Site icon Vistara News

Virat Kohli: ಕೊಹ್ಲಿ- ಶುಭ್​ಮನ್​ ​ ಡಾನ್ಸ್​ಗೆ ಅಭಿಮಾನಿಗಳು ಪಿಧಾ, ಇಲ್ಲಿದೆ ವಿಡಿಯೊ

Virat kohli

ಕೇಪ್​​ಟೌನ್​: ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರ ಸ್ನೇಹವು ಕಳೆದ ಕೆಲವು ಸಮಯಗಳಿಂದ ಚರ್ಚೆಯ ವಿಷಯವಾಗಿದೆ. ವಿರಾಟ್ ಕೊಹ್ಲಿ ಆಗಾಗ್ಗೆ ತಮ್ಮ ಯುವ ಸಹ ಆಟಗಾರನನ್ನು ವಿನೋದದ ವರ್ತನೆಗಳ ಮೂಲಕ ಮನರಂಜಿಸುತ್ತಾರೆ. ಅಂತೆಯೇ ಶುಭ್​ಮನ್​ ಗಿಲ್​ ಹಾಗೂ ಕೊಹ್ಲಿಯ ಬಂಧ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಿದೆ.

ಕೇಪ್​ಟೌನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್​ನಲ್ಲಿ ಮಹಾರಾಷ್ಟ್ರ ಮತ್ತು ಗೋವಾದ ಕೆಲವು ಭಾಗಗಳಲ್ಲಿ ಜನಪ್ರಿಯವಾದ ಜಾನಪದ ‘ಫುಗಾಡಿ ನೃತ್ಯ’ವನ್ನು ಇಬ್ಬರೂ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಈ ಡಾನ್ಸ್​​ ಅನ್ನು ಮಕ್ಕಳು ಕೂಡ ಕೆಲವೊಮ್ಮೆ ಖುಷಿಗಾಗಿ ಮಾಡುತ್ತಾರೆ. ಹೀಗಾಗಿ ಅಭಿಮಾನಿಗಳ ಗಮನ ಸೆಳೆಯಿತು.

ಮೊದಲ ದಿನದ ಅಂತಿಮ ಸೆಷನ್​ನಲ್ಲಿ ದಕ್ಷಿಣ ಆಫ್ರಿಕಾದ ತಂಡದ ಎರಡನೇ ಇನಿಂಗ್ಸ್​ ವೇಳೆ ಈ ಪ್ರಸಂಗ ನಡೆದಿದೆ. ಇಬ್ಬರೂ ಒಟ್ಟಿಗೆ ಸೇರಿ ಸಣ್ಣ ನೃತ್ಯವನ್ನು ಮಾಡಿಕೊಂಡರು. ಬಳಿಕ ಅವರಿಬ್ಬರೂ ನಗು ಚೆಲ್ಲಿದರು. ಹೀಗಾಗಿ ಇದು ಉಳಿದವರಿಗೂ ನಗು ತರಿಸಿತು.

ಮುಂದಿನ ಕಿಂಗ್​

ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನಲ್ಲಿ ಪ್ರೀತಿಯಿಂದ ‘ಕಿಂಗ್’ ಎಂದು ಕರೆಯಲಾಗುತ್ತದೆ. ಅಂತೆಯೇ ಶುಬ್ಮನ್ ಗಿಲ್ ಅವರನ್ನು ‘ಮುಂದಿನ ಕಿಂಗ್​ ‘ ಎನ್ನಲಾಗುತ್ತಿದೆ. ಅವರ ಅಭಿಮಾನಿಗಳು ಅವರನ್ನು ‘ಪ್ರಿನ್ಸ್’ ಎಂದೂ ಹೇಳುತ್ತಾರೆ. ಆದಾಗ್ಯೂ, ಗಿಲ್ ಈ ಸರಣಿಯಲ್ಲಿ ತಮ್ಮ ಹೆಸರಿಗೆ ತಕ್ಕ ಹಾಗೆ ಆಡಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಲು ಬಯಸಿದರೆ ಹೆಚ್ಚು ಸ್ಥಿರವಾಗಿ ಹೆಜ್ಜೆ ಇಡಬೇಕಾಗಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಏಕೈಕ ಯೋಧರಂತೆ ಕಾಣುತ್ತಿದ್ದಾರೆ. ಮೊದಲ ದಿನ 23 ವಿಕೆಟ್​ಗಳು ಬಿದ್ದ ಪಿಚ್​​ನಲ್ಲಿಯೂ ಬ್ಯಾಟಿಂಗ್​ನಲ್ಲಿ ಭರವಸೆ ಮೂಡಿಸಿದ್ದರು.

