Site icon Vistara News

ವಿಶ್ವಕಪ್​ನಲ್ಲೂ ನವೀನ್​ ಉಲ್​ ಹಕ್​ ಬೆಂಬಿಡದ ವಿರಾಟ್​ ಕೊಹ್ಲಿ ಅಭಿಮಾನಿಗಳು

Virat Kohli fans teased Naveen-ul-Haq during the World Cup match

ಧರ್ಮಶಾಲ: 16ನೇ ಆವೃತ್ತಿಯ ಐಪಿಎಲ್​ ವೇಳೆ ವಿರಾಟ್​ ಕೊಹ್ಲಿ(Naveen-ul-Haq and virat kohli) ಜತೆ ಕಿರಿಕ್​ ಮಾಡಿದ್ದ ಅಫಘಾನಿಸ್ತಾನ ಕ್ರಿಕೆಟ್​ ತಂಡದ ಯುವ ವೇಗಿ ನವೀನ್​ ಉಲ್​ ಹಕ್​(Naveen-ul-Haq)ಗೆ ಕೊಹ್ಲಿ ಅಭಿಮಾನಿಗಳು ಮತ್ತೆ ಕಾಡಿದ್ದಾರೆ. ಐಪಿಎಲ್​ ವೇಳೆ ನವೀನ್​ ಯಾವುದೇ ಪಂದ್ಯ ಆಡಲಿಳಿದರೂ ಆಗ ಕೊಹ್ಲಿ ಅಭಿಮಾನಿಗಳು ಜೋರಾಗಿ ಕೊಹ್ಲಿಯ ಹೆಸರನ್ನು ಕೂಗುವ ಮೂಲಕ ನವೀನ್​ಗೆ ಕಾಟ ಕೊಡುತಯ್ತಿದ್ದರು. ಐಪಿಎಲ್ ಮುಗಿದರೂ ಕೊಹ್ಲಿ ಅಭಿಮಾನಿಗಳು ಮಾತ್ರ ನವೀನ್​ ಅವರನ್ನು ಕೆಣಕುವುದನ್ನು ನಿಲ್ಲಿಸಿದಂತೆ ತೋರುತ್ತಿಲ್ಲ.

ಶನಿವಾರ ಧರ್ಮಶಾಲದಲ್ಲಿ ನಡೆದ ವಿಶ್ವಕಪ್​ನ(icc world cup 2023) ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನವೀನ್​ ಉಲ್​ ಹಕ್​ ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಗ್ಯಾಲರಿಯಲ್ಲಿದ್ದ ಕೊಹ್ಲಿ ಅಭಿಮಾನಿಗಳು ಕೊಹ್ಲಿ..ಕೊಹ್ಲಿ ಎಂದು ಜೋರಾಗಿ ಕೂಗುವ ಮೂಲಕ ನವೀನ್​ಗೆ ಪಿತ್ತ ನೆತ್ತಿಗೇರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ(viral video). ಈ ಪಂದ್ಯದಲ್ಲಿ ನವೀನ್​ ಶೂನ್ಯ ಸಂಕಟಕ್ಕೆ ಸಿಲುಕಿದ್ದರು.

24 ವರ್ಷದ ವೇಗಿ ನವೀನ್​ ಉಲ್​ ಹಕ್​ ಅವರು ವಿಶ್ವಕಪ್​ ಬಳಿಕ ಅಂತಾರಾಷ್ಟ್ರೀಯ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದರು. ಟಿ20 ಕ್ರಿಕೆಟ್​ ಕಡೆ ಹೆಚ್ಚಿನ ಗಮನ ನೀಡುವ ಸಲುವಾಗಿ ಅವರು ಏಕದಿನ ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತಿರುವುದಾಗಿ ತಿಳಿಸಿದ್ದರು. ನವೀನ್​ ನಿವೃತ್ತಿ ಘೋಷಿಸುತ್ತಿದ್ದಂತೆ ವಿರಾಟ್​ ಕೊಹ್ಲಿ ಅವರ ಅಭಿಮಾನಿಗಳು ಕಿಂಗ್​ ಕೊಹ್ಲಿಯ ಭಯದಿಂದಲೇ ನಿವೃತ್ತಿ ಪಡೆದಿರುವುದಾಗಿ ಟ್ರೋಲ್​ ಮಾಡಿದ್ದರು.

ಇದನ್ನೂ ಓದಿ IND vs AUS Live: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸೀಸ್​​

ಐಪಿಎಲ್​ ವೇಳೆ ಕೊಹ್ಲಿ ಜತೆ ಕಿರಿಕ್​

ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(virat kohli) ಮತ್ತು ನವೀನ್​ ಉಲ್​-ಹಕ್​ ಮಧ್ಯೆ ಮೈದಾನದಲ್ಲಿಯೇ ಕಿರಿಕ್​ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್​ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್​ ಕೊಹ್ಲಿ ಮತ್ತು ಆರ್​ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್​ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್​ ಅಭಿಮಾನಿಗಳು ಮುಂದುವರಿಸಿದ್ದರು.

ಅಕ್ಟೋಬರ್​ 11ಕ್ಕೆ ಮುಖಾಮುಖಿ

ಭಾರತ ತಂಡ ಅಕ್ಟೋಬರ್​ 11ರಂದು ಅಫಘಾನಿಸ್ತಾನ(India vs Afghanistan, 9th Match) ವಿರುದ್ಧ ವಿಶ್ವಕಪ್​ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಮತ್ತು ನವೀನ್​ ಅವರು ಮುಖಾಮುಖಿಯಾಗುವದನ್ನು ನೋಡಲು ಕೊಹ್ಲಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಪಂದ್ಯ ಕೊಹ್ಲಿಯ ತವರಾದ ಡೆಲ್ಲಿಯಲ್ಲಿ ನಡೆಯಲಿದೆ. ಹೀಗಾಗಿ ನವೀನ್​ ಅವರಿಗೆ ಈ ಪಂದ್ಯದಲ್ಲಿ ಮತ್ತಷ್ಟು ಕಾಟ ಇರುವುದು ಸುಳ್ಳಲ್ಲ.

Exit mobile version