Site icon Vistara News

VIRAL VIDEO: ವಿರಾಟ್ ಕೊಹ್ಲಿ ಯಾರು?; ರೊನಾಲ್ಡೊ ಪ್ರತಿಕ್ರಿಯೆಗೆ ದಂಗಾದ ಖ್ಯಾತ ಯೂಟ್ಯೂಬರ್

virat kohli

ಬೆಂಗಳೂರು: ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಸಂಪೂರ್ಣ 25 ವರ್ಷಗಳ ಇತಿಹಾಸದಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ(Virat Kohli) ಹೆಸರು ಅಗ್ರಸ್ಥಾನ ಪಡೆದಿತ್ತು. ಗೂಗಲ್ ಅಸ್ತಿತ್ವಕ್ಕೆ ಬಂದಾಗಿನಿಂದ, ಕೆಲವು ಅತ್ಯುತ್ತಮ ಕ್ರಿಕೆಟಿಗರು ಕ್ರೀಡಾ ವಿಶ್ವದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರು ಇದ್ದಾರೆ. ಆದರೆ, ಗೂಗಲ್ ಇತಿಹಾಸದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗನಾಗಿ ಹೊರಹೊಮ್ಮಿದವರು ಕೊಹ್ಲಿ. ಆದರೆ ಬ್ರೆಜಿಲಿಯನ್ ಮಾಜಿ ಫುಟ್‌ಬಾಲ್ ತಾರೆ ರೊನಾಲ್ಡೊಗೆ(Brazilian football great Ronaldo) ಕೊಹ್ಲಿ ಯಾರೆಂದೇ ಗೊತ್ತಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ರೊನಾಲ್ಡೊ ಅವರು ಕೊಹ್ಲಿ ಯಾರೆಂದು ಕೇಳಿದ ಪ್ರಶ್ನೆಯ ವಿಡಿಯೊ ವೈರಲ್​ ಆಗಿದೆ.

ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಬ್ರೆಜಿಲಿಯನ್ ಮಾಜಿ ವಿಶ್ವಕಪ್​ ವಿಜೇತ ಫುಟ್ಬಾಲಿಗ ರೊನಾಲ್ಡೊ ಅವರಿಗೆ ಪ್ರಸಿದ್ಧ ಯೂಟ್ಯೂಬರ್ ಸ್ಪೀಡ್‌ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಶ್ನೆಯ ವಿವರ ಇಲ್ಲಿದೆ.

ರೊನಾಲ್ಡೊ ಬಳಿ ನಿಮಗೆ ವಿರಾಟ್ ಕೊಹ್ಲಿ ಗೊತ್ತಾ? ಎಂದು ಸ್ಪೀಡ್‌ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರೊನಾಲ್ಡೊ, ಯಾರದು ಎಂದು ಕೇಳಿದ್ದಾರೆ. ಭಾರತದ ವಿರಾಟ್ ಕೊಹ್ಲಿ ತಿಳಿದಿಲ್ಲವೇ ಎಂದು ಮತ್ತೆ ಸ್ಪೀಡ್‌ ಪ್ರಶ್ನೆ ಮಾಡಿದರು. ಪ್ರತಿಕ್ರಿಯೆ ನೀಡಿದ ರೊನಾಲ್ಡೊ ಇಲ್ಲ ಎಂದರು. ಈ ಉತ್ತರ ಕೇಳಿ ಅಚ್ಚರಿಗೊಂಡ ಸ್ಪೀಡ್‌, ನಿಜಕ್ಕೂ ನಿಮಗೆ ಕೊಹ್ಲಿ ಯಾರೆಂದು ತಿಳಿದಿಲ್ಲವೇ ಎಂದರು. ಈ ವೇಳೆ ರೊನಾಲ್ಡೊ ಆತ ಯಾರು ಕ್ರೀಡಾಪಡುವಾ? ಎಂದು ಕೇಳಿದರು. ಅಯ್ಯೋ ದೇವಾ ಎನ್ನುವ ರೀತಿಯಲ್ಲಿ ಸ್ಪೀಡ್‌ ತಮ್ಮ ಮೊಬೈಲ್​ನಲ್ಲಿ ವಿರಾಟ್​ ಕೊಹ್ಲಿಯ ಫೋಟೊ ತೋರಿಸಿ ಈತ ಮಹಾನ್​ ಕ್ರಿಕೆಟ್​ ಆಟಗಾರ ವಿಶ್ವಾದ್ಯಾಂತ ಇವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಅವರು ಯಾರೆಂದು ಕೇಳಿದ ಮೊದಲ ವ್ಯಕ್ತಿ ನೀವು ಎಂದು ಹೇಳುತ್ತಾ ಆಶ್ಚರ್ಯದಿಂದಲೇ ನಗು ಚೆಲ್ಲಿದರು. ಇದೇ ವೇಳೆ ರೊನಾಲ್ಡೊ ಕೊಹ್ಲಿ ಎನ್ನುವ ವ್ಯಕ್ತಿ ಇಲ್ಲಿ ಅಷ್ಟಾಗಿ ಖ್ಯಾತಿ ಪಡೆದಿಲ್ಲ, ಹೀಗಾಗಿ ಆತ ಯಾರೆಂದು ನನನಗೆ ತಿಳಿದಿಲ್ಲ ಎಎಂದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Virat Kohli: ಮೊದಲ ಟಿ20 ಪಂದ್ಯಕ್ಕೆ ಕೊಹ್ಲಿ ಅಲಭ್ಯ; ಖಚಿತಪಡಿಸಿದ ಕೋಚ್​


ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಸ್ಪೀಡ್​ ಭಾರತಕ್ಕೆಎ ಆಗಮಿಸಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ವೀಕ್ಷಿಸಿದ್ದರು. ಅಲ್ಲದೆ ಭಾರತದ ಆತಿಥ್ಯ ಮತ್ತು ಇಲ್ಲಿನ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Exit mobile version