ಕೋಲ್ಕತ್ತಾ: ದೇಶದೆಲ್ಲಡೆ ಐಪಿಎಲ್(IPL 2024) ಕ್ರಿಕೆಟ್ ಟೂರ್ನಿಯ ಕಾವು ಜೋರಾಗಿದೆ. ದಿನ ಬೆಳಗಾದರೆ ಸಾಕು ಎಲ್ಲ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಮತ್ತು ಆಟಗಾರರ ಕುರಿತ ಚರ್ಚೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದೀಗ ಐಪಿಎಲ್ ಟೂರ್ನಿಯನ್ನೇ ಬಳಸಿಕೊಂಡು ಪಶ್ಚಿಮ ಬಂಗಾಳ ಪೊಲೀಸ್(West Bengal Police) ಇಲಾಖೆ ಹೆಲ್ಮೆಟ್ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
ಸೋಮವಾರ ನಡೆದ ಆರ್ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಮಿಚೆಲ್ ಸ್ಟಾರ್ಕ್ ಅವರ ಎಸೆತಕ್ಕೆ ಸಿಕ್ಸರ್ ಬಾರಿಸಿದ ವಿಡಿಯೊವನ್ನು ಬಳಿಸಿಕೊಂಡು ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಎಂಬ ವಿಶೇಷ ಜಾಗೃತಿ ಆರಂಭಿಸಿದ್ದಾರೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
#ViratKohli #SafeDriveSaveLife pic.twitter.com/2Jyn4r6p6Q
— West Bengal Police (@WBPolice) March 29, 2024
ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್‌ನಿಂದ ಸ್ಫೂರ್ತಿ ಪಡೆದ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆ, ರಸ್ತೆಗಳಲ್ಲಿ ಹೆಲ್ಮೆಟ್ ಬಳಕೆಯನ್ನು ಉತ್ತೇಜಿಸುವ ಸಂದೇಶವನ್ನು ರಚಿಸಿ ಗಮನಸೆಳೆದರು. ‘ಸೋಲಿರಲಿ ಅಥವಾ ಗೆಲುವೇ ಇರಲಿ. ಕಿರೀಟ ಮಾತ್ರ ರಾಜನ ತಲೆಯಲ್ಲೇ ಇರುತ್ತದೆ’ ಎಂದು ಬರೆದುಕೊಂಡು ಯಾವುದೇ ಸಂದರ್ಭದಲ್ಲಿಯೂ ಬೈಕ್ ಓಡಿಸುವಾಗ ಹೆಲ್ಮೆಟ್ ನಿಮ್ಮ ತಲೆಯಲ್ಲಿರಲಿ ಎನ್ನುವ ಸಂದೇಶವನ್ನು ನೀಡಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತಗಳು ನಡೆದಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ನೀಡಲಾಯಿತು.
ಇದನ್ನೂ ಓದಿ IPL 2024 Points Table: ಆರ್ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದ ಕೆಕೆಆರ್
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ ಅಜೇಯ 83 ರನ್ ಬಾರಿಸಿದರು. ಆದರೆ ಪಂದ್ಯದಲ್ಲಿ 7 ವಿಕೆಟ್ಗಳ ಸೋಲು ಎದುರಾಯಿತು. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಬ್ಯಾಟಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಕುಂಟುತ್ತಾ ರನ್ ಪೇರಿಸಿ ನಿಗದಿತ 20 ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ಗೆ 182 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ನೈಟ್ರೈಡರ್ಸ್ ಬಳಗ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ. ಇನ್ನೂ 19 ಎಸೆತಗಳ ಬಾಕಿ ಇರುವಂತೆಯೇ 3 ವಿಕೆಟ್ಗೆ 186 ರನ್ ಬಾರಿಸಿ ಗೆಲುವು ಸಾಧಿಸಿತು.
ಗಂಭೀರ್- ಕೊಹ್ಲಿ ಅಪ್ಪುಗೆಗೆ ಆಸ್ಕರ್ ಕೊಡಲೇಬೇಕು
ಐಪಿಎಲ್ 2024 ರ (IPL 2024) ಅತ್ಯಂತ ಆಶ್ಚರ್ಯಕರ ಕ್ಷಣಗಳಲ್ಲಿ ಒಂದು ಎಂಬಂತೆ ಹಳೆಯ ಶತ್ರುಗಳಾದ ವಿರಾಟ್ ಕೊಹ್ಲಿ (virat kohli) ಮತ್ತು ಗೌತಮ್ ಗಂಭೀರ್ (Gambhir vs Kohli ) ಮೈದಾನದಲ್ಲಿ ಪರಸ್ಪರ ಅಪ್ಪಿಕೊಂಡು ಮಾತನಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೆಕೆಆರ್ ನಡುವೆ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದು ಕ್ರಿಕೆಟ್ ಕ್ಷೇತ್ರದ ಗಮನವನ್ನು ಸೆಳೆಯಿತು. ಈ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಅವರು ಈ ಕ್ಷಣವನ್ನು ಅತ್ಯಂತ ಆಹ್ಲಾದಕರವಾಗಿ ವಿವರಿಸಿದ್ದಾರೆ. ಇದಕ್ಕೆ ನ್ಯಾಯಯುತ ಆಟ ಪ್ರಶಸ್ತಿಗಿಂತ ಹೆಚ್ಚಾಗಿ ಆಸ್ಕರ್ ಪ್ರಶಸ್ತಿಯನ್ನೇ ಕೊಡಬೇಕು ಎಂದಿದ್ದಾರೆ.