Site icon Vistara News

Virat- Anushka: ಕೊಹ್ಲಿ ಮಾಡಿದ ರನೌಟ್​ ಕಂಡು ಆಶ್ಚರ್ಯ ಚಕಿತರಾದ ಅನುಷ್ಕಾ

Virat- Anushka

ಬೆಂಗಳೂರು: ಶನಿವಾರ ನಡೆದ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದ ಆರ್​ಸಿಬಿ 4 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat- Anushka) ಅವರು ಎದುರಾಳಿ ತಂಡದ ಆಟಗಾರ ಶಾರೂಖ್​ ಖಾನ್​ ಅವರನ್ನು ಮಿಂಚಿನ ಎಸೆತದ ಮೂಲಕ ರನೌಟ್​ ಮಾಡಿ ಗಮನಸೆಳೆದರು. ಬುಲೆಟ್​ ಚಿಮ್ಮಿದ ವೇಗದಲ್ಲಿ ರನೌಟ್​ ಮಾಡಿದ್ದನ್ನು ಕಂಡು ಪತ್ನಿ ಅನುಷ್ಕಾ(Anushka Sharma) ದಂಗಾಗಿದ್ದಾರೆ. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.


ಆರಂಭಿಕ ಆಘಾತ ಕಂಡಿದ್ದ ಗುಜರಾತ್​ಗೆ ಶಾರೂಖ್​ ಖಾನ್​ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮೂಲಕ ಆಸರೆಯಾಗಿದ್ದರು. 24 ಎಸೆತಗಳಿಂದ 37 ರನ್​ ಗಳಿಸಿ ನಾನ್​ಸ್ಟ್ರೈಕ್​ನಲ್ಲಿದ್ದ ಶಾರೂಖ್ ಇಲ್ಲದ ರನ್​ ಕದಿಯಲು ಯತ್ನಿಸಿದ ವೇಳೆ ಚಿರತೆ ವೇಗದಲ್ಲಿ ಫೀಲ್ಡಿಂಗ್​ ನಡೆಸಿ ಕೊಹ್ಲಿ ಚೆಂಡನ್ನು ನೇರವಾಗಿ ವಿಕೆಟ್​ಗೆ ಎಸೆದು ರನೌಟ್​ ಮಾಡಿದರು. ಒಂದೊಮ್ಮೆ ಕೊಹ್ಲಿ ಈ ರನೌಟ್​ ಮಾಡದಿದ್ದರೆ ಶಾರೂಖ್​ ಆರ್​ಸಿಬಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆಯೂ ಇತ್ತು.

ಎರಡನೇ ಮಗುವಾದ ಬಳಿಕ ಅನುಷ್ಕಾ ಇದುವರೆಗೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ವಿರಾಟ್​ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಐಪಿಎಲ್​ನ ದ್ವಿತಿಯಾರ್ಧದ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಪತಿಗೆ ಚಿಯರ್ ಅಪ್ ಮಾಡಿದ್ದಾರೆ. ಹಿಂದೆ ಅನೇಕ ಬಾರಿ ಅನುಷ್ಕಾ ಮೈದಾನದಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಬಹುತೇಖ ಪಂದ್ಯಗಳಲ್ಲಿ ಅನುಷ್ಕಾ ಅವರು ಕೊಹ್ಲಿಗೆ ಹುರಿದುಂಬಿಸಿದ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು.

ಇದನ್ನೂ ಓದಿ IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Exit mobile version