Virat Kohli Birthday: 35ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ​ಕೊಹ್ಲಿ; ಶುಭಾಶಯಗಳ ಸುರಿಮಳೆ - Vistara News

ಕ್ರಿಕೆಟ್

Virat Kohli Birthday: 35ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ​ಕೊಹ್ಲಿ; ಶುಭಾಶಯಗಳ ಸುರಿಮಳೆ

ವಿರಾಟ್​ ಕೊಹ್ಲಿ ಅವರ ಜನ್ಮದಿನಕ್ಕೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯ ಕೋರಿದ್ದಾರೆ.

VISTARANEWS.COM


on

Virat Kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.(Virat Kohli Birthday) ಅವರ ಜನ್ಮದಿನಕ್ಕೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯ ಕೋರಿದ್ದಾರೆ. ಇನ್ನೂ ಕೂಡ ಕ್ರಿಕೆಟ್​ನಲ್ಲಿ ಮಹೋನ್ನತ ಸಾಧನೆ ಮಾಡುವಂತಾಗಲಿ ಎಂದು ಹರಸಿದ್ದಾರೆ.

ಬಿಸಿಸಿಐ ವಿರಾಟ್​ ಕೊಹ್ಲಿಗೆ ವಿಶೇಷವಾಗಿ ಶುಭ ಹಾರೈಸಿದೆ. “514 ಪಂದ್ಯಗಳು ಮತ್ತು ಎಣಿಕೆ 🙌 26,209 ರನ್ ಮತ್ತು ಎಣಿಕೆ” ಎಂದು ಬರೆದು ಹಾರೈಸಿದೆ. ಜತೆಗೆ 2011ರ ವಿಶ್ವಕಪ್​ನಿಂದ 2013ರ ಚಾಂಪಿಯನ್ಸ್​ ಟ್ರೋಫಿ ವಿನ್ನರ್​ ಎಂದು ಬರೆದು “ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬ್ಯಾಟರ್‌ ಕಿಂಗ್​ ಕೊಹ್ಲಿಗೆ ಜನ್ಮದಿನದ ಶುಭಾಶಯಗಳು” ಎಂದು ಬಿಸಿಸಿಐ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಶುಭ ಕೋರಿದೆ

ಮಾಜಿ ಆಟಗಾರರಾದ ಸಚಿನ್​ ತೆಂಡೂಲ್ಕರ್​, ವಿರೇಂದ್ರ ಸೆಹವಾಗ್​, ಎಬಿಡಿ ವಿಲಿಯರ್ಸ್​, ಕಾಮೆಂಟ್ರೇಟರ್​ ಹರ್ಷ ಬೋಗ್ಲೆ, ರಾಯಲ್​ ಚಾಲೆಂಜ್​ ಬೆಂಗಳೂರು ಸೇರಿ ಅನೇಕರು ಕೊಹ್ಲಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ ಆಸೀಸ್​-ಪಾಕ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಬವುಮಾ ಪಡೆ ಸೆಮಿಗೆ ಲಗ್ಗೆ

70 ಸಾವಿರ ಮಾಸ್ಕ್​ ವಿತರಣೆ

ವಿರಾಟ್​ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್‌ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್​ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶವಾಗಿದೆ. ಇದು ಮಾತ್ರವಲ್ಲದೆ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಕೇಕ್‌ ಕತ್ತರಿಸುವ ಯೋಜನೆಯನ್ನೂ ಬಂಗಾಳ ಸಂಸ್ಥೆ ಮಾಡಿದೆ.

ಕೊಹ್ಲಿ ಸಾಧನೆ

ವಿರಾಟ್ ಕೊಹ್ಲಿ ಅವರು ಇದುವರೆಗೆ ಒಟ್ಟು 288* ಏಕದಿನ ಪಂದ್ಯಗಳನ್ನು ಆಡಿ 58.27 ರ ಸರಾಸರಿಯಲ್ಲಿ 13,525 ರನ್ ಗಳಿಸಿದ್ದಾರೆ. ಇದರಲ್ಲಿ 48* ಶತಕ ಮತ್ತು 71 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್​ನಲ್ಲಿ 111 ಪಂದ್ಯಗಳಲ್ಲಿ 8676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 26,209 ರನ್ ಬಾರಿಸಿದ್ದಾರೆ.

