Site icon Vistara News

ಕೊಹ್ಲಿ ಶತಕಗಳ ಅರ್ಧಶತಕ; ಇಲ್ಲಿದೆ ‘ಸೆಂಚುರಿ ಸರದಾರ’ ಸಾಗಿದ ಹಾದಿ…

virat kohli

ಮುಂಬಯಿ: ಕೆಲವು ವರ್ಷಗಳ ಹಿಂದೆ ಸಲ್ಮಾನ್​ ಖಾನ್​ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಚಿನ್​ ತೆಂಡೂಲ್ಕರ್​ ತಮ್ಮ ದಾಖಲೆಗಳನ್ನು ವಿರಾಟ್‌ ಕೊಹ್ಲಿ ಅಥವಾ ರೋಹಿತ್‌ ಶರ್ಮಾ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆಗ ಎಲ್ಲರೂ ಈ ಮಾತನ್ನು ಕೇಳಿ ನಕ್ಕಿದ್ದರು. ಇದು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಸಚಿನ್​ ಮಾತ್ರ ಇದನ್ನು ಬಲಾವಾಗಿ ನಂಬಿದ್ದರು. ಅಂದು ಸಚಿನ್​ ಹೇಳಿದ ಭವಿಷ್ಯ ಕೊನೆಗೂ ನಿಜವಾಗಿದೆ. ಕೊಹ್ಲಿ ಅವರು ಸಚಿನ್​ ಅವರ ಏಕದಿನ ಶತಕದ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್​ ಈಗ ಶತಕದ ಅರ್ಧಶತಕ ಪೂರ್ತಿಗೊಳಿಸಿದ್ದಾರೆ. ಕೊಹ್ಲಿಯ ಈ ಶತಕಗಳು ಯಾವ ತಂಡದ ವಿರುದ್ಧ, ಯಾವ ವರ್ಷ ಎಷ್ಟು ಶತಕ ದಾಖಲಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ದೇಶದ ವಿರುದ್ಧ ಎಷ್ಟು ಶತಕ?

ದೇಶಶತಕ
ಆಸ್ಟ್ರೇಲಿಯಾ8
ಬಾಂಗ್ಲಾದೇಶ5
ಇಂಗ್ಲೆಂಡ್​3
ನ್ಯೂಜಿಲ್ಯಾಂಡ್​6
ಪಾಕಿಸ್ತಾನ3
ದಕ್ಷಿಣ ಆಫ್ರಿಕಾ5
ಶ್ರೀಲಂಕಾ10
ವೆಸ್ಟ್​ ಇಂಡೀಸ್​9
ಜಿಂಬಾಬ್ವೆ1

ಯಾವ ವರ್ಷ ಎಷ್ಟು ಶತಕ?

ವರ್ಷಶತಕ
20080
20091
20103
20114
20125
20134
20144
20152
20163
20176
20186
20195
20200
20210
20221
20236

ಯಾವ ದೇಶದಲ್ಲಿ ಎಷ್ಟು ಶತಕ?

ತವರಿನಲ್ಲಿಯೇ ವಿರಾಟ್​ ಕೊಹ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. 24 ಶತಕ ತವರಿನಂಗಳದಲ್ಲಿ ದಾಖಲಾಗಿದೆ.

ದೇಶಶತಕ
ಭಾರತ24
ಬಾಂಗ್ಲಾದೇಶ6
ಆಸ್ಟ್ರೇಲಿಯಾ5
ಶ್ರೀಲಂಕಾ5
ನ್ಯೂಜಿಲ್ಯಾಂಡ್​1
ಇಂಗ್ಲೆಂಡ್​ 1
ದಕ್ಷಿಣ ಆಫ್ರಿಕಾ3
ಜಿಂಬಾಬ್ವೆ​1
ವೆಸ್ಟ್ ಇಂಡೀಸ್​4

ಯಾರ ನಾಯಕತ್ವದಲ್ಲಿ ಎಷ್ಟು ಶತಕ?

ನಾಯಕಶತಕ
ತಮ್ಮದೇ ನಾಯಕತ್ವ21
ಮಹೇಂದ್ರ ಸಿಂಗ್​ ಧೋನಿ19
ರೋಹಿತ್​ ಶರ್ಮ6
ಗೌತಮ್​ ಗಂಭೀರ್​1
ವೀರೇಂದ್ರ ಸೆಹವಾಗ್​2
ಕೆ.ಎಲ್​ ರಾಹುಲ್​1

3 ಮತ್ತು 4ನೇ ಕ್ರಮಾಂಕದಲ್ಲಿ ಮಾತ್ರ ಶತಕ ದಾಖಲು

ವಿರಾಟ್‌ ಕೊಹ್ಲಿ ಅವರು ಆರಂಭಿಕನಾಗಿ ಮತ್ತು 7ನೇ ಕ್ರಮಾಂಕದವರೆಗೂ ಇನಿಂಗ್ಸ್​ ಆಡಿದ್ದಾರೆ. ಆದರೆ ಅವರು ಶತಕ ಬಾರಿಸಿದ್ದು ಮಾತ್ರ 3 ಹಾಗೂ 4ನೇ ಕ್ರಮಾಂಕಗಳಲ್ಲಿ ಆಡಿದಾಗ ಮಾತ್ರ. 3ನೇ ಕ್ರಮಾಂಕದಲ್ಲಿ 224 ಇನ್ನಿಂಗ್ಸ್‌ಗಳನ್ನು ಆಡಿ 43 ಶತಕ ಬಾರಿಸಿದ್ದಾರೆ. 4ನೇ ಕ್ರಮಾಂಕದಲ್ಲಿ 39 ಇನ್ನಿಂಗ್ಸ್‌ಗಳನ್ನು ಆಡಿ 7 ಶತಕ ದಾಖಲಿಸಿದ್ದಾರೆ.

1ನೇ ಕ್ರಮಾಂಕದಲ್ಲಿ 4 ಇನ್ನಿಂಗ್ಸ್‌, 2ನೇ ಕ್ರಮಾಂಕದಲ್ಲಿ 3, 5ನೇ ಕ್ರಮಾಂಕದಲ್ಲಿ 4, 6ನೇ ಕ್ರಮಾಂಕದಲ್ಲಿ 1 ಹಾಗೂ 7ನೇ ಕ್ರಮಾಂಕದಲ್ಲಿ 4 ಇನ್ನಿಂಗ್ಸ್‌ಗಳನ್ನು ಕೊಹ್ಲಿ ಆಡಿದ್ದಾರೆ. ಆದರೆ ಆತಕ ಮಾತ್ರ ಬಾರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಅದೃಷ್ಟದ ಕ್ರಮಾಂಕ 3 ಹಾಗೂ 4 ಎನ್ನುವುದು ಈ ಲೆಕ್ಕಾಚಾರದಲ್ಲೇ ತಿಳಿದು ಬರುತ್ತದೆ.

Exit mobile version