ಮುಂಬಯಿ: ಗುರುವಾರ ಶ್ರೀಲಂಕಾ ವಿರುದ್ಧದ ವಿಶ್ವಕಪ್ 2023 ರ ಮುಖಾಮುಖಿಯಲ್ಲಿ ಬ್ಯಾಟಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಇಡೀ ಮೈದಾನದಲ್ಲಿ ಶೋಸ್ಟಾಪರ್ ಎನಿಸಿಕೊಂಡಿದ್ದರು. ಅವರ ಸಂಭ್ರಮಾಚರಣ, ಅವರ ಕುಣಿತ ಎಲ್ಲವೂ ಪ್ರೇಕ್ಷಕರ ಅಭಿಮಾನಕ್ಕೆ ಕಾರಣವಾಗಿತ್ತು. ಆದರೆ ಪಂದ್ಯ ಮುಗಿದ ಬಳಿಕ ಹೋಟೆಲ್ಗೆ ವಾಪಸ್ ತೆರಳುವಾಗ ಅವರು ಟೀಮ್ ಬಸ್ ಯಾಕೆ ಹತ್ತಿಲ್ಲ ಎಂಬುದೇ ಎಲ್ಲರ ಅಚ್ಚರಿಗೆ ಕಾರಣವಾಯಿತು. ಕೊಹ್ಲಿ ಎಲ್ಲರ ಜತೆ ಬಸ್ನಲ್ಲಿ ತೆರಳದೇ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವ ತಮ್ಮ ಐಷಾರಾಮಿ ಲ್ಯಾಂಡ್ ರೋವರ್ ವೋಗ್ ಅನ್ನು ಸವಾರಿ ಮಾಡುವ ಮೂಲಕ ಟೀಮ್ ಹೋಟೆಲ್ಗೆ ತಲುಪಿದರು.
ಟೀಮ್ ಬಸ್ ಇರುವ ಹೊರತಾಗಿಯೂ ಕೊಹ್ಲಿ ತಮ್ಮದೇ ಕಾರನ್ನು ಅಲ್ಲಿಗೆ ತರಿಸಿಕೊಂಡಿದ್ದು ಯಾಕೆ ಎಂಬುದೇ ಅಚ್ಚರಿಯ ವಿಷಯ. ತಂಡವಾಗಿ ಹೋಗಬೇಕಾದವರು ಪ್ರತ್ಯೇಕವಾಗಿ ಹೋಗಿದ್ದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಅದು ಸರಿಯಾದ ಕ್ರಮ ಎಂದು ಹೇಳಿಕೊಂಡಿದ್ದಾರೆ. ಕೊಹ್ಲಿ ಮುಂಬೈನಲ್ಲಿ ದೊಡ್ಡ ಬಂಗಲೆ ಹೊಂದಿದ್ದಾರೆ. ಹೀಗಾಗಿ ಕಾರು ಸೇರಿದಂತೆ ಹಲವು ಸಂಪತ್ತುಗಳು ಮುಂಬೈನಲ್ಲೇ ಇವೆ. ಹೀಗಾಗಿ ಐಷಾರಾಮಿ ಕಾರಿನಲ್ಲಿ ಪ್ರಯಾಣ ಮಾಡುವ ಅವಕಾಶವನ್ನು ಅವರು ನಷ್ಟ ಮಾಡಿಕೊಳ್ಳಲಿಲ್ಲ ಎಂದು ಸಾಕಷ್ಟು ಅವರ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಕಾರುಗಳ ಸಂಗ್ರಹ ಎಷ್ಟಿದೆ
ವಿರಾಟ್ ಕೊಹ್ಲಿ ಆಟೋಮೊಬೈಲ್ ಪ್ರಿಯ. ವಿಶೇಷವಾಗಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಬಗ್ಗೆ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಆಡಿ ಆರ್ ಎಸ್ 5, ಆಡಿ ಆರ್ 8, ಆಡಿ ಎ 8, ಲ್ಯಾಂಡ್ ರೋವರ್ ವೋಗ್, ಬೆಂಟ್ಲೆ ಫ್ಲೈಯಿಂಗ್ ಸ್ಪರ್, ಆಡಿ ಕ್ಯೂ 7 ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಸೇರಿದಂತೆ ಆಕರ್ಷಕ ವಾಹನಗಳನ್ನು ಹೊಂದಿದ್ದಾರೆ.
