ಮುಂಬಯಿ: ವಿರಾಟ್ ಕೊಹ್ಲಿ(Virat Kohli) ಮೈದಾನದಲ್ಲಿ ಎಷ್ಟು ಬದ್ಧತೆ, ಗಮನ ಕೇಂದ್ರೀಕರಿಸಿ ಅಬ್ಬರಿಸುತ್ತಾರೋ, ಅಷ್ಟೇ ನಿಷ್ಠೆಯಿಂದ ಫಿಟ್‌ನೆಸ್‌ಗೂ(Virat Kohli Fitness) ಆದ್ಯತೆ ಕೊಡುತ್ತಾರೆ. ಅದರಲ್ಲೂ, ಯಾವುದಾದರೂ ಸರಣಿ, ವಿಶ್ವಕಪ್ ಆರಂಭವಾಗುವ ಕೆಲ ದಿನಗಳ ಮೊದಲಂತೂ ಅವರು ಹೆಚ್ಚು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಹಾಗೆಯೇ, ಜಿಮ್‌ನಲ್ಲಿ ತಾಸುಗಟ್ಟಲೆ ವರ್ಕೌಟ್ ಮಾಡುವ ಮೂಲಕ ಹೆಚ್ಚು ