ಕೊಲಂಬೊ: ಏಷ್ಯಾಕಪ್ 2023ರ ಸೂಪರ್ 4 ಪಂದ್ಯದಲ್ಲಿ (Asia Cup 2023) ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat kohli) ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 13,000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು 267 ಇನಿಂಗ್ಸ್ಗಳಲ್ಲಿ ಈ ದಾಖಲೆ ಮಾಡಿದ್ದಾರೆ. 321 ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ ಸಚಿನ್ ತೆಂಡೂಲ್ಕರ್ (Sachin tendulkar) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಸೆನ್ಸೇಷನ್ ಸ್ವರೂಪದಲ್ಲಿ ವೇಗವಾಗಿ 8, 9, 10, 11 ಮತ್ತು 12 ಸಾವಿರ ರನ್ ಗಳಿಸಿದ ಆಟಗಾರ. ಇದಲ್ಲದೆ, ಕೊಹ್ಲಿ ತಮ್ಮ 112ನೇ 50 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ. ಈ ಮೂಲಕ ಕುಮಾರ್ ಸಂಗಕ್ಕಾರ (118) ಮತ್ತು ಸಚಿನ್ ತೆಂಡೂಲ್ಕರ್ (145) ನಂತರದ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ 94 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಬಾರಿಸಿ 122* ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಕೆ.ಎಲ್. ರಾಹುಲ್ ಉತ್ತಮ ಬೆಂಬಲ ನೀಡಿದರು, ಅವರು ಪುನರಾಗಮನದಲ್ಲಿ ಅದ್ಭುತ ಶತಕವನ್ನು ಗಳಿಸಿದರು (106 ಎಸೆತಗಳಲ್ಲಿ 111* ರನ್). ಇವರಿಬ್ಬರು 193 ಎಸೆತಗಳಲ್ಲಿ 233 ರನ್ಗಳಿ ಬೃಹತ್ ಜೊತೆಯಾಟದಲ್ಲಿ ಪಾಲ್ಗೊಂಡರು. ಭಾರತ ತಂಡದಕ್ಕೆ ನಿಗದಿತ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಲು ಸಹಾಯ ಮಾಡಿದ್ದಾರೆ.
ಕೊಲೊಂಬೊದಲ್ಲಿ ನಾಲ್ಕನೇ ಶತಕ
ವಿರಾಟ್ ಕೊಹ್ಲಿಗೆ ಕೊಲೊಂಬೊ ಸ್ಟೇಡಿಯಮ್ ಎಂದರೆ ಅಚ್ಚುಮೆಚ್ಚು. ಈ ಹಿಂದೆ ಈ ಕ್ರೀಡಾಂಗಣದಲ್ಲಿ ಸತತ 3 ಶತಕಗಳನ್ನು ಬಾರಿಸಿದ್ದ ಅವರು ಇದೀಗ ಮತ್ತೊಂದು ಶತಕ ಬಾರಿಸಿದರು. ಇದು ಅವರು ಸತತ ನಾಲ್ಕನೇ ಶಕತವಾಗಿದೆ. ಈ ಮೂಲಕ ಅವರು ಕೊಲೊಂಬೊ ಸ್ಟೇಡಿಯಮ್ನ ರಾಜ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : Virat Kohli : ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದ ವಿರಾಟ್ ಕೊಹ್ಲಿ
ಕೊಲೊಂಬೊದ ಮಳೆ ಹಾಗೂ ಮೋಡ ಕವಿದ ವಾತಾರವಣದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ತಮ್ಮ ಅರ್ಧಶತಕವನ್ನು ತಲುಪಲು ಕೇವಲ 55 ಎಸೆತಗಳನ್ನು ತೆಗೆದುಕೊಂಡರು ಮತ್ತು ನಂತರ ಸಿಕ್ಸರ್ ಮತ್ತು ಬೌಂಡರಿ ಸಿಕ್ಸರ್ಗಳ ಮೂಲಕ ರನ್ ಗಳಿಕೆಗೆ ವೇಗ ಕೊಟ್ಟರು.
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್
145 – ಸಚಿನ್ ತೆಂಡೂಲ್ಕರ್
118 – ಕುಮಾರ ಸಂಗಕ್ಕಾರ
112 – ವಿರಾಟ್ ಕೊಹ್ಲಿ*
112 – ರಿಕಿ ಪಾಂಟಿಂಗ್
103 – ಜಾಕ್ ಕಾಲಿಸ್
ಏಕ ದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರು
- ಸಚಿನ್ ತೆಂಡೂಲ್ಕರ್ 463 ಇನಿಂಗ್ಸ್ 18426 ರನ್
- ಕುಮಾರ ಸಂಗಕ್ಕಾರ 404 ಇನಿಂಗ್ಸ್ 14234 ರನ್
- ರಿಕಿ ಪಾಂಟಿಂಗ್ 365 ಇನಿಂಗ್ಸ್ 13704 ರನ್
- ಸನತ್ ಜಯಸೂರ್ಯ 445 13430 ರನ್
- ವಿರಾಟ್ ಕೊಹ್ಲಿ 278ಇನಿಂಗ್ಸ್ 13001 ರನ್
ಏಕದಿನ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರು
6- ಸನತ್ ಜಯಸೂರ್ಯ
4- ವಿರಾಟ್ ಕೊಹ್ಲಿ
4- ಕುಮಾರ ಸಂಗಕ್ಕಾರ
3- ಶೋಯೆಬ್ ಮಲಿಕ್
ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿದ್ದಾರೆ. ಅವರು 9 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸಿ ಭಾರತಕ್ಕೆ 356 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಲು ಸಹಾಯ ಮಾಡಿದರು. ಕೊನೆಯಲ್ಲಿ ಕೊಹ್ಲಿ 2 ಬೌಂಡರಿಗಳನ್ನು ಬಾರಿಸಿದರು. ನಂತರ ಭಾರತದ ಇನ್ನಿಂಗ್ಸ್ ಅನ್ನು ಬೃಹತ್ ಸಿಕ್ಸರ್ ನೊಂದಿಗೆ ಕೊನೆಗೊಳಿಸಿದರು.