ಗಿಲ್ಗೆ ಲೇವಡಿ ಮಾಡಿದವರಿಗೆ ಪಾಠ ಕಲಿಸಿದ ಕೊಹ್ಲಿ
ಮುಂಬಯಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಶೋ ಸ್ಟಾಪರ್ ಎನಿಸಿಕೊಂಡಿದ್ದರು. “ಮೈ ನೇಮ್ ಈಸ್ ಲಖನ್” ಹಾಡಿಗೆ ಕೊಹ್ಲಿ ನೃತ್ಯ ಮಾಡುತ್ತಿರುವುದನ್ನು ಪ್ರೇಕ್ಷಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. “ಕೊಹ್ಲಿ ಕೋ ಬೌಲಿಂಗ್ ದೋ (ಕೊಹ್ಲಿಗೆ ಚೆಂಡನ್ನು ನೀಡಿ)” ಎಂದು ಅಭಿಮಾನಿಗಳು ಕೂಗಿದ್ದೂ ನಡೆಯಿತು. ತಕ್ಷಣ ಅವರು ಅಣಕು ಬೌಲಿಂಗ್ ಕೂಡ ಮಾಡಿದ್ದರು. ಆದರೆ ಅಭಿಮಾನಿಗಳು ನಿರಂತರವಾಗಿ “ಸಾರಾ, ಸಾರಾ” ಎಂದು ಶುಭ್ಮನ್ ಗಿಲ್ (Shubhman Gill) ಅವರನ್ನು ಕರೆದಿದ್ದ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು.
ಫೀಲ್ಡಿಂಗ್ ವೇಳೆ ಮೊದಲ ಸ್ಲಿಪ್ನಲ್ಲಿ ಕೊಹ್ಲಿ ಮತ್ತು ಎರಡನೇ ಸ್ಥಾನದಲ್ಲಿ ಗಿಲ್ ನಿಂತಿದ್ದರು. ಪ್ರತಿ ಎಸೆತದಲ್ಲೂ ಎಸೆತದಲ್ಲೂ ಕ್ಯಾಚ್ ಪಡೆಯುವ ನಿರೀಕ್ಷೆಯಲ್ಲಿದ್ದರು ಅವರಿಬ್ಬರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರನ್ನೊಳಗೊಂಡ ಭಾರತದ ವೇಗಿಗಳು ಬೌಲಿಂಗ್ನಲ್ಲಿ ಕ್ಯಾಚ್ ಪಡೆಯಲು ಕಾಯುತ್ತಿದ್ದರು. ಬುಮ್ರಾ ಮತ್ತು ಸಿರಾಜ್ ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದರೆ, ಶಮಿ ಎರಡು ವಿಕೆಟ್ ಓವರ್ ಪ್ರಾರಂಭಿಸಿದರು.
ಇದನ್ನೂ ಓದಿ: ICC World Cup 2023 : ಭಾರತ ತಂಡಕ್ಕೆ ಅಂಪೈರ್ಗಳು ಬೇರೆಯೇ ಚೆಂಡು ಕೊಡುತ್ತಾರೆ; ಪಾಕ್ ಕ್ರಿಕೆಟಿಗನ ನಂಜಿನ ಮಾತು
ಈ ಮಧ್ಯೆ ಶ್ರೀಲಂಕಾದ ಬ್ಯಾಟರ್ಗಳಾದ ಚರಿತ್ ಅಸಲಂಕಾ ಮತ್ತು ಏಂಜೆಲೊ ಮ್ಯಾಥ್ಯೂಸ್ 6.2 ಓವರ್ಗಳ ತನಕ ಪ್ರತಿರೋಧ ತೋರಿದರು. ಆ ಅವಧಿಯಲ್ಲಿಯೇ ಕೊಹ್ಲಿ ಮತ್ತು ಗಿಲ್ ವಾಂಖೆಡೆ ಪ್ರೇಕ್ಷಕರೊಂದಿಗೆ ಸ್ಲಿಪ್ ನಲ್ಲಿ ಅಕ್ಕಪಕ್ಕ ಇದ್ದರು. ಈ ವೇಳೆ ಪ್ರೇಕ್ಷಕರು ಗಿಲ್ ಅವರನ್ನು ‘ಸಾರಾ ಸಾರಾ’ ಘೋಷಣೆಗಳೊಂದಿಗೆ ಗೇಲಿ ಮಾಡಲು ಪ್ರಾರಂಭಿಸಿದರು. ತಕ್ಷಣ ಕೊಹ್ಲಿ ಅವರನ್ನು ಉದ್ದೇಶಿಸಿ ಆ ರೀತಿ ಹೇಳುವುದನ್ನು ನಿಲ್ಲಿಸುವಂತೆ ವಿನಂತಿಸಿದರು. ನಂತರ ಅವರು ಗಿಲ್ ಕಡೆಗೆ ತೋರಿಸಿದರು ಮತ್ತು ಗಿಲ್ ಹೆಸರು ಹೇಳುವಂತೆ ಪ್ರೇಕ್ಷಕರನ್ನು ಕೋರಿಕೊಂಡರು ಕೊಹ್ಲಿ ಕೈ ಸನ್ನೆಗಳಿಂದ ಅವರನ್ನು ಹುರಿದುಂಬಿಸುತ್ತಿದ್ದಂತೆ “ಶುಭ್ಮನ್ ಶುಬ್ಮನ್” ಘೋಷಣೆಗಳು ಕ್ರೀಡಾಂಗಣವನ್ನು