ಪೋರ್ಟ್ ಆಫ್ ಸ್ಪೇನ್: ಅಭಿಮಾನಿಗಳ ಕಾಯುವಿಕೆ ಕೊನೆಯಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಿಮವಾಗಿ ಐದು ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಕೊಹ್ಲಿ 29ನೇ ಟೆಸ್ಟ್ ಶತಕ ಬಾರಿಸಿದ್ದಾರೆ. 2018 ರ ಡಿಸೆಂಬರ್ನಲ್ಲಿ ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಪರ್ತ್ನಲ್ಲಿ (123 ರನ್) ಶತಕ ಬಾರಿಸಿದ್ದರು. ಅದರು ವಿದೇಶಿ ನೆಲದಲ್ಲಿ ಅವರ ಈ ಹಿಂದಿನ ಕೊನೇ ಶತಕವಾಗಿತ್ತು. ಅದರೆ ಪೋರ್ಟ್ ಆಫ್ ಸ್ಪೇನ್ನಲ್ಲಿ ಕೊಹ್ಲಿ ಅವರ ಶತಕವು ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ.
GOAT drive 🇮🇳#ViratKohli𓃵 @imVkohli
— Sushant Mehta (@SushantNMehta) July 20, 2023
pic.twitter.com/btJhwb6h4C
34 ವರ್ಷದ ಬ್ಯಾಟರ್ಗೆ ಇದು 500ನೇ ಅಂತಾರಾಷ್ಟ್ರಿಯ ಪಂದ್ಯ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರ ಭಾರತಕ್ಕಾಗಿ ಇಷ್ಟೊಂದು ಪಂದ್ಯಗಳನ್ನು ಆಡಿದವರು. ಮೊದಲ ದಿನ ಕೊಹ್ಲಿ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (8586) ಅವರನ್ನು ಹಿಂದಿಕ್ಕುವ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಶತಕದೊಂದಿಗೆ ಭಾರತದ ಬ್ಯಾಟರ್ಗೆ ನೆನಪಿಡಬೇಕಾದ ಟೆಸ್ಟ್ ಪಂದ್ಯ ಎನಿಸಿಕೊಂಡಿದೆ.
ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 29 ಟೆಸ್ಟ್ ಶತಕಗಳನ್ನು ಬಾರಿಸಿದಂತಾಗಿದ್ದು. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿದ್ದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೀಗ ಅವರು ಸಚಿನ್ ತೆಂಡೂಲ್ಕರ್, ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಹೆಚ್ಚುವರಿಯಾಗಿ, ಇದು ವೆಸ್ಟ್ ಇಂಡೀಸ್ನಲ್ಲಿ ಅವರ ಎರಡನೇ ಟೆಸ್ಟ್ ಶತಕವಾಗಿದೆ. ಅಲ್ಲದೆ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ವಿಂಡೀಸ್ ತಂಡದ ವಿರುದ್ಧ ಒಟ್ಟಾರೆ 3ನೇ ಶತಕವಾಗಿದೆ.
ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್
ಕೆರಿಬಿಯನ್ ನೆಲದಲ್ಲಿ 2ನೇ ಶತಕ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು. ಸುನಿಲ್ ಗವಾಸ್ಕರ್ (7) ಮತ್ತು ರಾಹುಲ್ ದ್ರಾವಿಡ್, ದಿಲೀಪ್ ಸರ್ದೇಸಾಯಿ ಮತ್ತು ಪಾಲಿ ಉಮ್ರಿಗರ್ (ಎಲ್ಲರೂ 3 ಶತಕಗಳೊಂದಿಗೆ) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ ;Virat Kohli : ವಿರಾಟ್ ಕೊಹ್ಲಿ ಶತಕ; ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮ
ವಿರಾಟ್ ಕೊಹ್ಲಿ ಇದು ಸುಲಭ ಸಾಧನೆಯಾಗಿರಲಿಲ್ಲ. , ಅವರು ಕ್ರೀಸ್ಗೆ ಬಂದಾಗ ತ್ವರಿತವಾಗಿ ವಿಕೆಟ್ಗಳು ಉರುಳಿದ್ದವು. ಕೊಹ್ಲಿ ಆಗಮನದ ನಂತರ ಭಾರತದ ನಾಯಕ ರೋಹಿತ್ ಶರ್ಮಾ (80) ನಿರ್ಗಮಿಸಿದ್ದರು. ಶುಭಮನ್ ಗಿಲ್ (10) ಮತ್ತು ಅಜಿಂಕ್ಯ ರಹಾನೆ (8) ಕೂಡ ಬೇಗನೆ ಪೆವಿಲಿಯನ್ ಕಡೆಗೆ ಸಾಗಿದ್ದರು. ಆದರೆ, ರವೀಂದ್ರ ಜಡೇಜಾ ಅವರೊಂದಿಗೆ ಜತೆಯಾಟ ನಿರ್ಮಿಸಿದ ಕೊಹ್ಲಿ ಮೊದಲ ಕೆಲವು ಓವರ್ಗಳಲ್ಲಿ ಎಚ್ಚರಿಕೆ ಆಡವಾಡಿ ಇನಿಂಗ್ಸ್ ಕಟ್ಟಿದರು.
ವಿರಾಟ್ ಲಯ ಕಂಡುಕೊಂಡ ಬಳಿಕ ರನ್ ಹರಿದು ಬರಲು ಪ್ರಾರಂಭಿಸಿದವು . ತಕ್ಷಣವೇ ಕೊಹ್ಲಿ ತಮ್ಮ ಅರ್ಧ ಶತಕವನ್ನು ತಲುಪಿದರು. ಇವರಿಬ್ಬರು ಭಾರತೀಯ ಇನ್ನಿಂಗ್ಸ್ ಅನ್ನು ಕಟ್ಟಿದರು ಬ್ಯಾಟರ್ 66ನೇ ಓವರ್ನಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿ ಬಳಿಕ ಸ್ಕೋರ್ ಮಾಡುವ ವೇಗ ಹೆಚ್ಚಿಸಿದರು. ಹೀಗಾಗಿ ಮೊದಲ ದಿನದ ಅಂತ್ಯದ ವೇಳೆಗೆ ಅಜೇಯ 87 ರನ್ ಗಳಿಸಿದರು.
ನಾಲ್ಕನೇ ಓವರ್ ಕೊನೆಯ ಎಸೆತದಲ್ಲಿ ಕೊಹ್ಲಿ 2ನೇ ದಿನದ ಮೊದಲ ಬೌಂಡರಿಯನ್ನು ಬಾರಿಸಿದರು. ಕೇಮರ್ ರೋಚ್ ಅವರ ಎಸೆತಕ್ಕೆ ಈ ಸಾಧನೆ ಮಾಡಿದರು. ಅಂತಿಮವಾಗಿ ಶಾನನ್ ಗೇಬ್ರಿಯಲ್ ವಿರುದ್ಧ ಟ್ರೇಡ್ಮಾರ್ಕ್ ಕವರ್ ಡ್ರೈವ್ ಬಾರಿಸಿ ತಮ್ಮ ಶತಕ ಪೂರೈಸಿದರು.