತ್ತು ಶುಭಮನ್​ ಗಿಲ್​ ಕೊಂಚ ಹೆಚ್ಚಿನ ಅಗ್ರೆಸಿವ್​ನಿಂದ ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಶ್ರೇಯಸ್​ ಅಯ್ಯರ್​ ಗೆಲುವಿನ ಬೌಂಡರಿ ಬಾರಿಸುವ ವೇಳೆ ಗ್ಯಾಲರಿಯಲ್ಲಿದ್ದ ಜೈಸ್ವಾಲ್​ ಮತ್ತು ಗಿಲ್ ಇದು ಸಿಕ್ಸರ್​ ಎಂದು ಹೇಳುತ್ತಾ ಗೆದ್ದ ತಕ್ಷಣ ಜೋರಾಗಿ ಕಿರುಚುವ ಮೂಲಕ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಅತ್ತ ಮೈದಾನದಲ್ಲಿದ್ದ ರೋಹಿತ್​ ಕೂಡ ಹಿಂದೆಂದು ಕಾಣದ ರೀತಿಯಲ್ಲಿ ಅಗ್ರೆಸಿವ್​ ಆಗಿ ಸಂಭ್ರಮಿಸಿದ್ದು ಕಂಡು ಬಂತು. ಕೇಪ್​ಟೌನ್​ನಲ್ಲಿ ಭಾರತ ಸಾಧಿಸಿದ ಮೊದಲ ಗೆಲುವು ಕೂಡ ಇದಾಗಿತ್ತು. ಹೀಗಾಗಿ ಈ ಐತಿಹಾಸಿಕ ಗೆಲುವನ್ನು ಎಲ್ಲ ಆಟಗಾರರು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ಭಾರತ ಆಟಗಾರರ ಗೆಲುವಿನ ಸಂಭ್ರಮದ ಎಲ್ಲ ಮಧುರ ಕ್ಷಣವನ್ನು ಕ್ಯಾಮೆರಾಮೆನ್​ ಸೆರೆಹಿಡಿದ್ದಾರೆ. ಈ ದೃಶ್ಯವನ್ನು ಶುಕ್ರವಾರ ಐಸಿಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯ ಕಂಡಿತು. ಗುರುವಾರ ಮೂರು ವಿಕೆಟ್ ನಷ್ಟಕ್ಕೆ 62 ರನ್ ಮತ್ತು 36 ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಐಡೆನ್​ ಮಾರ್ಕ್ರಮ್​ ಅವರ ಶತಕದ ಸಾಹಸದಿಂದ 176 ರನ್​ಗೆ ಆಲೌಟ್​ ಆಯಿತು. 79 ರನ್ ಗೆಲುವಿನ ಗುರಿ ಪಡೆದ ಭಾರತ 3 ವಿಕೆಟ್​ ನಷ್ಟಕ್ಕೆ 80 ರನ್​ ಬಾರಿಸಿ 7 ವಿಕೆಟ್​ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿತು. ಮೊದಲ ಪಂದ್ಯದಲ್ಲಿ ಇನಿಂಗ್ಸ್​ ಸೋಲಿಗೆ ತುತ್ತಾಗಿತ್ತು.

ಇದನ್ನೂ ಓದಿ IND vs SA Test Match: ವಿಶ್ವ ದಾಖಲೆ ಬರೆದ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್​ ಪಂದ್ಯ

ಕೇಪ್​ ಟೌನ್​ನಲ್ಲಿ ಮೊದಲ ಗೆಲುವು


ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ಸಾಧಿಸಿದ ಭಾರತ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಕೇಪ್​ ಟೌನ್​ನಲ್ಲಿ ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಕೇಪ್​ ಟೌನ್​ನಲ್ಲಿ ಭಾರತವನ್ನು ಗೆಲ್ಲಿಸಿದ ಮೊದಲ ನಾಯಕ ಎನ್ನುವ ಕೀರ್ತಿಯೂ ರೋಹಿತ್​ ಪಾಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್​ ಗೆಲುವು


ಜೊಹಾನ್ಸ್​ಬರ್ಗ್​ನಲ್ಲಿ 123 ರನ್​ ಗೆಲುವು, (2006)

ಡರ್ಬನ್​ನಲ್ಲಿ 87 ರನ್​ಗಳ ಗೆಲುವು, (2010)

ಜೋಹಾನ್ಸ್​ಬರ್ಗ್​ನಲ್ಲಿ 63 ರನ್​ ಗೆಲುವು, (2018)

ಸೆಂಚುರಿಯನ್​ನಲ್ಲಿ 113 ರನ್​ ಗೆಲುವು, (2021)

ಕೇಪ್​ ಟೌನ್​ನಲ್ಲಿ 7 ವಿಕೆಟ್​ ಗೆಲುವು, (2024)

Exit mobile version