ಗುವಾಹಟಿ: ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 374 ರನ್ಗಳ ಬೃಹತ್ ಮೊತ್ತದ ಗೆಲುವಿನ ಗುರಿಯನ್ನೊಡ್ಡಿದೆ. ವಿರಾಟ್ ಕೊಹ್ಲಿ (113) ಏಕದಿನ ಮಾದರಿಯಲ್ಲಿ 45ನೇ ಅಂತಾರಾಷ್ಟ್ರೀಯ ಶತಕ ಬಾರಿಸಿ ಮಿಂಚಿದರೆ, ರೋಹಿತ್ ಶರ್ಮ (83), ಶುಬ್ಮನ್ ಗಿಲ್ (70) ಅರ್ಧ ಶತಕಗಳ ಕೊಡುಗೆ ಕೊಟ್ಟರು.
ಇಲ್ಲಿನ ಬರ್ಸಾಪಾರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಇಲ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆಯಿತು. ಆರಂಭದಿಂದ ಕೊನೇ ತನಕ ಒಂದೇ ಲಹರಿಯಲ್ಲಿ ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಬಾರಿಸಿತು.
ಭಾರತ ತ ಂಡದ ಪರ ಇನಿಂಗ್ಸ್ ಆರಂಭಿಸಿದ ಶುಬ್ಮನ್ ಗಿಲ್ (70) ಹಾಗೂ ರೋಹಿತ್ ಶರ್ಮ (83) ಮೊದಲ ವಿಕೆಟ್ಗೆ 143 ರನ್ಗಳ ಜತೆಯಾಟ ಆಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಶ್ರೇಯಸ್ ಅಯ್ಯರ್ (28), ಕೆ. ಎಲ್ ರಾಹುಲ್ (39) ತಮ್ಮ ಕೊಡುಗೆ ಕೊಟ್ಟರು.
ಇದನ್ನೂ ಓದಿ | Virat Kohli | ಲಂಕಾ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ, ಏನದು ರೆಕಾರ್ಡ್?