Site icon Vistara News

ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಗೆ ಆಹ್ವಾನ

Virat Kohli and Anushka Sharma 2

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir in Ayodhya) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ(Ayodhya Ram Mandir) ಮಾಡಲಿದ್ದಾರೆ. ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು(Ayodhya Ram Mandir)ಪ್ರಮುಖ ಆಯ್ದ ಗಣ್ಯರಿಗೆ ಮಾತ್ರ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್(Sachin Tendulkar) ಮತ್ತು ಮಹೇಂದ್ರ ಸಿಂಗ್​ ಧೋನಿ ಅವ​ರಿಗೆ ಆಹ್ವಾನವನ್ನು ನೀಡಲಾಗಿತ್ತು. ಇದೀಗ ವಿರಾಟ್​ ಕೊಹ್ಲಿ(Virat Kohli) ಮತ್ತು ಅವರ ಪತ್ನಿ ಬಾಲಿವುಡ್​ ನಟಿ ಅನುಷ್ಕಾ ಶರ್ಮಗೂ(Anushka Sharma) ಆಮಂತ್ರಣ ನೀಡಲಾಗಿದೆ. ವಿರುಷ್ಕಾ ದಂಪತಿ ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ್ದಾರೆ.

ದೇವಾಲಯದ ಟ್ರಸ್ಟ್ ಪ್ರಕಾರ, ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ವಿವಿಧ ದೇಶಗಳ ಸುಮಾರು 100 ಪ್ರತಿನಿಧಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.


ವಿರಾಟ್​ ಕೊಹ್ಲಿ ಸದ್ಯ ಬೆಂಗಳೂರಿನಲ್ಲಿದ್ದು ನಾಳೆ (ಬುಧವಾರ) ನಡೆಯುವ ಅಫಘಾನಿಸ್ತಾನ ಎದುರಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂದೋರ್​ನಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಆಡುವ ಮೂಲಕ ಕೊಹ್ಲಿ 14 ತಿಂಗಳ ಬಳಿಕ ಟಿ20 ಕ್ರಿಕೆಟ್​ಗೆ ಮರಳಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಿಂದ 29 ರನ್​ ಬಾರಿಸಿದ್ದರು.

ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಕೊಹ್ಲಿಗೆ ಚಿನ್ನಸ್ವಾಮಿ ಮೈದಾನ ಹೋಮ್​ ಗ್ರೌಂಡ್​ ಆಗಿದೆ. ಹೀಗಾಗಿ ಅವರು ಮೂರನೇ ಪಂದ್ಯದಲ್ಲಿ ಸಿಡಿಯುವ ಸಾಧ್ಯತೆ ಇದೆ. ಜತೆಗೆ ಅವರಿಗೆ ಈ ಪಂದ್ಯದಲ್ಲಿ ಹಲವು ದಾಖಲೆಯನ್ನು ಬರೆಯುವ ಅವಕಾಶವಿದೆ.

ಇದನ್ನೂ ಓದಿ ಶ್ರೀರಾಮನ ಚಿತ್ರ ಬರೆದು ರಾಮಮಂದಿರ ಉದ್ಘಾಟನೆಗೆ ಶುಭ ಕೋರಿದರೇ ಕ್ರಿಕೆಟಿಗ ಕುಲದೀಪ್ ಯಾದವ್?

ವಿಶೇಷವಾಗಿ ಶುಕ್ಲ ಪಕ್ಷ ಮತ್ತು ದ್ವಾದಶಿ ತಿಥಿ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ದಿನ. ಶುಕ್ಲ ಪಕ್ಷವು ಚಂದ್ರನ ಬೆಳವಣಿಗೆಯ ಹಂತವಾಗಿದೆ. ಇದು ಚಂದ್ರನ ಹೆಚ್ಚುತ್ತಿರುವ ಪ್ರಕಾಶದೊಂದಿಗೆ ಸಂಬಂಧಿಸಿದೆ. ಬೆಳವಣಿಗೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ಹೊಸ ಉದ್ಯಮಗಳು, ಯೋಜನೆಗಳು ಅಥವಾ ಸಮಾರಂಭಗಳನ್ನು ಪ್ರಾರಂಭಿಸಲು ಶುಕ್ಲ ಪಕ್ಷ ಅತ್ಯಂತ ಮಂಗಳಕರ. ದ್ವಾದಶಿ ತಿಥಿಯು ಸ್ಥಿತಿಕರ್ತನಾದ, ರಕ್ಷಕನಾದ ಭಗವಾನ್ ವಿಷ್ಣುವಿಗೆ ಸಂಬಂಧಿಸಿದೆ. ಭಗವಾನ್ ರಾಮನು ವಿಷ್ಣುವಿನ ಏಳನೆಯ ಮತ್ತು ಅತ್ಯಂತ ಜನಪ್ರಿಯ ಅವತಾರ. ಈ ತಿಥಿಯಂದು ಮಂದಿರವನ್ನು ಉದ್ಘಾಟನೆ ಮಾಡುವುದು ವಿಷ್ಣುವಿನ ದೈವಿಕ ಉಪಸ್ಥಿತಿಯನ್ನು ಆಹ್ವಾನಿಸುವ ಸಂಕೇತ.

Exit mobile version