ಸಚಿನ್ ದಾಖಲೆ ಸರಿಗಟ್ಟಲಿದ್ದಾರಾ ಕೊಹ್ಲಿ?

ಇದೇ ಆವೃತಿಯ ವಿಶ್ವಕಪ್​ನಲ್ಲಿ ಮೂರು ಶತಕ ವಂಚಿತವಾಗಿರುವ ವಿರಾಟ್​ ಕೊಹ್ಲಿ ಸದ್ಯ 48 ಏಕದಿನ ಶತಕ ಬಾರಿಸಿದ್ದಾರೆ. ತಮ್ಮ ಜನ್ಮದಿದಂದೇ ಶತಕ ಬಾರಿಸಿ ಸಚಿನ್​ ತೆಂಡೂಲ್ಕರ್​ ಅವರ ಸರ್ವಾಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಲಿದ್ದಾರಾ ಎಂಬುವುದು ಪಂದ್ಯದ ಕುತೂಹಲ. ಶತಕ ಬಾರಿಸಲಿ ಎನ್ನುವುದು ಕೊಹ್ಲಿ ಅಭಿಮಾನಿಗಳ ಆಶಯವಾಶ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

T20 World Cup 2024 Super 8: ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಅಮೆರಿಕ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ಸೂಪರ್​-8ಗೆ ಪ್ರವೇಶ ಪಡೆದ ತಂಡಗಳು. ಇನ್ನುಳಿದ 2 ಸ್ಥಾನಕ್ಕೆ ಸ್ಕಾಟ್ಲೆಂಡ್​, ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್​ ವಿರುದ್ಧ ತೀವ್ರ ಪೈಪೋಟಿ ಏರ್ಪಟ್ಟಿದೆ.

VISTARANEWS.COM


on

T20 World Cup 2024 Super 8
Koo

ನ್ಯೂಯಾರ್ಕ್​: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಹಲವು ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಸದ್ಯ 6 ತಂಡಗಳು ಸೂಪರ್​ 8 ಹಂತಕ್ಕೆ ಪ್ರವೇಶ ಪಡೆದಿವೆ. ಇನ್ನುಳಿದ 4 ಸ್ಥಾನಗಳಿಗೆ ಮೂರು ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಕ್ಕೂ ಮುನ್ನವೇ ಐಸಿಸಿ ಸೂಪರ್​-8 ಹಂತದ ವೇಳಾಪಟ್ಟಿಯನ್ನು(T20 World Cup 2024 Super 8) ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಲಿದೆ.

ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ಅಮೆರಿಕ, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್​ ಸೂಪರ್​-8ಗೆ ಪ್ರವೇಶ ಪಡೆದ ತಂಡಗಳು. ಇನ್ನುಳಿದ 2 ಸ್ಥಾನಕ್ಕೆ ಸ್ಕಾಟ್ಲೆಂಡ್​, ಇಂಗ್ಲೆಂಡ್​, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್​ ವಿರುದ್ಧ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸೂಪರ್​-8ನಲ್ಲಿ ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ಮತ್ತು ‘ಡಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗುವ ತಂಡ ಕಾದಾಟ ನಡೆಸಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಸೂಪರ್​-8 ಪಂದ್ಯಗಳು ಜೂನ್​ 19ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಡಿ 2(ಡಿ ಗುಂಪಿನ 2ನೇ ಸ್ಥಾನಿ)ಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ

ಭಾರತಕ್ಕೆ ಇಂದು ಕೊನೆಯ ಲೀಗ್​ ಪಂದ್ಯ


ಟೀಮ್​ ಇಂಡಿಯಾ(IND vs CAN) ತನ್ನ ಅಂತಿಮ ಲೀಗ್ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಶನಿವಾರ) ನಡೆಯುವ ಪಂದ್ಯದಲ್ಲಿ ಕೆನಾಡ ವಿರುದ್ಧ ಕಣಕ್ಕಿಳಿಯಲಿದೆ. ಈಗಾಗಲೇ ಸೂಪರ್​-8ಗೆ ಪ್ರವೇಶ ಪಡೆದಿರುವ ಕಾರಣ ರೋಹಿತ್​ ಪಡೆಗೆ ಇದೊಂದು ​ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಆದರೆ ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.

