Site icon Vistara News

Cristiano Ronaldo | ಸೋಲಿನ ಸುಳಿಗೆ ಸಿಲುಕಿ ರೊನಾಲ್ಡೊಗೆ ಸಮಾಧಾನ ಹೇಳಿದ ವಿರಾಟ್ ಕೊಹ್ಲಿ

cristiano ronaldo

ಮುಂಬಯಿ: ಫಿಫಾ ವಿಶ್ವ ಕಪ್​ನಲ್ಲಿ ಪೋರ್ಚುಗಲ್​ ತಂಡ ಹೊರ ಬಿದ್ದಿರುವುದು ಫುಟ್ಬಾಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊಗೆ (Cristiano Ronaldo) ವಿಶ್ವದ ಕ್ರೀಡಾ ಕ್ಷೇತ್ರವೇ ಸಮಾಧಾನ ಹೇಳುತ್ತಿದೆ. ಅದೇ ರೀತಿ ರೊನಾಲ್ಡೊ ಅವರ ಅಪ್ಪಟ ಅಭಿಮಾನಿಯಾಗಿರುವ ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ ಕೂಡ ರೊನಾಲ್ಡೊಗೆ ಸಮಾಧಾನ ಹೇಳಿದ್ದಾರೆ.

ಮೊರಾಕ್ಕೊ ತಂಡ ಪೋರ್ಚುಗಲ್​ ಬಳಗವನ್ನು ಸೋಲಿಸಿದ ಹಿನ್ನೆಲೆಯಲ್ಲಿ ಅಬ್ಬರದ ಸಂಭ್ರಮಾರಣೆಯಲ್ಲಿ ಮುಳುಗಿದೆ. ಅಭಿಮಾನಿಗಳ ಖುಷಿಯೂ ಪಾರವೇ ಇಲ್ಲ. ಆದರೆ, ವಿಶ್ವದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೊ ಅವರಿಗೆ ಇದು ಬೇಸರದ ಸಂಗತಿ. ಅಲ್ಲದೆ ಕೊಟ್ಯಂತರ ಅಭಿಮಾನಿಗಳು ಕಣ್ಣಿರು ಹಾಕಿದ್ದಾರೆ. ಇದೀಗ ಅಂತೆಯೇ ವಿರಾಟ್​ ಕೊಹ್ಲಿಯೂ ಸಮಾಧಾನ ಹೇಳಿದ್ದಾರೆ.

”ಒಂದು ಟ್ರೋಫಿ ಗೆದ್ದಿಲ್ಲ ಎಂಬ ಕಾರಣಕ್ಕೆ ನೀವು ಕ್ರೀಡೆ ಅಥವಾ ಕ್ರೀಡಾಭಿಮಾನಿಗಳಿಗೆ ಕೊಟ್ಟಿರುವ ಖುಷಿಯನ್ನು ಯಾರಿಂದಲೂ ಕಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಾನು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ನೀವು ಆಡುತ್ತಿರುವಾಗ ಅನುಭವಿಸಿದ ಪಟ್ಟಿರುವ ಖುಷಿಯನ್ನು ಒಂದು ಪ್ರಶಸ್ತಿಯಿಂದ ಅಳೆಯಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಹೃದಯದಲ್ಲಿ ಸ್ಥಾನ ಪಡೆಯುವುದೇ ಕ್ರೀಡಾಪಟುವಿಗೆ ಸಿಗುವ ಅತ್ಯಂತ ಡೊಡ್ಡ ಆಶೀರ್ವಾದ. ನೀವು ನನಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ,” ಎಂದು ವಿರಾಟ್​ ಕೊಹ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ ’ IND VS BAN | 44ನೇ ಏಕದಿನ ಶತಕ ಬಾರಿಸಿ ಮಿಂಚಿದ ವಿರಾಟ್​ ಕೊಹ್ಲಿ

Exit mobile version