Site icon Vistara News

Virat Kohli Birthday: 35ನೇ ವರ್ಷಕ್ಕೆ ಕಾಲಿಟ್ಟ ವಿರಾಟ್​ ಕೊಹ್ಲಿಯ ಸಾಧನೆಗಳು…

virat kohli birthday

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ದಾಖಲೆಗಳ ಸರದಾರ, ಕಿಂಗ್​ ಖ್ಯಾತಿಯ(king kohli) ವಿರಾಟ್​ ಕೊಹ್ಲಿ(Virat Kohli) ಅವರಿಗೆ ಇಂದು(ನವೆಂಬರ್​ 5) 35ನೇ ವರ್ಷದ ಹುಟ್ಟುಹಬ್ಬದ(Virat Kohli Birthday) ಸಂಭ್ರಮ. 15 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕು ಪೂರೈಸಿರುವ ಅವರು(virat kohli cricket journey) ತಮ್ಮ ಈ ಕ್ರಿಕೆಟ್​ ಬಾಳ್ವೆಯಲ್ಲಿ ಅನೇಕ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಮುರಿದಿದ್ದಾರೆ. ಇನ್ನೂ ಕೂಡ ಕೆಲ ವರ್ಷಗಳು ಭಾರತ ತಂಡದ ಪರ ಆಡಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

ನವೆಂಬರ್​ 5, 1988ರಲ್ಲಿ ದೆಹಲಿಯಲ್ಲಿ ಜನಿಸಿದ ವಿರಾಟ್​ ಕೊಹ್ಲಿ ಅವರು ತಮ್ಮ ಶಾಲಾ ದಿನಗಳ ಅವಧಿಯಲ್ಲೇ ಉತ್ತಮ ಕ್ರಿಕೆಟ್​ ಪಟುವಾಗಿದ್ದರು. ಕ್ರಿಕೆಟ್​ನಲ್ಲಿ ಹೆಚ್ಚು ಗಮನ ಹರಿಸಿದ ಕಾರಣ ಅವರು ವಿದ್ಯಾಭ್ಯಾಸವನ್ನು 12ನೇ ತರಗತಿಗೆ ನಿಲ್ಲಿಸಿದರು. ಕೊಹ್ಲಿ ಆತ್ಮವಿಶ್ವಾಸ, ಒತ್ತಡದ ಸಂದರ್ಭ ಎದುರಿಸೋ ಸಮಾರ್ಥ್ಯ, ಕಠಿಣ ಅಭ್ಯಾಸ ಕೊಹ್ಲಿಯನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ತಂದೆಯ ಸಾವಿನ ನೋವಿನಲ್ಲಿಯೂ ತಂಡಕ್ಕಾಗಿ ಆಡಿದ್ದ ಕೊಹ್ಲಿ

2006ರಲ್ಲಿ ಕೊಹ್ಲಿ ದೆಹಲಿ ರಣಜಿ ತಂಡದ ಸದಸ್ಯ. ದಹೆಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕೊಹ್ಲಿಯ ಭವಿಷ್ಯ ಕೂಡ ಇದೇ ಟೂರ್ನಿಯಲ್ಲಿತ್ತು. ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಅಜೇಯ 40 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಮರುದಿನಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದ ಕೊಹ್ಲಿಗೆ ಬೆಳ್ಳಂಬೆಳಗ್ಗೆ ಆಘಾತ ಕಾದಿತ್ತು.