ಇದೇ ಮೈದಾನದಲ್ಲಿ ಶುಕ್ರವಾರ ನಡೆಯಬೇಕಿದ್ದ 2 ಪಂದ್ಯಗಳು ಕೂಡ ಒಂದು ಎಸೆತ ಕಾಣದೆ ರದ್ದಾಗಿತ್ತು. ಇಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು. ಇಂದು ಕೂಡ ಭಾರೀ ಮಳೆ(IND vs CAN weather report) ಬೀಳುವ ಸಾಧ್ಯತೆ ಇದೆ. 2 ದಿನಗಳ ಹಿಂದೆಯೇ ಹವಾಮಾನ ಇಲಾಖೆ ಈ ಕುರಿತು ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಪಂದ್ಯ ನಡೆದರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಹಲವು ಮಹತ್ವದ ಬದಲಾವಣೆ ಮಾಡುವುದು ನಿಶ್ಚಿತ.

Continue Reading

ಕ್ರೀಡೆ

India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

India Coach: ಕುಂಬ್ಳೆ ಭಾರತ ತಂಡದ ಕೋಚ್​ ಆದ ಸಂದರ್ಭದಲ್ಲಿ ಆಟಗಾರರ ಎಲ್ಲ ಪಾರ್ಟಿಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ ಆಟಗಾರರಿಗೆ ಕುಂಬ್ಳೆ ಜತೆ ಮನಸ್ತಾಪ ಉಂಟಾಗಿತ್ತು. ಬಳಿಕ ಕುಂಬ್ಳೆ ಅವರು ಅರ್ಧದಿಂದಲೇ ತಮ್ಮ ಕೋಚ್​ ಹುದ್ದೆಯನ್ನು ತೊರೆದಿದ್ದರು.

VISTARANEWS.COM


on

India Coach
Koo

ಮುಂಬಯಿ: ರಾಹುಲ್​ ದ್ರಾವಿಡ್(Rahul Dravid)​ ಅವರು ಟಿ20 ವಿಶ್ವಕಪ್​ ಬಳಿಕ ಟೀಮ್​ ಇಂಡಿಯಾದ ಕೋಚ್(India Coach)​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನೂತನ ಕೋಚ್​ ಆಗಿ ಗೌತಮ್​ ಗಂಭೀರ್​(Gautam Gambhir) ಅವರು ಆಯ್ಕೆಯಾಗುತ್ತಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಗಂಭೀರ್ ಅವರ ಮಾರ್ಗದರ್ಶನದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಐಪಿಎಲ್​ (IPL 2024) ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಕೋಚ್​ ಅನಿಲ್ ಕುಂಬ್ಳೆ(Anil Kumble) ಅವರು ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದು ಸಂಪೂರ್ಣವಾಗಿ ವಿಭಿನ್ನ ಸವಾಲು ಎಂದು ಹೇಳಿದ್ದಾರೆ.

ಕ್ರಿಕ್​ಇನ್ಫೊ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕುಂಬ್ಳೆ, ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದರೂ ಕೂಡ ರಾಷ್ಟ್ರೀಯ ತಂಡದ ಮಾರ್ಗದರ್ಶನ, ತರಬೇತಿ ಅತ್ಯಂತ ವಿಭಿನ್ನವಾಗಿದೆ. ಈ ಸವಾಲು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಕುಂಬ್ಳೆ ಅವರು ಈ ಮಾತನ್ನು ಹೇಳಲು ಕೂಡ ಒಂದು ಕಾಣವಿದೆ.

ಕುಂಬ್ಳೆ ಭಾರತ ತಂಡದ ಕೋಚ್​ ಆದ ಸಂದರ್ಭದಲ್ಲಿ ಆಟಗಾರರ ಎಲ್ಲ ಪಾರ್ಟಿಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ ಆಟಗಾರರಿಗೆ ಕುಂಬ್ಳೆ ಜತೆ ಮನಸ್ತಾಪ ಉಂಟಾಗಿತ್ತು. ಬಳಿಕ ಕುಂಬ್ಳೆ ಅವರು ಅರ್ಧದಿಂದಲೇ ತಮ್ಮ ಕೋಚ್​ ಹುದ್ದೆಯನ್ನು ತೊರೆದಿದ್ದರು. ಗಂಭೀರ್​ ಕೂಡ ನೇರ ನುಡಿ ಮತ್ತು ತಂಡದ ಯಶಸ್ಸಿಗಾಗಿ ಕೆಲ ಕಠಿಣ ನಿರ್ಧಾರ ಕೈಗೊಳ್ಳುವ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಕುಂಬ್ಳೆ ಅವರು ಗಂಭೀರ್​ಗೆ ಕೋಚ್​ ಆಗುವ ಮುನ್ನವೇ ಸಲಹೆಯೊಂದನ್ನು ನೀಡಿದಂತಿದೆ.

ಇದನ್ನೂ ಓದಿ Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

ದ್ರಾವಿಡ್​ ಕೋಚಿಂಗ್​ ಬಗ್ಗೆ ಮಾತನಾಡಿದ ಕುಂಬ್ಳೆ, “ದ್ರಾವಿಡ್​ ತಮ್ಮ ಕೋಚಿಂಗ್​ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ವಿಶ್ವಕಪ್​ ಗೆಲ್ಲದಿದ್ದರೂ ಕೂಡ ತಂಡದ ಪ್ರದರ್ಶನ ಮಾತ್ರ ಅದ್ಭುತವಾಗಿತ್ತು. ಫೈನಲ್​ ತನಕ ಬಂದ ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ದ್ರಾವಿಡ್​ ಉತ್ತಮ ಆಟಗಾರರನ್ನು ಸಂಘಟಿಸಿ ಗುಣಮಟ್ಟದ ಕ್ರಿಕೆಟ್​ ಆಡುವಂತೆ ಮಾಡಿದ್ದಾರೆ” ಎಂದು ದ್ರಾವಿಡ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಂಗೂಲಿ ಕೂಡ ಸಾಥ್​

ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ(Sourav Ganguly) ಕೂಡ ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್​ಗೆ ಬೆಂಬಲ ಸೂಚಿಸಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Continue Reading

ಕ್ರೀಡೆ

Pakistan Team Troll: ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಪಾಕ್​ಗೆ ಟ್ರೋಲ್​ಗಳ ಛಡಿಯೇಟು

Pakistan cricket team: 2009ರ ಟಿ-20 ವಿಶ್ವಕಪ್‌ ಚಾಂಪಿಯನ್‌ ಆಗಿರುವ ಪಾಕಿಸ್ತಾನವು 2022ರ ಟಿ-20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿ, ರನ್ನರ್‌ ಅಪ್‌ ಆಗಿತ್ತು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲಿಯೇ ಮನೆಯ ದಾರಿ ಹಿಡಿದಿದೆ. 2007ರಿಂದಲೂ ಟಿ-20 ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನವು ಒಮ್ಮೆಯೂ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದಿರಲಿಲ್ಲ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಹೊರಬೀಳುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗದೆ.

VISTARANEWS.COM


on

Pakistan cricket team
Koo

ಬೆಂಗಳೂರು: ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯಲ್ಲಿ ಲೀಗ್​ ಹಂತದಲ್ಲೇ ಮುಗ್ಗರಿಸಿ ತವರಿಗೆ ಗಂಟುಮೂಟೆ ಕಟ್ಟಿದೆ. ಇದೀಗ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಪಾಕ್​ ಅಭಿಮಾನಿಯೊಬ್ಬ ಬೇಸರದಲ್ಲಿ ಪಾಕ್​ ತಂಡದ ಜೆರ್ಸಿಯನ್ನು ಮಡಚಿ ಗೋದ್ರೇಜ್​ ಒಳಗಡೆ ಇಟ್ಟು ಜೋರಾಗಿ ಅಳುತ್ತಿರುವ ಮತ್ತು ಕೆನಡಾ, ಅಮೆರಿಕ, ಭಾರತ, ಐರ್ಲೆಂಡ್​ ಮತ್ತು ಅಫಘಾನಿಸ್ತಾನ ತಂಡದ ನಾಯಕರು ಪಾಕ್​ ನಾಯಕ ಬಾಬರ್​ ಅಜಂ ಅವರನ್ನು ಶವ ಹೊತ್ತಂತೆ ಹೊತ್ತು ಸಾಗುತ್ತಿರುವ ಮಿಮ್ಸ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತಕ್ಕೆ ಬೆಂಬಲ ಸೂಚಿಸಿದ ಪಾಕ್​ ಅಭಿಮಾನಿ


