Site icon Vistara News

Virat kohli : ಸಚಿನ್​ ರೆಕಾರ್ಡ್​ ಮುರಿದು ʼಶತಕʼಗಳ ವಿಶ್ವ ದಾಖಲೆ ಬರೆದ ಕಿಂಗ್‌​ ಕೊಹ್ಲಿ

Virat kohli

ಮುಂಬಯಿ : ಆಧನಿಕ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟರ್​ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಅವರ ಶತಕಗಳ ದಾಖಲೆ ಮುರಿದ್ದಾರೆ. ಅವರೀಗ ಏಕ ದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಅವರು ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು.

ವಿರಾಟ್ ಕೊಹ್ಲಿ ಹಾಲಿ ಅವೃತ್ತಿಯ ಲೀಗ್​ ಹಂತದಲ್ಲಿ ಸಚಿನ್​ ಅವರ 49ನೇ ಶತಕದ ದಾಖಲೆಯನ್ನು ಮುರಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆ ಶತಕ ಬಾರಿಸಿದ್ದರು. ಆ ಪಂದ್ಯ ಕೋಲ್ಕೊತಾದ ಈಡನ್ ಗಾರ್ಡನ್ಸ್​ ಕ್ರಿಕೆಟ್ ಮೈದಾನದಲ್ಲಿ ಆ ಪಂದ್ಯ ನಡೆದಿತ್ತು.

ಅಂದ ಹಾಗೆ ವಿರಾಟ್​ ಕೊಹ್ಲಿ ಸಚಿನ್ ಅವರ ತವರು ಮೈದಾನ ಮುಂಂಬಯಿಯ ವಾಂಖೆಡೆಯಲ್ಲೇ ರೆಕಾರ್ಡ್​ ಮುರಿದಿರುವುದು ಕಾಕತಾಳಿಯ. ಅಪ್ಪಟ ಕ್ರಿಕೆಟ್​ ಪ್ರೇಮಿಗಳ ನಾಡು ಮುಂಬಯಿಯಲ್ಲಿ ದಾಖಲೆ ಮುರಿದಿರುವುದು ಇನ್ನೊಂದು ವಿಶೇಷ ಸಂಗತಿ. ದಾಖಲೆ ಮುರಿದ ತಕ್ಷಣ ವಿರಾಟ್​ ಗ್ಯಾಲರಿಯಲ್ಲಿದ್ದ ಸಚಿನ್​ ತೆಂಡೂಲ್ಕರ್ ಅವರಿಗೆ ತಲಬಾಗಿ ನಮಿಸಿದರು. ಇಡೀ ಮೈದಾನನವೇ ಅವರಿಗೆ ಎದ್ದು ನಿಂತು ಚಪ್ಪಾಳೆ ಹೊಡೆಯಿತು. ಪತ್ನಿ ಅನುಷ್ಕಾ ಫ್ಲೈಯಿಂಗ್ ಕಿಸ್​ ಕೊಟ್ಟರು. ಫುಟ್ಬಾಲ್ ದಂತಕತೆ ಡೇವಿಡ್ ಬೇಕ್ಹಮ್ ಸೇರಿದಂತೆ ಎಲ್ಲರೂ ಶಹಬ್ಬಾಸ್​ಗಿರಿಕೊಟ್ಟರು.

ಅತಿ ಹೆಚ್ಚು ಏಕದಿನ ಶತಕಗಳು

ವಿರಾಟ್ ಕೊಹ್ಲಿಯ ಖಾತೆಯಲ್ಲೀಗ ಒಟ್ಟು 80 ಶತಕಗಳಿವೆ. 50 ಏಕದಿನ, 29 ಟೆಸ್ಟ್​ ಹಾಗೂ 1 ಟಿ20 ಶತಕಗಳಿವೆ.

ಅರ್ಧ ಶತಕಗಳ ದಾಖಲೆ

ಭಾರತ ತಂಡ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli) ಕ್ರಿಕೆಟ್​ ದೇವರು ಸ ಚಿನ್ ತೆಂಡೂಲ್ಕರ್ ಅವರ ವಿಶ್ವ ಕಪ್​ನಲ್ಲಿ ಸೃಷ್ಟಿಸಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಅವರೀಗ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ ಎಂಬುದೇ ವಿಶೇಷ.

ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸಿದ ತಕ್ಷಣ ಅವರು ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 2023ರ ವಿಶ್ವ ಕಪ್​ನಲ್ಲಿ ಒಟ್ಟು 8 ಬಾರಿ 50 ಪ್ಲಸ್ ಸ್ಕೋರ್ ಬಾರಿಸಿದಂತಾಗಿದೆ. ಇದರೊಂದಿಗೆ ಅವರು ಏಳು ಫಿಪ್ಟಿ ಫ್ಲಸ್ ಸ್ಕೋರ್ ಬಾರಿಸಿದ ಸಚಿನ್ ಅವರು ದಾಖಲೆಯನ್ನು ಮುರಿದಿದ್ದಾರೆ. 2019ರ ವಿಶ್ವ ಕಪ್​ನಲ್ಲಿ ಏಳು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಮಾಡಿದ್ದರು. 2019ರಲ್ಲಿ ಆರು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಬಾರಿಸಿದ ರೋಹಿತ್​ ಶರ್ಮಾ, ಡೇವಿಡ್​ ವಾರ್ನರ್​ ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್

ಪಾಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್​

ಅರ್ಧ ಶತಕ ಬಾರಿಸಿದ ತಕ್ಷಣ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್​ ಅವರ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್​ ಕೊಹ್ಲಿ ಅರ್ಧ ಶತಕ ಬಾರಿಸಿದ ತಕ್ಷಣ ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಾರಿಸಿದ್ದ ಫಿಫ್ಟಿ ಪ್ಲಸ್​ ಸ್ಕೋರ್​ ದಾಖಲೆಯನ್ನು ಮುರಿದಿದ್ದಾರೆ. 264 ಅರ್ಧ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. 216 ಅರ್ಧ ಶತಕಗಳನ್ನು ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ನಾಲ್ಕನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ 211 ಅರ್ಧ ಶತಕಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IND vs NZ : ಸೆಮಿಫೈನಲ್ ಪಂದ್ಯದ ಪಿಚ್​ ಬದಲಾಯಿಸಲಾಗಿದೆಯೇ? ಏನಿದು ಆರೋಪ?

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ಸ್ಕೋರ್

Exit mobile version