ಮುಂಜಾನೆ 3 ಗಂಟೆಗೆ ಕೊಹ್ಲಿ ತಂದೆ ಅಸ್ವಸ್ಥರಾಗಿದ್ದರು. ಸಹಾಯಕ್ಕೆ ಹತ್ತಿರದವರನ್ನ ಕೂಗಿದರು. ಸಮಯಕ್ಕೆ ಸರಿಯಾಗಿ ಯಾರಿಂದಲೂ ಸಹಾಯ ಸಿಗಲಿಲ್ಲ. ಕೊಹ್ಲಿ ತಂದೆ ಸಾವನ್ನಪ್ಪಿದ್ದರು. ಕೊಹ್ಲಿಗೆ ದಿಕ್ಕೇ ತೋಚದಂತಾಯಿತು. ಬೆಳಗ್ಗೆ 9 ಗಂಟೆಗೆ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಬೇಕು. ಇತ್ತ ತಂದೆಯ ಸಾವು. ಅತ್ತ ರಣಜಿ ಪಂದ್ಯ. ಈ ಸಂದರ್ಭವನ್ನು ಕೊಹ್ಲಿ ಎದುರಿಸಿದಂತೆ ಇನ್ನಾರಿಂದಲೂ ಸಾಧ್ಯವಿಲ್ಲ. ತಂದೆಯ ಸಾವಿನ ನಡುವೆಯೂ ಕೊಹ್ಲಿ ಬ್ಯಾಟಿಂಗ್​ ಮುಂದುವರಿಸಿದ್ದರು. ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ಇದನ್ನೂ ಓದಿ Virat Kohli Birthday: 35ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ​ಕೊಹ್ಲಿ; ಶುಭಾಶಯಗಳ ಸುರಿಮಳೆ

ಲಂಕಾ ವಿರುದ್ಧ ಪದಾರ್ಪಣೆ

ವಿರಾಟ್​ ಕೊಹ್ಲಿ ಅವರು ಆಗಸ್ಟ್​ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್​-19 ವಿಶ್ವಕಪ್​ ಗೆದ್ದಿದ್ದ ಅವರಿಗೆ ಸಚಿನ್​ ತೆಂಡೂಲ್ಕರ್​ ಮತ್ತು ವೀರೇಂದ್ರ ಸೆಹವಾಗ್​ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್​ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್​ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್​ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.

ಇದನ್ನೂ ಆಸೀಸ್​-ಪಾಕ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಬವುಮಾ ಪಡೆ ಸೆಮಿಗೆ ಲಗ್ಗೆ

ಅಂಡರ್​ 19 ವಿಶ್ವಕಪ್​ ವಿಜೇತ ನಾಯಕ

ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಹಿರಿಮೆಯೂ ವಿರಾಟ್​ ಪಾಲಿಗಿದೆ. 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂಡರ್‌-19ನೇ ವಿಶ್ವಕಪ್‌ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಡಿ-ಎಲ್‌ ನಿಯಮದಂತೆ 12 ರನ್ನುಗಳಿಂದ ಮಣಿಸಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ವಿರಾಟ್ ಅವರು ಇಂದು ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ ಅವರ ಪಾಲಿಗೆ ಇದು ಶ್ರೇಷ್ಠ ಟೂರ್ನಿಯಾಗಿದೆಯಂತೆ. ಹಿಂದೊಮ್ಮೆ ಅವರು ಈ ಮಾತನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದರು. “ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿ ತನ್ನ ವೃತ್ತಿ ಬದುಕಿನ ಪ್ರಮುಖ ಮೈಲುಗಲ್ಲು. ನನಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತು ಕ್ರಿಕೆಟ್‌ ರಂಗದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿಯೇ ಆ ಪಂದ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ’ ಎಂದು ಕೊಹ್ಲಿ ಹೇಳಿದ್ದರು.

ಹಲವು ಪ್ರಶಸ್ತಿಗಳ ಒಡೆಯ

ಕೊಹ್ಲಿ 2012, 2017, 2018ರಲ್ಲಿ ಐಸಿಸಿ ವರ್ಷದ ಏಕದಿನ ಆಟಗಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಏತನ್ಮಧ್ಯೆ, ಅವರು 2017 ಮತ್ತು 2018 ರಲ್ಲಿ ಐಸಿಸಿ ವರ್ಷದ ಕ್ರಿಕೆಟ್​ ಸಾಧನೆಗಾಗಿ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

Exit mobile version