ಪಾಕಿಸ್ತಾನ ತಂಡ ಹೊರಬಿದ್ದ ಬೇಸರದ ಮಧ್ಯೆಯೂ ಫರೀದ್​ ಖಾನ್​ ಎನ್ನುವ ಪಾಕ್​ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದಾನೆ. ಟೀಮ್​ ಇಂಡಿಯಾದ ಜೆರ್ಸಿ ಹಿಡಿದುಕೊಂಡ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡು, ಭಾರತ ಕಪ್​ ಗೆಲ್ಲಲಿ ಎಂದಿದ್ದಾನೆ. ‘ನನ್ನ 2ನೇ ನೆಚ್ಚಿನ ತಂಡದವಾದ ಭಾರತಕ್ಕೆ ಚಿಯರ್​ ಅಪ್​ ಮಾಡಲು ಈಗ ಸಮಯ ಬಂದಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಭಾರತ ಉತ್ತಮವಾಗಿ ಆಡಿ ಕಪ್​ ಗೆಲ್ಲುವಂತಾಗಲಿ’ ಎಂದು ಶುಭ ಹಾರೈಸಿದ್ದಾನೆ.

ಇದನ್ನೂ ಓದಿ IND vs CAN: ಇಂದು ಭಾರತ-ಕೆನಡಾ ಪಂದ್ಯ ಅನುಮಾನ; ಭಾರೀ ಮಳೆ ಎಚ್ಚರಿಕೆ ನೀಡಿದ ಹಮಾಮಾನ ಇಲಾಖೆ


ಮತ್ತೆ ಬಾಬರ್​ ತಲೆದಂಡ?


ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ ಪಾಕ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಮತ್ತೆ ಬಾಬರ್​ ಅವರ ತಲೆದಂಡವಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

2009ರ ಟಿ-20 ವಿಶ್ವಕಪ್‌ ಚಾಂಪಿಯನ್‌ ಆಗಿರುವ ಪಾಕಿಸ್ತಾನವು 2022ರ ಟಿ-20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿ, ರನ್ನರ್‌ ಅಪ್‌ ಆಗಿತ್ತು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲಿಯೇ ಮನೆಯ ದಾರಿ ಹಿಡಿದಿದೆ. 2007ರಿಂದಲೂ ಟಿ-20 ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನವು ಒಮ್ಮೆಯೂ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದಿರಲಿಲ್ಲ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಹೊರಬೀಳುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗದೆ.

Continue Reading

ಕ್ರೀಡೆ

RSA vs NEP: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ; ಗೆಲುವಿನ ಖಾತೆ ತೆರೆದ ಕಿವೀಸ್​

RSA vs NEP: ದಿನದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಉಗಾಂಡ 18.4 ಓವರ್​ಗಳಲ್ಲಿ 40 ರನ್​ಗೆ ಆಲೌಟ್​ ಆಯಿತು. ನ್ಯೂಜಿಲ್ಯಾಂಡ್​ ಈ ಮೊತ್ತವನ್ನು ಕೇವಲ 1 ವಿಕೆಟ್​ನಷ್ಟಕ್ಕೆ 41 ರನ್​ ಬಾರಿಸಿ 9 ವಿಕೆಟ್​ಗಳ ಗೆಲುವು ಸಾಧಿಸಿತು.

