Site icon Vistara News

Virat Kohli: 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿದ ವಿರಾಟ್​ ಕೊಹ್ಲಿ

virat kohli world cup bowling

ಪುಣೆ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದಾರೆ. ಬಾಂಗ್ಲಾ(India vs Bangladesh) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗಾಯಗೊಂಡ ಕಾರಣ ಅವರ ಓವರ್​ ಅನ್ನು ಪೂರ್ತಿಗೊಳಿಸುವ ಮೂಲಕ ಈ ಸಾಧನೆ ಮಾಡಿದರು.

2011ರ ವಿಶ್ವಕಪ್​ ಫೈನಲ್​ನಲ್ಲಿಯೂ ಬೌಲಿಂಗ್​

ವಿರಾಟ್​ ಕೊಹ್ಲಿ ಅವರು ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿ ಬೌಲಿಂಗ್​ ನಡೆಸಿದ್ದು 2011ರ ವಿಶ್ವಕಪ್​ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಒಂದು ಓವರ್​ ಎಸೆದು 6 ರನ್​ ನೀಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿಯೂ ಒಂದು ಓವರ್​ ಎಸೆದಿದ್ದರು. ಇಲ್ಲಿಯೂ 6 ರನ್​ ಬಿಟ್ಟುಕೊಟ್ಟಿದ್ದರು. ಕೊನೆಯ ಬಾರಿ ವಿಶ್ವಕಪ್​ನಲ್ಲಿ ಕೊಹ್ಲಿ ಬೌಲಿಂಗ್​ ನಡೆಸಿದ್ದು 2015ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ ವಿರುದ್ಧ ಒಂದು ಓವರ್​ ಬೌಲಿಂಗ್​ ನಡೆಸಿ 7 ರನ್​ ಬಿಟ್ಟುಕೊಟ್ಟಿದ್ದರು. ಇದೀಗ 8 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಬೌಲಿಂಗ್​ ನಡೆಸಿದ್ದಾರೆ. ಆದರೆ ಇಲ್ಲಿ ಮೂರು ಬೌಲ್​ ಮಾತ್ರ ಎಸೆದರು.

ಕ್ಯಾಚ್​ ದಾಖಲೆಯ ಮೇಲೆ ಕಣ್ಣು

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಇಂದು ನಡೆಯುವ ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಜಸ್ಟ್​ 2 ಕ್ಯಾಚ್​ ಹಿಡಿದರೆ, ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್(Most catches in World Cup)​ ಪಡೆದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲಿದ್ದಾರೆ.

ವಿರಾಟ್​ ಕೊಹ್ಲಿ ಅವರು ಸದ್ಯ 17 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಅವರು ಬಾಂಗ್ಲಾ ವಿರುದ್ಧ 2 ಕ್ಯಾಚ್​ ಪಡೆದರೆ ಮೂರನೇ ಸ್ಥಾನದಲ್ಲಿರುವ ಲಂಕಾದ ಮಾಜಿ ದಿಗ್ಗಜ ಆಟಗಾರ ಸನತ್​ ಜಯಸೂರ್ಯ(Sanath Jayasuriya) ಅವರ ದಾಖಲೆ ಪತನಗೊಳ್ಳಲಿದೆ. ಅವರು 18 ಕ್ಯಾಚ್​ ಹಿಡಿದ್ದಾರೆ.

ಇದನ್ನೂ ಓದಿ IND vs BAN: ಕೊಹ್ಲಿಯನ್ನು ಕೆಣಕಿದರೆ ಸೋಲು ಖಚಿತ; ಮುಷ್ಫಿಕರ್‌ ರಹೀಂ

ಬ್ಯಾಟಿಂಗ್ ಶೈಲಿ ಬದಲಿಸುವರೇ ಕೊಹ್ಲಿ?

ರನ್​ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸುವ ಇಚ್ಛೆ ಹೊಂದಿದ್ದಾರೆ ಎಂಬ ಸುಳಿವೊಂದು ಲಭಿಸಿದೆ. ಈ ಪಂದ್ಯದಲ್ಲಿ ಅವರು ಸ್ಫೋಟಕ ಬ್ಯಾಟಿಂಗ್​ ಮೂಲಕ ಸಿಕ್ಸರ್​ಗಳನ್ನು ಬಾರಿಸುವ ಇರಾದೆಯಲ್ಲಿದ್ದಂತೆ ತೋರುತ್ತಿದೆ. ಇದಕ್ಕೆ ಕಾರಣ, ಅವರು ಎಂದಿನಂತೆ ನೆಟ್ಸ್​ನಲ್ಲಿ ಅಭ್ಯಾಸ ನಡೆಸುವ ಬದಲು ಈ ಬಾರಿ ಪವರ್ ಹಿಟ್​ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಬ್ಬರದ ಸಿಕ್ಸರ್​ಗಳನ್ನು ಬಾರಿಸುವ ಕಲೆಯನ್ನು ಅಭ್ಯಾಸ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಸಾಂಪ್ರದಾಯಿಕ ಕ್ರಿಕೆಟ್ ಪ್ರಕಾರಕ್ಕೆ ಒತ್ತು ನೀಡಿ ಸಾಂಪ್ರದಾಯಿಕ ಶಾಟ್​​ಗಳನ್ನೇ ಹೆಚ್ಚು ಆಡುತ್ತಾರೆ. ಅದ್ಭುತ ಕವರ್ ಡ್ರೈವ್ ಆಗಿರಲಿ ಅಥವಾ ಅದ್ಭುತವಾದ ಸ್ಟ್ರೈಟ್​ ಡ್ರೈವ್ ಆಗಿರಲಿ, ಕೊಹ್ಲಿ ತಮ್ಮ ಶಾಟ್​ಗಳನ್ನು ನೆಲದ ಮೇಲೆ ಹೊಡೆಯಲು ಆದ್ಯತೆ ನೀಡುತ್ತಾರೆ. ಆದಾಗ್ಯೂ, ಭಾರತದ ತರಬೇತಿ ಅಧಿವೇಶನದಲ್ಲಿ ವಿಭಿನ್ನ ಪ್ರದರ್ಶನವನ್ನು ನೀಡಿದ್ದಾರೆ. ಅವರು ನಿಜವಾಗಿಯೂ ಬ್ಯಾಟಿಂಗ್​ ಶೈಲಿಯನ್ನು ಬದಲಾಯಿಸಿದ್ದಾರೇ? ಎಂಬುದು ಇಂದಿನ ಪಂದ್ಯದಲ್ಲಿ ತಿಳಿದುಬರಲಿದೆ.

Exit mobile version