ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವೆ ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ (IPL 2024) ವಿರಾಟ್ ಕೊಹ್ಲಿ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಲು ಸಜ್ಜಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಎದುರಿಸಿದ ಸೋಲಿನಿಂದ ಪುಟಿದೇಳಲು ಆರ್ಸಿಬಿ ಎದುರು ನೋಡುತ್ತಿದೆ ಮತ್ತು ವಿರಾಟ್ ಕೊಹ್ಲಿ ಅವರ ಉತ್ತಮ ಫಾರ್ಮ್ ಆ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಕೂಡ ವಿಶ್ವ ದಾಖಲೆಗೆ ಬಹಳ ಹತ್ತಿರದಲ್ಲಿದ್ದಾರೆ. ಇದು ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಲಿದೆ.
Mayank Yadav said, "I admire and love Virat Kohli a lot". (Star). pic.twitter.com/yZjNVNwTrO
— Mufaddal Vohra (@mufaddal_vohra) April 2, 2024
ಆರ್ಸಿಬಿ ಪರ ಆಡಿದ 255 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 7868 ರನ್ ಗಳಿಸಿದ್ದಾರೆ. ಒಂದು ತಂಡಕ್ಕೆ 8,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರಿಗೆ ಕೇವಲ 132 ರನ್ಗಳು ಬೇಕಾಗಿವೆ. ವಿರಾಟ್ ಕೊಹ್ಲಿ 2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದಾರೆ. ಅವರು ಚಾಂಪಿಯನ್ಪಟ್ಟ ಗಳಿಸದೇ ಹೋದರೂ ಅವರು ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಎಲ್ಎಸ್ಜಿ ವಿರುದ್ಧ ಗೆಲುವಿನ ಹಳಿಗೆ ಮರಳುವುದೇ ಆರ್ಸಿಬಿ?
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಆರ್ಸಿಬಿ ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈಗೆ ಮಣಿದಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ದ ಗೆದ್ದಿತ್ತು. ಮೂರನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ರೈಡರ್ಸ್ ವಿರುದ್ಧ ಸೋತಿದೆ.
ಇದನ್ನೂ ಓದಿ: SuryaKumar Yadav : ಮುಂಬಯಿ ಇಂಡಿಯನ್ಸ್ ತಂಡಕ್ಕೆ ಶುಭ ಸುದ್ದಿ, ಸೂರ್ಯ ವಾಪಸ್ ಬರುವ ದಿನಾಂಕ ಫಿಕ್ಸ್
ಪ್ರಸ್ತುತ ಆರ್ಸಿಬಿ ತಂಡವು ಮೂರು ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯದಲ್ಲಿ ತಂಡವು ಋತುವಿನ ಎರಡನೇ ಪಂದ್ಯವನ್ನು ಗೆಲ್ಲುವ ಭರವಸೆ ಹೊಂದಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲು ಕಂಡಿದ್ದರೆ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ದ ಗೆಲುವು ಸಾಧಿಸಿತ್ತು.
ಐಪಿಎಲ್ 2024 ರ 15 ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ಪರ ಅತ್ಯುತ್ತಮ ಬ್ಯಾಟರ್ ಎನಿಸಿಕೊಳ್ಳಬಹುದು. ಕೊಹ್ಲಿ ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರ ಹಿಂದಿನ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿ ಎರಡು ಅರ್ಧ ಶತಕ ಬಾರಿಸಿದ್ದರು. ಅನುಭವಿ ಬ್ಯಾಟರ್ ಮುಂಬರುವ ಪಂದ್ಯದಲ್ಲೂ ಮತ್ತೊಂದು ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ. ಇದೇ ವೇಳೆ ಉಳಿದ ಬ್ಯಾಟರ್ಗಳು ಮೈ ಚಳಿ ಬಿಟ್ಟು ಆಡಲೇಬೇಕಾಗಿದೆ.