ರಾಂಚಿ: ಭಾರತೀಯ ಕ್ರಿಕೆಟ್ ತಂಡ ರಾಂಚಿ ಟೆಸ್ಟ್ನಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ವೇಳೆ ಲಂಡನ್ನ ಕೆಫೆಯೊಂದರಲ್ಲಿ ಕುಳಿತು ವಿರಾಟ್ ಕೊಹ್ಲಿ ಹಾಗೂ ಪುತ್ರಿ ವಾಮಿಕಾ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಅವರಿಬ್ಬರೂ ಹೋಟೆಲ್ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಭಾರತದ ಮಾಜಿ ನಾಯಕ ಕಳೆದ ಒಂದು ತಿಂಗಳಿನಿಂದ ಲಂಡನ್ನಲ್ಲಿದ್ದಾರೆ. ಫೆಬ್ರವರಿ 15 ರಂದು ಅವರು ತಮ್ಮ ಮಗ ಅಕಾಯ್ ನನ್ನು ಸ್ವಾಗತಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಆರಂಭಕ್ಕೆ ಕೇವಲ ಮೂರು ದಿನಗಳ ಮೊದಲು ಕೊಹ್ಲಿ ಭಾರತ ಕ್ರಿಕೆಟ್ ತಂಡವನ್ನು ತೊರೆದಿದ್ದರು. ಮೊದಲಿಗೆ, ಅವರ ಅನುಪಸ್ಥಿತಿಯ ಹಿಂದಿನ ಕಾರಣದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆರಂಭದಲ್ಲಿ ಅವರನ್ನು ಮೊದಲ ಎರಡು ಟೆಸ್ಟ್ಗಳಿಂದ ಹೊರಗಿಡಲಾಗಿತ್ತು. ಆದರೆ ಮಾಜಿ ನಾಯಕ ಇಡೀ ಸರಣಿಗೆ ಆಡುವುದಿಲ್ಲ ಎಂದು ಬಿಸಿಸಿಐ ನಂತರ ದೃಢಪಡಿಸಿತು.
Virat Kohli with Vamika snapped at a street side Cafe in London. ❤️#ViratKohli #Vamika #London pic.twitter.com/OyKZjez8WN
— virat_kohli_18_club (@KohliSensation) February 26, 2024
ತಮ್ಮ ಅನುಪಸ್ಥಿತಿಯ ಬಗ್ಗೆ ಅನಿಶ್ಚಿತತೆಯ ನಡುವೆ ವಿರಾಟ್ ಕೊಹ್ಲಿ ಒಂದು ವಾರದ ಹಿಂದೆ ತಮ್ಮ ಎರಡನೇ ಮಗುವಿನ ಜನನವನ್ನು ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದರು. ಶೀಘ್ರದಲ್ಲೇ ಸ್ಟಾರ್ ಕ್ರಿಕೆಟಿಗ ಲಂಡನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ರಾಂಚಿಯಲ್ಲಿ ಭಾರತ 3-1 ಅಂತರದಲ್ಲಿ ಸರಣಿ ಗೆದ್ದ ನಂತರ ಕೊಹ್ಲಿ ಭಾರತ ತಂಡವನ್ನು ಅಭಿನಂದಿಸಿದವರಲ್ಲಿ ಮೊದಲಿಗರು. ನಮ್ಮ ಯುವ ತಂಡದ ಅದ್ಭುತ ಸರಣಿ ಗೆಲುವು. ಧೈರ್ಯ, ದೃಢನಿಶ್ಚಯ ಮತ್ತು ದೃಢತೆಯನ್ನು ತೋರಿದರು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅರ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ರೋಹಿತ್
ರಾಂಚಿ: ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 17 ನೇ ಅರ್ಧಶತಕವನ್ನು ಬಾರಿಸಿದ್ದಾರೆ. ನಾಯಕ 81 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 55 ರನ್ ಗಳಿಸಿದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ್ದಾರೆ. ನಾಲ್ಕನೇ ಟೆಸ್ಟ್ ನ 4 ನೇ ದಿನದ ಮೊದಲ ಸೆಷನ್ ನಲ್ಲಿ ಅವರು ತಮ್ಮ ಅರ್ಧ ಶತಕ ಗಳಿಸಿದರು. ಆ ಬಳಿಕ ಟಾಮ್ ಹಾರ್ಟ್ಲೆ ಎಸೆತದಲ್ಲಿ ಔಟ್ ಆದರು.
ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ ಪೂರೈಸಿದ ಭಾರತದ 17ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ 100ನೇ ಇನ್ನಿಂಗ್ಸ್ ನಲ್ಲಿ 4000 ರನ್ ಪೂರೈಸಿದ್ದಾರೆ. ರೋಹಿತ್ ಶರ್ಮಾ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 44.83 ಸರಾಸರಿಯಲ್ಲಿ 4035 ರನ್ ಗಳಿಸಿದ್ದಾರೆ. 4035 ರನ್ಗಳಲ್ಲಿ ಆರಂಭಿಕ ಆಟಗಾರನಾಗಿ ಸುಮಾರು 2500 ರನ್ ಗಳಿಸಿದ್ದಾರೆ. ಅಲ್ಲಿ ಅವರು ಎಂಟು ಶತಕಗಳು ಮತ್ತು ಏಳು ಅರ್ಧಶತಕಗಳು ಸೇರಿಕೊಂಡಿವೆ.
ಕೊಹ್ಲಿ, ಸಚಿನ್ ಮಾಡಿದ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ
ರಾಂಚಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹಿರಿಯ ಆರಂಭಿಕ ಆಟಗಾರ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ 4000 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಈ ಸಾಧನೆ ಮಾಡಿದ ಇಂಡಿಯಾದ 17 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.‘
ಇದನ್ನೂ ಓದಿ : Yashasvi Jaiswal : ಕೊಹ್ಲಿಯ ಸಾಧನೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿದೆ. ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಭಾರತಕ್ಕೆ 192 ರನ್ಗಳ ಗುರಿ ನೀಡಲಾಯಿತು. ಪಂದ್ಯದ ಕೊನೆಯ ಅರ್ಧ ಗಂಟೆಯಲ್ಲಿ 40 ರನ್ ಬಾರಿಸಿದೆ.
ಇದನ್ನೂ ಓದಿ :Yashasvi Jaiswal : ಕೊಹ್ಲಿಯ ಸಾಧನೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್
ರೋಹಿತ್ ಶರ್ಮಾ 3ನೇ ದಿನದಾಟದ ಅಂತ್ಯಕ್ಕೆ 24 ರನ್ ಗಳಿಸಿ ಔಟಾಗದೆ ಉಳಿದಿದ್ದು, 4000 ರನ್ ಗಡಿ ದಾಟಿದ್ದಾರೆ. ಪ್ರಸ್ತುತ 4003 ರನ್ ಗಳಿಸಿರುವ ಭಾರತದ ನಾಯಕ ನಾಲ್ಕನೇ ಟೆಸ್ಟ್ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿರು ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕುವ ವಿಶ್ವಾಸವನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ಗಂಭೀರ್ ವೃತ್ತಿಜೀವನದಲ್ಲಿ 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್ ಗಳಿಸಿದ್ದಾರೆ. ಸರಣಿಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಪಂದ್ಯ ನಡೆಯಲಿದೆ.