ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಏಕದಿನ ವಿಶ್ವಕಪ್ 2023 ರ 37ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಏಕದಿನ ಶತಕವನ್ನು ಗಳಿಸುವ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ 35 ನೇ ಹುಟ್ಟುಹಬ್ಬವನ್ನು ಭವ್ಯವಾಗಿ ಆಚರಿಸಿದರು. ಕೊಹ್ಲಿ 101* (121) ಅವರ ಅದ್ಭುತ ಇನ್ನಿಂಗ್ಸ್ ನಿಂದಾಗಿ ತಂಡವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ತಮ್ಮ ಶತಕದೊಂದಿಗೆ, ದೆಹಲಿ ಮೂಲದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ (49) ವಿಶ್ವ ದಾಖಲೆಯನ್ನು ಸರಿಗಟ್ಟಿದರು.
ಮೊದಲ ಇನ್ನಿಂಗ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ನಂತರ ಸ್ಟಾರ್ ಬ್ಯಾಟರ್ ಎರಡನೇ ಇನ್ನಿಂಗ್ಸ್ನಲ್ಲಿ ಫುಲ್ ಜೋಶ್ನಲ್ಲಿ ಕಾಣಿಸಿಕೊಂಡರು. ವಿಶೇಷವೆಂದರೆ, ಭಾರತವು ಎರಡನೇ ಓವರ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಕ್ವಿಂಟನ್ ಡಿ ಕಾಕ್ (10 ಎಸೆತಗಳಲ್ಲಿ 5) ಅವರ ವಿಕೆಟ್ ಪಡೆಯಿತು. ದಕ್ಷಿಣ ಆಫ್ರಿಕಾ ಐದು ಓವರ್ಗಳ ನಂತರ 17ರನ್ಗೆ 1 ರನ್ ಗಳಿಸಿದ್ದರಿಂದ ಒತ್ತಡಕ್ಕೆ ಸಿಲುಕಿತು.
ಐದನೇ ಓವರ್ ಮುಗಿದ ನಂತರ, ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ ‘ಜವಾನ್’ ನ ಅರಿಜಿತ್ ಸಿಂಗ್ ಅವರ ಪ್ರಸಿದ್ಧ ಹಾಡಿಗೆ ಚಲೇಯಾ ಹಾಡಿಗೆ ಡಾನ್ಸ್ ಮಾಡುವುದು ಕಂಡು ಬಂತು. ಅದೇ ರೀತಿ ಎಸ್ಆರ್ಕೆ ರೀತಿಯಲ್ಲೇ ಕಾಲು ಮತ್ತು ದೇಹವವನ್ನು ಅಲ್ಲಾಡಿಸಿದರು. ಪ್ರೇಕ್ಷಕರು ಕೊಹ್ಲಿಯ ಡಾನ್ಸಿಂಗ್ ಕ್ರೇಜ್ ಅನ್ನು ಆನಂದಿಸಿದರು. ಅಲ್ಲದೆ, ಕೊಹ್ಲಿ ಡಾನ್ಸ್ ಮಾಡುತ್ತಿದ್ದಂತೆ ಅವರು ಅಬ್ಬರಿಸಿ ಕೇಕೆ ಹಾಕಿದರು.
ಬರ್ತ್ಡೇಯಂದೇ ಶತಕ ಬಾರಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ
ವಿಶ್ವ ಕ್ರಿಕೆಟ್ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ದಿನ ಕ್ರಿಕೆಟ್ನಲ್ಲಿ ಬಾರಿಸಿರುವ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ 35ನೇ ವರ್ಷದ ಜನುದಿನದಿಂದೇ ಅವರು ಈ ಸಾಧನೆ ಮಾಡಿರುವುದು ವಿಶೇಷ ಹಾಗೂ ಅವರ ಪಾಲಿಗೆ ಸ್ಮರಣೀಯ.
ಈ ಸುದ್ದಿಯನ್ನೂ ಓದಿ: Virat Kohli: ವಿಶ್ವಕಪ್ನಲ್ಲಿ ನೂತನ ಮೈಲುಗಲ್ಲು ತಲುಪಿದ ಬರ್ತ್ ಡೇ ಬಾಯ್ ವಿರಾಟ್ ಕೊಹ್ಲಿ
ಐತಿಹಾಸಿಕ ಕೋಲ್ಕೊತಾದ ಈಡನ್ ಗಾರ್ಡನ್ಸ್ನ ಸ್ಟೇಡಿಯಮ್ನಲ್ಲಿ ಅವರು ಸಾಧನೆ ಮಾಡಿರುವುದು ಭಾರತ ಕ್ರಿಕೆಟ್ ಕ್ಷೇತ್ರದ ಪಾಲಿಗೆ ಇನ್ನೂ ವಿಶೇಷ. ವಿರಾಟ್ ಕೊಹ್ಲಿ ಈಗ 79 ಅಂತಾರಾಷ್ಟ್ರಿಯ ಶತಕದ ಸರದಾರ. ಅವರು ಖಾತೆಯಲ್ಲೀಗ 79 ಶತಕಗಳಿವೆ. ಅದರಲ್ಲಿ 29 ಶತಕ ಟೆಸ್ಟ್ ಕ್ರಿಕೆಟ್ನಲ್ಲಾದರೆ ಒಂದು ಶತಕ ಟಿ20 ಕ್ರಿಕೆಟ್ನಲ್ಲಾಗಿದೆ. ಗರಿಷ್ಠ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರಿಗಿಂತ 21 ಶತಕಗಳಿಂದ ಹಿಂದಿದ್ದಾರೆ.
ಹೊಸ ಮೈಲುಗಲ್ಲು ಸ್ಥಾಪಿಸಿದ ಕೊಹ್ಲಿ
ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 1500* ರನ್ ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 2ನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.