VISTARANEWS.COM


on

RSA vs NEP
Koo

ಕಿಂಗ್ಸ್‌ಟೌನ್‌: ಶನಿವಾರ ನಡೆದ ರೋಚಕ ಟಿ20 ವಿಶ್ವಕಪ್(T20 World Cup 2024)​ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(RSA vs NEP) ತಂಡ ನೇಪಾಳ(South Africa vs Nepal) ವಿರುದ್ಧ 1 ರನ್​ಗಳ ಗೆಲುವು ಸಾಧಿಸಿದೆ. ದಿನದ ಮತ್ತೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್(New Zealand vs Uganda)​ ತಂಡ ಕ್ರಿಕೆಟ್​ ಶಿಶು ಉಗಾಂಡ ವಿರುದ್ಧ 9 ವಿಕೆಟ್​ಗಳ ಗೆಲುವು ಸಾಧಿಸಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಆದರೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದ ಕಾರಣ ಕಿವೀಸ್​ಗೆ ಈ ಗೆಲುವು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ.

ದಕ್ಷಿಣ ಆಫ್ರಿಕಾ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹರಿಣ ಪಡೆ ರೀಜಾ ಹೆಂಡ್ರಿಕ್ಸ್(43) ಅವರ ಏಕಾಂಗಿ ಹೋರಾಟದ ನೆರವಿನಿಂದ 7 ವಿಕೆಟ್​ಗೆ 115 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ ಅಂತಿಮ ಓವರ್​ನ 2 ಎಸೆತದಲ್ಲಿ ಗೆಲುವಿಗೆ 2 ರನ್​ ಬಾರಿಸಲು ಸಾಧ್ಯವಾಗದೆ ವಿರೋಚಿತ 1 ರನ್​ ಅಂತರದ ಸೋಲು ಕಂಡಿತು. ಅಂತಿಮವಾಗಿ 7 ವಿಕೆಟ್​ಗೆ 114 ರನ್​ ಬಾರಿಸಿತು. ಒಂದು ರನ್​ ಗಳಿಸುತ್ತಿದ್ದರೂ ಕೂಡ ಪಂದ್ಯ ಟೈ ಗೊಂಡು ಸೂಪರ್​ ಓವರ್​ ಕಾಣುತ್ತಿತ್ತು. ಆದರೆ ಗುಲ್ಸನ್ ಝಾ ರನೌಟ್​ ಬಲೆಗೆ ಬಿದ್ದು ತಂಡ ಸೋಲಿಗೆ ತುತ್ತಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ ಸ್ಪಿನ್​ ಮ್ಯಾಚಿಕ್​ ನಡೆಸಿ 4 ವಿಕೆಟ್​ ಕಿತ್ತು ಮಿಂಚಿದರು.

ಇದನ್ನೂ ಓದಿ IND vs CAN: ಇಂದು ಭಾರತ-ಕೆನಡಾ ಪಂದ್ಯ ಅನುಮಾನ; ಭಾರೀ ಮಳೆ ಎಚ್ಚರಿಕೆ ನೀಡಿದ ಹಮಾಮಾನ ಇಲಾಖೆ

ಚೇಸಿಂಗ್​ ಆರಂಭಿಸಿದ ನೇಪಾಳ ಉತ್ತಮ ಆರಂಭ ಗಳಿಸಿದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಆದರೆ ಗೆಲ್ಲುವ ಅವಕಾಶವೂ ಇತ್ತು. ಅಂತಿಮ ಓವರ್​ನಲ್ಲಿ ಗೆಲುವಿಗೆ 8 ರನ್​ ಬೇಕಿತ್ತು. ಈ ಓವರ್​ ಎಸೆದ ಒಟ್ನೀಲ್ ಬಾರ್ಟ್ಮನ್ ಮೊದಲ 2 ಎಸೆತವನ್ನು ಡಾಟ್​ ಮಾಡಿದರು. ಮೂರನೇ ಎಸೆತದಲ್ಲಿ ಗುಲ್ಸನ್ ಝಾ ಬೌಂಡರಿ ಬಾರಿಸಿದ ಪರಿಣಾಮ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಮುಂದಿನ ಎಸೆತದಲ್ಲಿ ಗುಲ್ಸನ್ 2 ರನ್ ಕಸಿದರು. ಅಂತಿಮವಾಗಿ 2 ಎಸೆತದ ಮುಂದೆ 2 ರನ್​ ತೆಗೆಯುವ ಸವಾಲು ಎದುರಾಯಿತು. 5ನೇ ಎಸೆತವನ್ನು ಗುಲ್ಸನ್ ಡಾಟ್​ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್​ ಬೇಕಿದ್ದಾಗ ಗುಲ್ಸನ್ ರನೌಟ್​ ಆದರು. ದಕ್ಷಿಣ ಆಫ್ರಿಕಾ 1 ರನ್ ಅಂತರದ​ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಹೊರತುಪಡಿಸಿ ಉಳಿದೆಲ್ಲರೂ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ಯಾರು ಕೂಡ ಕನಿಷ್ಠ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಿಂದ ಅಜೇಯ 27 ರನ್​ ಬಾರಿಸಿದರು. ಹೆಂಡ್ರಿಕ್ಸ್ 43 ರನ್​ ಬಾರಿಸಿದರು. ನಾಯಕ ಐಡೆನ್​ ಮಾರ್ಕ್ರಮ್​(15) ಅವರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು.

