ಮುಂಬಯಿ: ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಕ್ರಿಕೆಟ್ ದೇವರು ಸ ಚಿನ್ ತೆಂಡೂಲ್ಕರ್ ಅವರ ವಿಶ್ವ ಕಪ್ನಲ್ಲಿ ಸೃಷ್ಟಿಸಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಅವರೀಗ ವಿಶ್ವ ಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಈ ಹಾದಿಯಲ್ಲಿ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ ಎಂಬುದೇ ವಿಶೇಷ.
Most 50+ scores in a single World Cup edition 👑
— Royal Challengers Bangalore (@RCBTweets) November 15, 2023
Keep on keeping on 👊#PlayBold #INDvNZ #TeamIndia #CWC23 #ViratKohli pic.twitter.com/Jw9ulEE8Lv
ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸಿದ ತಕ್ಷಣ ಅವರು ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 2023ರ ವಿಶ್ವ ಕಪ್ನಲ್ಲಿ ಒಟ್ಟು 8 ಬಾರಿ 50 ಪ್ಲಸ್ ಸ್ಕೋರ್ ಬಾರಿಸಿದಂತಾಗಿದೆ. ಇದರೊಂದಿಗೆ ಅವರು ಏಳು ಫಿಪ್ಟಿ ಫ್ಲಸ್ ಸ್ಕೋರ್ ಬಾರಿಸಿದ ಸಚಿನ್ ಅವರು ದಾಖಲೆಯನ್ನು ಮುರಿದಿದ್ದಾರೆ. 2019ರ ವಿಶ್ವ ಕಪ್ನಲ್ಲಿ ಏಳು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಮಾಡಿದ್ದರು. 2019ರಲ್ಲಿ ಆರು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಬಾರಿಸಿದ ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್
- 8- ವಿರಾಟ್ ಕೊಹ್ಲಿ (2023)
- 7- ಸಚಿನ್ ತೆಂಡೂಲ್ಕರ್ (2003)
- 7- ಶಕೀಬ್ ಅಲ್ ಹಸನ್ (2019)
- 6- ರೋಹಿತ್ ಶರ್ಮಾ (2019)
- 6- ಡೇವಿಡ್ ವಾರ್ನರ್ (2019)
ಪಾಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್
ಅರ್ಧ ಶತಕ ಬಾರಿಸಿದ ತಕ್ಷಣ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ ತಕ್ಷಣ ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಾರಿಸಿದ್ದ ಫಿಫ್ಟಿ ಪ್ಲಸ್ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ. 264 ಅರ್ಧ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. 216 ಅರ್ಧ ಶತಕಗಳನ್ನು ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ನಾಲ್ಕನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ 211 ಅರ್ಧ ಶತಕಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IND vs NZ : ಸೆಮಿಫೈನಲ್ ಪಂದ್ಯದ ಪಿಚ್ ಬದಲಾಯಿಸಲಾಗಿದೆಯೇ? ಏನಿದು ಆರೋಪ?
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ಸ್ಕೋರ್
- 264 – ಸಚಿನ್ ತೆಂಡೂಲ್ಕರ್
- 217 – ರಿಕಿ ಪಾಂಟಿಂಗ್
- 217 – ವಿರಾಟ್ ಕೊಹ್ಲಿ
- 216 – ಕುಮಾರ ಸಂಗಕ್ಕಾರ
- 211 – ಜಾಕ್ ಕಾಲಿಸ್
ರೋಹಿತ್ ಶರ್ಮಾ ಸಿಕ್ಸರ್ ದಾಖಲೆ
ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಶರ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದ್ದಾರೆ. ಟ್ರೆಂಟ್ ಬೌಲ್ಟ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ 50 ಸಿಕ್ಸರ್ ದಾಖಲಿಸಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 49 ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ದಾಖಲೆ ಪತನಗೊಂಡಿತು.
ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ
- ರೋಹಿತ್ ಶರ್ಮ-50 ಸಿಕ್ಸರ್
- ಕ್ರಿಸ್ ಗೇಲ್-49 ಸಿಕ್ಸರ್
- ಗ್ಲೆನ್ ಮ್ಯಾಕ್ಸ್ವೆಲ್-43 ಸಿಕ್ಸರ್
- ಎಬಿಡಿ ವಿಲಿಯರ್ಸ್-37 ಸಿಕ್ಸರ್
- ಡೇವಿಡ್ ವಾರ್ನರ್-37 ಸಿಕ್ಸರ್