ಚೆನ್ನೈ: ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರೂ ಅವರು ಈಗಲೂ ಕ್ರಿಕೆಟಿನ ಸೂಪರ್ ಸ್ಟಾರ್ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ. ಧೋನಿ ಕಂಡರೆ ಸಾಕು ಅವರ ಜತೆ ಒಂದು ಫೋಟೊ, ಆಟೋಗ್ರಾಫ್ ಪಡೆದುಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಆದರೆ ಇದೀಗ ಗಗನಸಖಿಯೊಬ್ಬರು ಧೋನಿ ಅವರ ಜತೆಗೆ ಫೋಟೊವೊಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.(Viral Video) ಅಚ್ಚರಿ ಎಂದರೆ ಧೋನಿ ಅವರಿಗೆ ತಿಳಿಯದಂತೆ ಈ ಗಗನಸಖಿ(Air hostess) ಫೋಟೊ ತೆಗೆದಿದ್ದಾರೆ.
ಹೌದು ಧೋನಿ ಅವರು ವಿಮಾನದಲ್ಲಿ ಪ್ರಯಾಣಿಸುವ(MS Dhoni sleeping on flight) ವೇಳೆ ನಿದ್ದೆಗೆ ಜಾರಿದ್ದರು. ಇದೇ ವೇಳೆ ಈ ಗಗನಸಖಿ ದೂರದಿಂದಲೇ ಧೋನಿ ಕೂಡ ಕಾಣಿಸಿಕೊಳ್ಳುವಂತೆ ಫೋಟೊ ತೆಗೆದುಕೊಂಡಿದ್ದಾರೆ. ಜತೆಗೆ ಧೋನಿ ನಿದ್ದೆ ಮಾಡುತ್ತಿರುವ ವಿಡಿಯೊವನ್ನು ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೊ ಮತ್ತು ಗಗನಸಖಿಯ ಫೋಟೊ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ MS Dhoni: ಕೂಲ್ ಆಗಿ ರೋಲ್ಸ್ ರಾಯ್ಸ್ ಕಾರು ಓಡಿಸಿದ ಧೋನಿ; ವಿಡಿಯೊ ವೈರಲ್
Cutest video of the day ❤️🫶#MSDhoni pic.twitter.com/7uSSJepSgM
— Chakri Dhoni (@ChakriDhoni17) July 29, 2023
ಗಗನಸಖಿ ನಡೆಗೆ ಮಿಶ್ರ ಪ್ರತಿಕ್ರಿಯೆ
ಧೋನಿ ಅವರ ಈ ವಿಡಿಯೊವನ್ನು ಹಂಚಿಕೊಂಡ ಗಗನಸಖಿ ಬಗ್ಗೆ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಕಂಡು ಸಂತಸಗೊಂಡರೆ, ಇನ್ನೂ ಕೆಲವರು ಕಿಡಿಕಾರಿದ್ದಾರೆ. ಯಾವುದೇ ವ್ಯಕ್ತಿಯ ಗೌಪ್ಯತೆಗೆ ಅಡ್ಡಿಪಡಿಸಬಾರದೆಂದು ಬುದ್ದಿವಾದ ಹೇಳಿದ್ದಾರೆ. ಧೋನಿ ಅವರ ಪಕ್ಕದಲ್ಲಿ ಅವರ ಪತ್ನಿ ಸಾಕ್ಷಿ(Sakshi Dhoni) ಕೂಡ ಕುಳಿತಿರುವುದು ಈ ವಿಡಿಯೊದಲ್ಲಿ ಕಾಣಿಸಿಕೊಂಡಿದೆ. ಆದರೆ ಸಾಕ್ಷಿ ಅವರು ಆರಾಮವಾಗಿ ಹಾಡು ಕೇಳುತ್ತಾ ಕುಳಿತಿದ್ದರು. ಇತ್ತೀಚೆಗೆ ಎಲ್ಜಿಎಂ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಚೆನ್ನೈಗೆ ತೆರಳುವ ವೇಳೆ ಈ ವಿಡಿಯೊ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ಐಪಿಎಲ್ನಲ್ಲಿ ಗಾಯದ ನಡುವೆಯೇ ಪಂದ್ಯಗಳನ್ನಾಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ ಅವರು ಮೊದಲು ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದು ಸದ್ಯ ಪುನಃಶ್ಚೇತನ ತರಬೇತಿಗೆ ಒಳಗಾಗಿದ್ದಾರೆ. ಈ ವಿಚಾರವನ್ನು ಧೋನಿ ಪತ್ನಿ ಬಹಿರಂಗಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧೋನಿ ತಮ್ಮ ತವರಾದ ರಾಂಚಿಯಲ್ಲಿ ತಮ್ಮ ಮಗಳೊಂದಿಗೆ ರೋಲ್ಸ್ ರಾಯ್ಸ್ ವಿಂಟೆಜ್ ಕಾರು ಓಡಿಸಿದ ವಿಡಿಯೊ ವೈರಲ್ ಆಗಿತ್ತು.