Site icon Vistara News

Viral Video: ಮೈದಾನದಲ್ಲೇ ಲುಂಗಿ ಡ್ಯಾನ್ಸ್​ ಮಾಡಿದ ಕಿಂಗ್​ ಕೊಹ್ಲಿ; ಪ್ರೇಕ್ಷಕರು ಫಿದಾ

It didn't always go to plan for India on the field, as Virat Kohli exhibits here

ಕೊಲಂಬೊ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಕ್ರಿಕೆಟ್​ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್​ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್​ ನಡೆಸುವ ವೇಳೆ ಡ್ಯಾನ್ಸ್​ ಮಾಡಿದ ವಿಡಿಯೊ ವೈರಲ್​ ಆಗಿತ್ತು. ಇದೀಗ ಮಂಗಳವಾರ ಶ್ರೀಲಂಕಾ ವಿರುದ್ಧದ ಏಷ್ಯಾಕಪ್​ನ ಸೂಪರ್​ 4(India vs Sri Lanka, Super Fours) ಪಂದ್ಯದ ವೇಳೆ ಕೊಹ್ಲಿ ಲುಂಗಿ ಡ್ಯಾನ್ಸ್(lungi dance)​ ಮಾಡಿದ ವಿಡಿಯೊ ವೈರಲ್(Viral Video)​ ಆಗಿದೆ.

ಕೊಲಂಬೊದ ಆರ್​.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಬಾಲಿವುಡ್​ನ ಸ್ಟಾರ್​ ಹಿರಿಯ ನಟ ಶಾರೂಖ್ ಖಾನ್(Shah Rukh Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಸಿನೆಮಾದ ಪ್ರಸಿದ್ಧ ಲುಂಗಿ ಡ್ಯಾನ್ಸ್ ಹಾಡನ್ನು ಹಾಕಲಾಯಿತು. ಇದೇ ವೇಳೆ ಫಿಲ್ಡಿಂಗ್​ ನಡೆಸುತ್ತಿದ್ದ ವಿರಾಟ್​ ಕೊಹ್ಲಿ ಒಂದೆರಡು ಸ್ಟೆಪ್ಸ್​ ಹಾಕಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಓಡಿ ಬಂದು ರೋಹಿತ್​ ತಬ್ಬಿಕೊಂಡ ಕೊಹ್ಲಿ

ಭಾರತದ ಫೀಲ್ಡಿಂಗ್ ವೇಳೆ​ ಸ್ಲಿಪ್​ನಲ್ಲಿ ನಿಂತಿದ್ದ ರೋಹಿತ್​ ಅವರು ಲಂಕಾ ನಾಯಕ ದಾಸುನ್ ಶನಕ ಅವರ ಕ್ಯಾಚ್​ ಒಂದನ್ನು ಹಾರಿ ಒಂದೇ ಕೈಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾದರು. ಕಾಮೆಂಟ್ರಿಯಲ್ಲಿಯೂ ರೋಹಿತ್​ ಅವರ ಈ ಕ್ಯಾಚ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ವಿರಾಟ್​ ಕೊಹ್ಲಿ ಫುಲ್​ ಜೋಶ್​ನಲ್ಲಿ ಓಡೋಡಿ ಬಂದು ರೋಹಿತ್​ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ​​. ಈ ವಿಡಿಯೊ ವೈರಲ್​ ಆಗಿದ್ದು ಉಭಯ ಆಟಗಾರರ ಮಧ್ಯೆ ಎಲ್ಲವು ಸರಿಯಿದೆ ಎಂದು ನೆಟ್ಟಿಗರ ಊಹಾಪೋಹಗಳಿಗೆ ಮತ್ತೊಮ್ಮೆ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ Viral Video: ರೋಹಿತ್​ ಅವರನ್ನು ಮಗುವಿನಂತೆ ತಬ್ಬಿಕೊಂಡು ಸಂಭ್ರಮಿಸಿದ ಕೊಹ್ಲಿ

ಲಂಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್​ ಅವರ ಸಂಭ್ರಮಾಚರಣೆ ಕಂಡ ನೆಟ್ಟಿಗರು. ಟ್ವಿಟರ್​ನಲ್ಲಿ ಈ ದೃಶ್ಯವನ್ನು ಹಂಚಿಕೊಂಡು ನಾವು ಉಭಯ ಆಟಗಾರರ ಬಾಂಧವ್ಯದ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೆವು. ನಮ್ಮ ತಪ್ಪು ಅರಿವಿಗೆ ಬಂದಿದೆ. ರೋಹಿತ್​ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಉಭಯ ಆಟಗಾರರು ಸೇರಿ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.

ತೆರೆಗೆ ಬರಲಿದೆ ಕೊಹ್ಲಿ ಬಯೋಪಿಕ್​

ವಿರಾಟ್ ಕೊಹ್ಲಿ(Virat Kohli) ಅವರ ಜೀವನಾಧಾರಿತ(virat kohli biopic) ಚಿತ್ರ ಸೆಟ್ಟೇರಲು ಭರ್ಜರಿ ಸಿದ್ದತೆ ನಡೆದಿದೆ ಎಂದು ವರದಿಯಾಗಿದೆ. ಚಿತ್ರದ ನಾಯಕನಾಗಿ ಟಾಲಿವುಡ್‌ನ ರಾಮ್‌ ಚರಣ್‌(Ram Charan) ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಕೊಹ್ಲಿ ತಮ್ಮ ಬಯೋಪಿಕ್ ಹಕ್ಕನ್ನು ಮಾರಾಟ ಮಾಡಲು 800-1000 ಕೋಟಿ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹೇಂದ್ರ ಸಿಂಗ್​ ಧೋನಿ ಅವರು ತಮ್ಮ ಬಯೋಪಿಕ್ ಹಕ್ಕುಗಳನ್ನು 100 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಬಯೋಪಿಕ್​ ಬಗ್ಗೆ ವಿರಾಟ್​ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ರಾಮ್​ಚರರಣ್​ ಕೊಹ್ಲಿಯನ್ನು ಹೊಗಳ್ಳಿದ್ದು ಈ ಸುದ್ದಿ ಹರಿದಾಡಲು ಮೂಲ ಕಾರಣ. ಕೆಳವು ತಿಂಗಳ ಹಿಂದೆ ರಾಮ್​​ ಚರಣ್ ಅವರು ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ, ನಾನು ಕ್ರೀಡಾಪಟುಗಳ ಬಯೋಪಿಕ್​ನಲ್ಲಿ ನಟಿಸಿದರೆ ಅದು ವಿರಾಟ್​ ಕೊಹ್ಲಿಯ ಪಾತ್ರದಲ್ಲಿ ಎಂದು ಹೇಳಿದ್ದರು.

Exit mobile version