Site icon Vistara News

Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Viat kohli

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತದ ಬ್ಯಾಟರ್​ ವಿರಾಟ್ ಕೊಹ್ಲಿ ಐಸಿಸಿ ವಿಶ್ವಕಪ್ (50 ಓವರ್ ಮತ್ತು ಟಿ 20 ಐ) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಕಪ್​​ನ 53ನೇ ಇನ್ನಿಂಗ್ಸ್ ಆಡಿದ ಕೊಹ್ಲಿ 60ಕ್ಕೂ ಅಧಿಕ ಸರಾಸರಿಯಲ್ಲಿ 2278 ರನ್ ಬಾರಿಸಿದ್ದಾರೆ. 2011 ರ ವಿಶ್ವಕಪ್​​ನಲ್ಲಿ ಕೊಹ್ಲಿ ತಮ್ಮ ಮೊದಲ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡರು. ಮೀರ್​ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಆಡಿದ್ದರು. ಆ ಟೂರ್ನಿಯ ಒಂಬತ್ತು ಇನಿಂಗ್ಸ್​ಗಳಲ್ಲಿ 282 ರನ್ ಗಳಿಸಿದ್ದರು.

ಕೊಹ್ಲಿ ಐದು ಟಿ 20 ವಿಶ್ವಕಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. 25 ಇನ್ನಿಂಗ್ಸ್​ಗಳಲ್ಲಿ 14 ಅರ್ಧಶತಕಗಳು ಮತ್ತು 81.50 ಸರಾಸರಿಯೊಂದಿಗೆ 1141 ರನ್​ ಗಳಿಸಿದ್ದಾರೆ. ಅಲ್ಲದೆ, ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಏಕದಿನ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಆಟಗಾರ ಕೊಹ್ಲಿ. ಕೊಹ್ಲಿ ಅಜೇಯ 55 ರನ್ ಗಳಿಸುವ ಮೂಲಕ ಏಕದಿನ ವಿಶ್ವ ಕಪ್​ನಲ್ಲಿ ಒಟ್ಟು 1170 ರನ್ ಗಳಿಸಿದರು.

ಈ ಸುದ್ದಿಗಳನ್ನೂ ಓದಿ
Pakistan vs Sri Lanka: ಒಂದೇ ಪಂದ್ಯದಲ್ಲಿ 4 ಶತಕ; ವಿಶ್ವಕಪ್​ನಲ್ಲಿ ಇದು ವಿಶ್ವದಾಖಲೆ
Virat vs Navin : ಮೈದಾನದಲ್ಲೇ ರಾಜಿ ಮಾಡಿಕೊಂಡ ಕೊಹ್ಲಿ- ನವಿನ್ ಉಲ್ ಹಕ್​
ಧೋನಿ ಮಾಡಿದ್ರೆ ತಪ್ಪು, ರಿಜ್ವಾನ್​ ಉಗ್ರರಿಗೆ ಬೆಂಬಲ ಕೊಟ್ರೆ ಸರಿ; ಐಸಿಸಿ ವಿರುದ್ಧ ನೆಟ್ಟಿಗರು ಗರಂ

ಅಫಘಾನಿಸ್ತಾನ ವಿರುದ್ಧ ಸುಲಭ ಜಯ

ನಾಯಕ ರೋಹಿತ್ ಶರ್ಮ (131) ಅವರ ದಾಖಲೆಯ ಶತಕ ಹಾಗೂ ವಿರಾಟ್​ ಕೊಹ್ಲಿಯ (55) ಅಜೇಯ ಅಜೇಯ ಅರ್ಧ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್​ನ ತನ್ನ ಎರಡನೇ ಪಂದ್ಯದಲ್ಲಿ ಅಪಘಾನಿಸ್ತಾನ (IND vs AFG) ವಿರುದ್ಧ 8 ವಿಕೆಟ್​ಗಳ ಸುಲಭ ವಿಜಯ ದಾಖಲಿಸಿದೆ. ಇದು ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡಕ್ಕೆ ಲಭಿಸಿದ ಸತತ ಎರಡನೇ ವಿಜಯವಾಗಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್​ ಶರ್ಮಾ ಮತ್ತು ಬಳಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​ ಗೆಲುವು ಕಂಡಿತ್ತು.