ಶ್ರೇಯಾಂಕದಲ್ಲಿ ಭರ್ಜರಿ ಪ್ರಗತಿ ಸಾಧಿಸಿದ ವಿರಾಟ್​ ಕೊಹ್ಲಿ

ಸೆಂಚೂರಿಯನ್: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಐಸಿಸಿ ಪುರುಷರ ಟೆಸ್ಟ್ ಆಟಗಾರರ ಶ್ರೇಯಾಂಕದಲ್ಲಿ ಅಗ್ರ 10 ರೊಳಗೆ ಮರಳಿದ್ದಾರೆ. ಅದೇ ರೀತಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್ ಸೆಂಚೂರಿಯನ್ನಲ್ಲಿ ನಡೆದ ಎರಡು ಪಂದ್ಯಗಳ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಮೊದಲ ಟೆಸ್ಟ್​ನಲ್ಲಿ ತಮ್ಮ ಪಂದ್ಯಶ್ರೇಷ್ಠ ಪ್ರದರ್ಶನದ ನಂತರ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರಿ ಜಿಗಿತವನ್ನು ಸಾಧಿಸಿದ್ದಾರೆ.

2022 ರ ಮಧ್ಯದಲ್ಲಿ ಅಗ್ರ 10ರಿಂದ ಹೊರಗುಳಿದಿದ್ದರು ಕೊಹ್ಲಿ. ದಕ್ಷಿಣ ಆಫ್ರಿಕಾ ವಿರುದ್ದ 38 ಮತ್ತು 76 ರನ್​ಗಳ ನಂತರ ನಾಲ್ಕು ಸ್ಥಾನಗಳನ್ನು ಮೇಲಕ್ಕೇರಿ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ಅಗ್ರ ಶ್ರೇಯಾಂಕದ ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ (864 ಅಂಕಗಳು) ಗಿಂತ 103 ರೇಟಿಂಗ್ ಪಾಯಿಂಟ್​ಗಳಷ್ಟು ಮುಂದಿದ್ದಾರೆ. ಜೋ ರೂಟ್ 859 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್ 820 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : Anushka Sharma : ಎರಡನೇ ಟೆಸ್ಟ್​ ಪಂದ್ಯದ ವೇಳೆ ಸ್ಟೇಡಿಯಮ್​ನಲ್ಲಿ ಕಾಣಿಸಿಕೊಂಡ ಅನುಷ್ಕಾ, ಅಥಿಯಾ

ಕೇಪ್​ಟೌನ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಳಗವನ್ನು ಮುನ್ನಡೆಸುತ್ತಿರುವ ತಂಡವನ್ನು ಮುನ್ನಡೆಸುತ್ತಿರುವ ಎಡಗೈ ಬ್ಯಾಟ್ಸ್ಮನ್ ಎಲ್ಗರ್ 19 ಸ್ಥಾನ ಮೇಲಕ್ಕೇರಿ 17ನೇ ಸ್ಥಾನಕ್ಕೇರಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದ್ದ ಭಾರತದ ಕೆಎಲ್ ರಾಹುಲ್ (11 ಸ್ಥಾನ ಮೇಲೇರಿ 51 ನೇ ಸ್ಥಾನ) ಉತ್ತಮ ಗಳಿಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಎಲ್ಲಾ ಮೂರು ಪಟ್ಟಿಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅಜೇಯ 84 ರನ್ ಗಳಿಸಿ ನಾಲ್ಕು ವಿಕೆಟ್ ಪಡೆದ ಜಾನ್ಸೆನ್, ಬ್ಯಾಟರ್​ಗಳ ಪಟ್ಟಿಯಲ್ಲಿ 13 ಸ್ಥಾನ ಮೇಲಕ್ಕೇರಿ 72 ನೇ ಸ್ಥಾನಕ್ಕೆ ತಲುಪಿದ್ದಾರೆ, ಬೌಲರ್​ಗಳ ಮೂರು ಸ್ಥಾನ ಮೇಲಕ್ಕೇರಿ 22 ನೇ ಸ್ಥಾನಕ್ಕೆ ತಲುಪಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ 13 ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

Exit mobile version