Site icon Vistara News

Viral Video: ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಮೂಡ್​ನಲ್ಲಿ ಔಟ್​ ನೀಡಿದ ಅಂಪೈರ್​; ವಿಡಿಯೊ ವೈರಲ್​

Viral Video: Umpire given out in Internet Explorer mode; The video is viral

Viral Video: Umpire given out in Internet Explorer mode; The video is viral

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪತ್ರಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ(Viral Video) ಕೂಡ ಆ ಸಾಲಿಗೆ ಸೇರಿದೆ.

ಸ್ಥಳೀಯ ಮಟ್ಟದ ಕ್ರಿಕೆಟ್​ ಪಂದ್ಯಾಟವೊಂದರಲ್ಲಿ ಅಂಪೈರ್​ ನೀಡಿದ ತೀರ್ಪಿನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೌಲರ್​ ಎಸೆದ ಚೆಂಡು ಬ್ಯಾಟ್ಸ್​ಮನ್​ ಗೌಸ್​​ಗೆ ತಾಗಿ ವಿಕೆಟ್​ ಕೀಪರ್​ ಕೈ ಸೇರುತ್ತದೆ. ಇದೇ ವೇಳೆ ಬೌಲರ್​ ಮತ್ತು ವಿಕೆಟ್​ ಕೀಪರ್​ ಅಂಪೈರ್​ ಬಳಿ ಔಟ್​ ಎಂದು ಮನವಿ ಮಾಡುತ್ತಾರೆ. ಆದರೆ ಅಂಪೈರ್​ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ನಿಂತು ಬಿಡುತ್ತಾರೆ.

ಅಂಪೈರ್ ಅವರು ಔಟ್​ ನೀಡದ ಕಾರಣ ಬೌಲರ್​ ಮುಂದಿನ ಎಸೆತ ಎಸೆಯಲು ಮುಂದಾದರು. ಇನ್ನೇನು ಬೌಲಿಂಗ್​ ನಡೆಸುವಷ್ಟರಲ್ಲಿ ಅಂಪೈರ್​ ಕೈ ಎತ್ತಿ ಔಟ್​ ಎಂದು ತೀರ್ಪು ನೀಡಿದರು. ಈ ವಿಡಿಯೊ ಕಂಡ ನೆಟ್ಟಿಗರು ಗೂಗಲ್​ ಸರ್ಚ್​ ಇಂಜಿನ್​ ಬರುವುದಕ್ಕೂ ಮುನ್ನ ಇದ್ದಂತಹ ಮೈಕ್ರೋಸಾಫ್ಟ್ ನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್​ಗೆ ಅಂಪೈರ್​ ಅವರ ತೀರ್ಪನ್ನು ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ Viral News: ರೈಫಲ್​​ ಬದಿಗಿಟ್ಟು ಬ್ಯಾಟ್​ ಹಿಡಿದ ಭಾರತ-ಚೀನಾ ಸೈನಿಕರು; ವಿಡಿಯೊ ವೈರಲ್​

ಮೈಕ್ರೋಸಾಫ್ಟ್ ನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್ ಕೂಡ ನಿಧಾನವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಅಂಪೈರ್​ ಕೂಡ ಇದೇ ಕಾಲದವರಾಗಿದ್ದಾರೆ, ಅವರು ಇನ್ನಷ್ಟೇ ಅಪ್​ಡೇಟ್​ ಆಗ ಬೇಕಿದೆ ಎಂದು ಕೆಲ ನೆಟ್ಟಿಗರು ಹಾಸ್ಯಮಯ ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರು ವೆಸ್ಟ್​ ಇಂಡೀಸ್​ನ ಮಾಜಿ ಅಂಪೈರ್​ ಸ್ಟೀವ್​ ಬಕ್ನರ್​ ವರ್ಷನ್-​ 2 ಎಂದು ಹೇಳಿದ್ದಾರೆ. ಸ್ಟೀವ್​ ಬಕ್ನರ್ ಕೂಡ ತಮ್ಮ ತೀರ್ಪನ್ನು ತಡವಾಗಿ ನೀಡುತ್ತಿದ್ದರು.

Exit mobile version