ಕೊನೆಗೂ ಗೆದ್ದ ಕಿವೀಸ್​

ದಿನದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಉಗಾಂಡ 18.4 ಓವರ್​ಗಳಲ್ಲಿ 40 ರನ್​ಗೆ ಆಲೌಟ್​ ಆಯಿತು. ನ್ಯೂಜಿಲ್ಯಾಂಡ್​ ಈ ಮೊತ್ತವನ್ನು ಕೇವಲ 1 ವಿಕೆಟ್​ನಷ್ಟಕ್ಕೆ 41 ರನ್​ ಬಾರಿಸಿ 9 ವಿಕೆಟ್​ಗಳ ಗೆಲುವು ಸಾಧಿಸಿತು.

Continue Reading
Advertisement
Bhandara Fair
ಬಾಗಲಕೋಟೆ2 mins ago

Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

darshan give sopports to arrested people
ಸ್ಯಾಂಡಲ್ ವುಡ್14 mins ago

Actor Darshan: ಎಲ್ಲ ಖರ್ಚು ನೋಡಿಕೊಳ್ತೇನೆ, ನೀವು ಸರೆಂಡರ್‌ ಆಗಿ ಎಂದಿದ್ದ ದರ್ಶನ್ ತಾನೇ ಪೊಲೀಸ್‌ ಬೋನಿಗೆ ಬಿದ್ದ!

T20 World Cup 2024 Super 8
ಕ್ರಿಕೆಟ್40 mins ago

T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

Indresh Kumar
Lok Sabha Election 202441 mins ago

Indresh Kumar: ರಾಮ ಭಕ್ತರು ಅಧಿಕಾರದಲ್ಲಿದ್ದಾರೆ, ರಾಮ ವಿರೋಧಿಗಳು ಸೋತಿದ್ದಾರೆ; ಆರ್‌ಎಸ್‌ಎಸ್‌ ನಾಯಕನ ಹೊಸ ಹೇಳಿಕೆ

Actor darshan
ಉತ್ತರ ಕನ್ನಡ44 mins ago

Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

Gold Rate Today
ಚಿನ್ನದ ದರ48 mins ago

Gold Rate Today: ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ; ಆಭರಣ ಖರೀದಿಯ ಮುನ್ನ ಇಂದಿನ ದರ ಗಮನಿಸಿ

Actor Darshan new statement to police
ಸ್ಯಾಂಡಲ್ ವುಡ್50 mins ago

Actor Darshan: ಎರಡೇ ಎರಡೇಟು ಬಿಟ್ಟಿದ್ದೆ, ಹಿಂಗಾಗೋಯ್ತು ಸಾರ್‌! ಪೊಲೀಸರ ಮುಂದೆ ದರ್ಶನ್‌ ಹೇಳಿಕೆ!

snake bite
ಚಿಕ್ಕಬಳ್ಳಾಪುರ1 hour ago

Snake Bite : ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

Actor Darshan case Film chamber visit to the renukaswamy house
ಸ್ಯಾಂಡಲ್ ವುಡ್1 hour ago

Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

India Coach
ಕ್ರೀಡೆ1 hour ago

India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು19 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು20 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ21 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