ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 2023ರ ಐಪಿಎಲ್ನಿಂದ ನಿರ್ಗಮಿಸಿದೆ. ಗುಜರಾತ್ ವಿರುದ್ಧ ಆರು ವಿಕೆಟ್ಗಳ ಸೋಲು ಅನುಭವಿಸಿದ ಬಳಿಕ ತಂಡದ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಅಂತೆಯೇ ವಿರಾಟ್ ಕೊಹ್ಲಿಯೂ ಪತ್ನಿ ಅನುಷ್ಕಾ ಶರ್ಮಾ ಜತೆ ಮುಂಬಯಿಗೆ ಮರಳಿದ್ದಾರೆ. ಸೋಲಿನ ಬಳಿಕ ವಿರಾಟ್ ಕೊಹ್ಲಿ ಸಾಕಷ್ಟು ನಿರಾಸೆಗೆ ಒಳಗಾಗಿದ್ದಾರೆ. ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದರೂ ಉಳಿದ ಆಟಗಾರರ ನೆರವು ಸಿಗದ ಕಾರಣ ದೊಡ್ಡ ಮೊತ್ತ ಪೇರಿಸಲು ಆಗಿರಲಿಲ್ಲ. ಹೀಗಾಗಿ ಗುಜರಾತ್ ತಂಡ ಸುಲಭವಾಗಿ ಚೇಸ್ ಮಾಡಿತ್ತು. ಹೀಗಾಗಿ ಕೊಹ್ಲಿ ಬೇಸರದಲ್ಲಿದ್ದಾರೆ. ಈ ರೀತಿಯಾಗಿ ದುಃಖದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಏರ್ಪೋರ್ಟ್ನಲ್ಲಿ ಸಮಾಧಾನ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಸಿಬಿಯ ವೈಫಲ್ಯ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಅಂತೆಯೇ ಕೊಹ್ಲಿಯೂ ಭಾರವಾದ ಮನಸ್ಸಿನಿಂದ ತವರಿಗೆ ಮರಳಿದ್ದಾರೆ. ಅಂತೆಯೇ ಅವರು ಮುಂಬಯಿ ಏರ್ಪೋರ್ಟ್ನಲ್ಲಿ ಇಳಿಯುವಾಗಲೂ ಬೇಸರದಲ್ಲಿದ್ದರು. ಈ ವೇಳೆ ಅನುಷ್ಕಾ ಶರ್ಮಾ ಹಾಸ್ಯ ಮಾಡುತ್ತಾ ವಿರಾಟ್ ಕೊಹ್ಲಿಯನ್ನು ನಗಿಸಲು ಪ್ರಯತ್ನಿಸಿದ್ದರು. ದಂಪತಿ ಫೋಟೋಗ್ರಾಫರ್ಗಳಿಗೆ ಫೋಸ್ ಕೊಡಲಿಲ್ಲ. ಬದಲಾಗಿ ಅವರಿಬ್ಬರೇ ಮಾತನಾಡುತ್ತಾ ನಡೆದರು.
ಅನುಷ್ಕಾ ಭಾನುವಾರ ರಾತ್ರಿ ಪಂದ್ಯದ ವೇಳೆಯೂ ಕ್ರೀಡಾಂಗಣದಲ್ಲಿ ಹಾಜರಿದ್ದರು. ಕೇವಲ 61 ಎಸೆತಗಳಲ್ಲಿ ವಿರಾಟ್ ಕೊಹ್ಲಿ 101 ರನ್ ಬಾರಿಸಿದಾಗ ವಿರಾಟ್ ಅವರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು. ಜತೆಗೆ ಫ್ಲೈಯಿಂಗ್ ಕಿಸ್ ಕೂಡ ಕಳುಹಿಸಿದ್ದರು. ಅನುಷ್ಕಾ ಶರ್ಮಾ ಅವರು ಹಾಲಿ ಋತುವಿನುದ್ದಕ್ಕೂ ವಿರಾಟ್ಗೆ ಅತಿದೊಡ್ಡ ಚಿಯರ್ ಲೀಡರ್ ಆಗಿದ್ದರು.
ಇದನ್ನೂ ಓದಿ: IPL 2023 : ಆರ್ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್ ಉಲ್ ಹಕ್!
ಐಪಿಎಲ್ ಪಂದ್ಯಗಳ ವೇಳೆ ಹಾಜರಿರುವ ಜತೆಗೆ ನಟಿ ಅನುಷ್ಕಾ ಅವರು ತಮ್ಮ ಮುಂಬರುವ ಚಿತ್ರ ಚಕ್ದಾ ಎಕ್ಸ್ಪ್ರೆಸ್ನ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದ್ದರು. ಈ ಚಿತ್ರದಲ್ಲಿ ಅನುಷ್ಕಾ ಅವರು ಭಾರತ ಮಹಿಳಾ ತಂಡದ ಮಾಜಿ ಬೌಲರ್ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ. ಭಾರತಕ್ಕಾಗಿ ಕ್ರಿಕೆಟ್ ಆಡುವ ತನ್ನ ಕನಸನ್ನು ಈಡೇರಿಸಲು ಜೂಲನ್ ಪಟ್ಟಿರುವ ಕಷ್ಟದ ಕತೆಯನ್ನು ಈ ಚಿತ್ರ ಹೊಂದಿದೆ. ಈ ಚಿತ್ರವು ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
ಅನುಷ್ಕಾ ಶರ್ನಾ ಕೊನೆಯ ಬಾರಿಗೆ ಆನಂದ್ ಎಲ್ ರಾಯ್ ಅವರ ಝೀರೋ ಚಿತ್ರದಲ್ಲಿ ಶಾರುಖ್ ಖಾನ್ ಜತೆಯಾಗಿ ಕಾಣಿಸಿಕೊಂಡಿದ್ದರು.