ಇಲ್ಲಿನ ಅರುಣ್​ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 272 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 90 ಎಸೆತಗಳು ಬಾರಿ ಇರುವಂತೆಯೇ 2 ವಿಕೆಟ್​ ನಷ್ಟಕ್ಕೆ 273 ರನ್ ಬಾರಿಸಿ ಗೆಲುವು ಸಾಧಿಸಿತು. ಬೌಲಿಂಗ್ ವೇಳೆ 39 ರನ್​ಗಳಿಗೆ 4 ವಿಕೆಟ್​ ಉರುಳಿಸಿದ ಜಸ್​ಪ್ರಿತ್​ ಬುಮ್ರಾ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡದ ಪರ ರೋಹಿತ್ ಶರ್ಮಾ ಅಕ್ಷರಶಃ ಸ್ಫೋಟಿಸಿದರು. ಅವರು ಆರಂಭದಿಂದಲೇ ಸಿಕ್ಸರ್ ಬೌಂಡರಿಗಳನ್ನು ಬಾರಿಸುವ ಮೂಲಕ ಡೆಲ್ಲಿ ಪ್ರೇಕ್ಷಕರಿಗೆ ಬ್ಯಾಟಿಂಗ್ ರಸದೌತಣ ಉಣಬಡಿಸಿದರು. ಏಳು ಫೋರ್ ಹಾಗೂ 2 ಸಿಕ್ಸರ್​ಗಳ ಸಮೇತ 30 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ಅವರು ಬಳಿಕವೂ ತಮ್ಮ ರನ್ ಗಳಿಕೆ ವೇಗವನ್ನು ತಗ್ಗಿಸಲಿಲ್ಲ. ಬಳಿಕ 33 ಎಸೆತಗಳನ್ನು ಬಳಸಿಕೊಂಡ ಅವರು ಶತಕ ಬಾರಿಸಿದರು. ಅವರ ಶತಕದಲ್ಲಿ 12 ಫೋರ್ ಹಾಗೂ 4 ಸಿಕ್ಸರ್​ಗಳಿದ್ದವು.

ಶತಕ ಬಾರಿಸುವ ಜತೆಗೆ ರೋಹಿತ್ ಶರ್ಮಾ 554 ಅಂತಾರಾಷ್ಟ್ರೀಯ ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು. ಅದೇ ರೀತಿ 7ನೇ ವಿಶ್ವ ಕಪ್ ಶತಕ ಬಾರಿಸಿ ಗರಿಷ್ಠ ಶತಕ ಬಾರಿಸಿದ ದಾಖಲೆ ಮುರಿದರು. ಅವರು ಸಚಿನ್​ ತೆಂಡೂಲ್ಕರ್ ಅವರನ್ನು ಈ ಹಾದಿಯಲ್ಲಿ ಹಿಂದಿಕ್ಕಿದರು. ಅದೇ ರೀತಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್ ಅವರ ಜತೆಗೆ 19 ಇನಿಂಗ್ಸ್​ಗಳಲ್ಲಿ ವಿಶ್ವ ಕಪ್​ 1000 ರನ್​ ಬಾರಿಸಿದ ದಾಖಲೆ ಮಾಡಿದರು.

ಇಶಾನ್​ ಸಾಥ್​

ಭಾರತ ತಂಡದ ಮತ್ತೊಬ್ಬ ಆರಂಭಿಕ ಬ್ಯಾಟರ್​ ಇಶಾನ್ ಕಿಶನ್​ ರೋಹಿತ್​ಗೆ ಉತ್ತಮ ಬೆಂಬಲ ಕೊಟ್ಟರು. ಆದರೆ 47 ಎಸೆತಗಳಲ್ಲಿ 47 ರನ್ ಬಾರಿಸಿದ ಅವರು 3 ರನ್​ಗಳ ಅಂತರದಿಂದ ಅರ್ಧ ಶತಕದ ಅವಕಾಶ ಕಳೆಕೊಂಡರು. ಬಳಿಕ ಬಂದ ವಿರಾಟ್ ಕೊಹ್ಲಿ ಸಮಾಧಾನ ಚಿತ್ತರಾಗಿ ಆಡಿ ಅರ್ಧ ಶತಕ ಬಾರಿಸಿದರು. ಅಲ್ಲದೆ, ವಿನ್ನಿಂಗ್ ಫೋರ್ ಬಾರಿಸುವ ಮೂಲಕ ಸ್ಥಳೀಯ ಅಭಿಮಾನಿಗಳಿಗೆ ಖುಷಿ ಕೊಟ್ಟರು. ಶ್ರೇಯಸ್​ ಅಯ್ಯರ್​ 25 ರನ್ ಬಾರಿಸಿದರು. ರಶೀದ್ ಖಾನ್ ಭಾರತದ ಎರಡು ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡರು.

Exit mobile version