Site icon Vistara News

Viral Video: ಔಟ್​ ನೀಡಿದ ಮೂರನೇ ಅಂಪೈರ್​; ನಾಟೌಟ್ ಎಂದ ಫೀಲ್ಡ್​ ಅಂಪೈರ್​

Third Umpire Wrongly Gives

ಮೆಲ್ಬೊರ್ನ್​: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ (BBL 2024) ಮೂರನೇ ಅಂಪೈರ್ ನೀಡಿದ ತೀರ್ಪೊಂದು ಇದೀಗ ಬಾರಿ ವೈರಲ್​ ಆಗಿದೆ. ನಾಟೌಟ್​ ಆಗಿದ್ದರೂ ಕೂಡ ಟಿವಿ ಅಂಪೈರ್​ ಇದನ್ನು ಔಟ್​ ಎಂದು ತೀರ್ಪು ನೀಡಿ ಬಳಿಕ ಫೀಲ್ಡ್​ ಅಂಪೈರ್​ ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮೂರನೇ ಅಂಪೈರ್​ ತೀರ್ಪು ಕಂಡು ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇಮಾದ್ ವಾಸಿಂ ಎಸೆದ ಮೂರನೇ ಓವರ್​ನ 4ನೇ ಎಸೆತದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಬ್ಯಾಟರ್ ಜೇಮ್ಸ್ ವಿನ್ಸ್​ ನೇರವಾಗಿ ಬ್ಯಾಟ್​ ಬೀಸಿದರು. ಈ ವೇಳೆ ಚೆಂಡು ವಾಸಿಂ ಕೈಗೆ ಬಡಿದು ನೇರವಾಗಿ ವಿಕೆಟ್​ಗೆ ತಾಗಿತು. ಮೆಲ್ಬೊರ್ನ್​ ಆಟಗಾರರು ಔಟ್​ಗಾಗಿ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಇದನ್ನು ಮೂರನೇ ಅಂಪೈರ್​ಗೆ ತೀರ್ಪು ನೀಡುವಂತೆ ಮನವಿ ಸಲ್ಲಿಸಿದರು.


ಟಿವಿ ಅಂಪೈರ್​ ಇದನ್ನು ಪರೀಕ್ಷಿಸಿದ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ ವಿಕೆಟ್​ಗೆ ಚೆಂಡು ಬಡಿಯುವ ಮುನ್ನವೇ ಕ್ರೀಸ್​ನಲ್ಲಿರುವು ಸ್ಪಷ್ಟವಾಗಿ ಕಾಣಿಸಿತು. ಇದು ಮೈದಾನದ ದೊಡ್ಡ ಪರೆದೆಯಲ್ಲಿ ಪ್ರಸಾರಗೊಳ್ಳುತ್ತಿತ್ತು. ಅಚ್ಚರಿ ಎಂಬಂತೆ ಇದನ್ನು ಟಿವಿ ಅಂಪೈರ್​ ಔಟ್​ ಎಂದು ತೀರ್ಪು ನೀಡಿದರು. ಇತ್ತಂಡಗಳ ಆಟಗಾರರು ಕೂಡ ಒಂದು ಕ್ಷಣ ಅಚ್ಚರಿಗೊಂಡರು. ಅರೆ, ಇ್ಉ ಹೇಗೆ ಸಾಧ್ಯ ನಾಟೌಟ್​ ಎನ್ನುವುದು ಸ್ಪಷ್ಟವಾಗಿ ಗೋಚರಿಸಿದರೂ ಔಟ್​ ಏಕೆ ನೀಡಿದರು ಎಂದು ದಂಗಾದರು. ತಕ್ಷಣ ಎಚ್ಚೆತ್ತುಕೊಂಡ ಫೀಲ್ಡ್​ ಅಂಪೈರ್​ ಇದು ತಾಂತ್ರಿಕ ಕಾರಣದಿಂದ ಹೀಗಾಗಿದೆ ಕ್ಷಮಿಸಿ ಎಂದು ಹೇಳಿ ನಾಟೌಟ್ ನೀಡಿದರು. ಈ ವೇಳೆ ಆಟಗಾರರು ಜೋರಾಗಿ ನಕ್ಕು ಬಳಿಕ ಪಂದ್ಯ ಮುಂದುವರಿಸಿದರು.​ ಜೋಶ್ ಫಿಲಿಪ್​ ನಾನ್​ ಸ್ಟ್ರೈಕ್​ನಲ್ಲಿದ್ದ ಆಟಗಾರ.

ಇದನ್ನೂ ಓದಿ ಭಾರತ ವಿರುದ್ಧದ ಟಿ20 ಸರಣಿಗೆ ಆಫ್ಘನ್​ ತಂಡ ಪ್ರಕಟ; ತಂಡಕ್ಕೆ ಮರಳಿದ ರಶೀದ್‌ ಖಾನ್‌

ಲಿಫ್ಟ್​ನಲ್ಲಿ ಸಿಲುಕಿಕೊಂಡ ಅಂಪೈರ್​


ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಇಲ್ಲಿಂಗ್​ ವರ್ತ್​​ ಲಿಫ್ಟ್​ನಲ್ಲಿ ಸಿಲುಕಿಕೊಂಡು ಪಂದ್ಯ ತಡವಾಗಿ ಆರಂಭಗೊಂಡ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೊ ಕೂಡ ಬಾರಿ ವೈರಲ್ ಆಗಿತ್ತು.

ಭೋಜನ ವಿರಾಮದ ಬಳಿಕ ಮತ್ತೆ ಕಾರ್ಯ ನಿರ್ವಹಿಸಲು ಮುಂದಾಗಿದ್ದ ಮೂರನೇ ಅಂಪೈರ್​ ಇಲ್ಲಿಂಗ್​ವರ್ತ್(Richard Illingworth) ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ತಾಂತ್ರಿಕ ಕಾರಣದಿಂದಾಗಿ ಲಿಫ್ಟ್‌ ಕೆಟ್ಟುಹೋಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಲಿಫ್ಟ್‌ ಸರಿಪಡಿಸಿ ಇಲಿಂಗ್‌ವರ್ತ್ ಅವರನ್ನು ಹೊರಬರುವಂತೆ ಮಾಡಿದ್ದಾರೆ. ಲಿಫ್ಟ್​ನಿಂದ ಹೊರ ಬಂದ ಬಳಿಕ ಅವರು ನಗುತ್ತಲೇ ಮೈದಾನದತ್ತ ಕೈ ಬೀಸಿ ಪಂದ್ಯ ಆರಂಭಗೊಳಿಸುವಂತೆ ಸೂಚನೆ ನೀಡಿದ್ದರು.

Exit mobile version