ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್ ಪ್ರಿಯರ ಮನಗೆದ್ದಿದೆ. ಶಾಲಾ ವಿದ್ಯಾರ್ಥಿಯೊಬ್ಬಳು ಜಸ್ಪ್ರೀತ್ ಬುಮ್ರಾ ಅವರಂತೆ ವೇಗದ ಬೌಲಿಂಗ್ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಫೀಮೇಲ್ ಕ್ರಿಕೆಟ್ ಎನ್ನುವ ಟ್ವಿಟರ್ ಎಕ್ಸ್ ಖಾತೆಯಿಂದ ಪೋಸ್ಟ್ ಆಗಿರುವ ಈ ವಿಡಿಯೊದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬಳು ತನ್ನ ಶಾಲೆಯ ಸಮವಸ್ತ್ರದಲ್ಲೇ ಅತ್ಯಂತ ವೇಗದ ಬೌಲಿಂಗ್ ನಡೆಸುವ ಮೂಲಕ ಬ್ಯಾಟರ್ ಅನ್ನು ಕ್ಲೀನ್ ಬೌಲ್ಟ್ ಮಾಡುತ್ತಿರುವುದನ್ನು ಕಾಣಬಹುದು. ಅತ್ಯುತ್ತಮ ಲೆಂತ್ ಮತ್ತು ಲೈನ್ನಲ್ಲಿ ಬೌಲಿಂಗ್ ನಡೆಸುವ ಈಕೆ ಭವಿಷ್ಯದ ಭಾರತ ಮಹಿಳಾ ತಂಡದ ಸ್ಟಾರ್(Indian Women’s Cricket team) ವೇಗಿ ಎಂದು ನೆಟ್ಟಿಗರು ಈಗಲೇ ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಕಳೆದ ವರ್ಷ ಹಳ್ಳಿ ಹುಡುಗಿಯೊಬ್ಬಳ ಬ್ಯಾಟಿಂಗ್ ಕಂಡು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(sachin tendulkar) ಕೂಡ ಅಚ್ಚರಿಗೊಂಡಿದ್ದರು. ತೆಂಡೂಲ್ಕರ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿ ಈ ಹುಡುಗಿಯ ಬ್ಯಾಟಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಅತ್ಯದ್ಭುತ ಬ್ಯಾಟಿಂಗ್ಗೆ ನಾನು ಮನಸೋತಿರುವೆ. ಇದೇ ರೀತಿ ಆಟ ಮುಂದುವರಿಸಿ ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ನೀವು ಕಾಣಿಸಿಕೊಳ್ಳುವಂತಾಗಲಿ ಎಂದು ಹಾರೈಸಿದ್ದರು.
ಹಳ್ಳಿ ಹುಡುಗಿಯ ಈ ಪರ್ಫೆಕ್ಟ್ ಬ್ಯಾಟಿಂಗ್ ಕಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಹುಡುಗಿಯ ಬ್ಯಾಟಿಂಗ್ ಕೊಂಡಾಡಿದ್ದರು. ಮಹಿಳೆಯರ ಕ್ರಿಕೆಟ್ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಹೇಳಿದ್ದರು.
ಎಬಿಡಿ ವಿಲಿಯರ್ಸ್ ಶೈಲಿಯಲ್ಲೇ ಕ್ಯಾಚ್ ಹಿಡಿದ ಇಂಗ್ಲೆಂಡ್ ಆಟಗಾರ್ತಿ ಮ್ಯಾಡಿ ವಿಲಿಯರ್ಸ್
ಲಂಡನ್: ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್‌ಗಳು(stunning catch) ದಾಖಲಾಗಿವೆ. ಆ ಸಾಲಿಗೆ ಇದೀಗ ಇಂಗ್ಲೆಂಡ್ ತಂಡದ ಆಟಗಾರ್ತಿ ಮ್ಯಾಡಿ ವಿಲಿಯರ್ಸ್(Mady Villiers) ಸೇರ್ಪಡೆಗೊಂಡಿದ್ದಾರೆ. ‘ದಿ ಹಂಟ್ರೆಡ್’ ಕ್ರಿಕೆಟ್(The Hundred) ಟೂರ್ನಿಯ ಪಂದ್ಯವೊಂದರಲ್ಲಿ ಮ್ಯಾಡಿ ವಿಲಿಯರ್ಸ್ ಯಾರೂ ಊಹಿಸದ ರೀತಿಯಲ್ಲಿ ಮೇಲಕ್ಕೆ ಜಂಪ್ ಮಾಡಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಒಂದನ್ನು ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಕ್ಯಾಚ್ನ ವಿಡಿಯೊ ವೈರಲ್ ಆಗುತ್ತಿದ್ದು, ಮಹಿಳಾ ಕ್ರಿಕೆಟ್‌ನಲ್ಲಿ ಕಂಡು ಬಂದ ಅತ್ಯದ್ಭುತ ಕ್ಯಾಚ್ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.
ಇದನ್ನೂ ಓದಿ Viral Video: ಕಂಬಕ್ಕೆ ಸಿಲುಕಿದ ತ್ರಿವರ್ಣ ಧ್ವಜ; ಮಿಂಚಂತೆ ಬಂದು ಧ್ವಜ ಬಿಡಿಸಿದ ಹಕ್ಕಿ; ಅಪರೂಪದ ಘಟನೆ!
ಓವಲ್ ಇನ್ವಿನ್ಸಿಬಲ್ ತಂಡದ ಪರವಾಗಿ ಆಡುತ್ತಿರುವ 25 ವರ್ಷದ ಮ್ಯಾಡಿ ವಿಲಿಯರ್ಸ್ 30ಯಾರ್ಡ್ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದರು. ಈ ವೇಳೆ ಎದುರಾಳಿ ತಂಡದ ಆಟಗಾರ್ತಿ ಬೌಂಡರಿ ಕಡೆಗೆ ಬಾರಿಸಿದ ಚೆಂಡನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮೇಲಕ್ಕೆ ಜಿಗಿದು ತನ್ನ ಎಡಗೈಯಿಂದ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಕ್ಯಾಚ್ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾಗಿದ್ದಾರೆ. ಅತ್ತ ಕಾಮೆಂಟ್ರಿ ನಡೆಸುತ್ತಿದ್ದವರು, ಕ್ಯಾಚ್ ಆಫ್ ದಿ ಟೂರ್ನಮೆಂಟ್ ಎಂದು ಬಣ್ಣಿಸಿದ್ದಾರೆ. ಟ್ರೆಂಟ್ ರಾಕೆಟ್ಸ್ ತಂಡ ಆರಂಭಿ ಆಟಗಾರ್ತಿ ಬ್ರಯೋನಿ ಸ್ಮಿತ್ ಅವರ ಕ್ಯಾಚ್ ಇದಾಗಿತ್ತು.