ಗುವಾಹಟಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಭಾರತದ ತಂಡದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 80 ಎಸೆತಗಳಲ್ಲಿ ಅವರು ಮೂರಂಕಿ ಮೊತ್ತದ ಗಡಿ ಮುಟ್ಟಿದರು.
ಸಚಿನ್ ತೆಂಡೂಲ್ಕರ್ ಅವರು ಏಕ ದಿನ ಮಾದರಿಯ ಕ್ರಿಕೆಟ್ನಲ್ಲಿ ತವರು ನೆಲದಲ್ಲಿ 20 ಶತಕಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಇದೀಗ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಲಂಕಾ ವಿರುದ್ಧದ ಶತಕ ಕೊಹ್ಲಿಯ 20ನೇ ಶತಕವಾಗಿದೆ. ಏಕ ದಿನ ಮಾದರಿಯಲ್ಲಿ ಅವರದ್ದು 45ನೇ ಶತಕವಾಗಿದೆ.
ಸಚಿನ್ ತೆಂಡೂಲ್ಕರ್ ಅವರು 164 ಪಂದ್ಯಗಳಲ್ಲಿ 20 ಶತಕಗಳ ದಾಖಲೆ ಮಾಡಿದ್ದರೆ, ವಿರಾಟ್ ಕೊಹ್ಲಿಗೆ 102ನೇ ಪಂದ್ಯವಾಗಿದೆ. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ 72ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.
ಸಚಿನ್ ತೆಂಡೂಲ್ಕರ್ ಅವರು ಶ್ರೀಲಂಕಾ ವಿರುದ್ಧವೇ 8 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, ಏಕ ದಿನ ಮಾದರಿಯಲ್ಲಿ 3113 ರನ್ ರನ್ ಬಾರಿಸಿದ್ದಾರೆ. ಕೊಹ್ಲಿಯದ್ದು 9ನೇ ಶತಕ.
ಇದನ್ನೂ ಓದಿ | Virat Kohli | ಶ್ರೀಲಂಕಾ ವಿರುದ್ಧದ ಸರಣಿಯ ಮೊದಲು ಬಿಡುವಿನ ವೇಳೆ ವಿರಾಟ್ ಕೊಹ್ಲಿ ತೆಗಿಸಿಕೊಂಡ ಫೋಟೊಗಳು ಇಲ್ಲಿವೆ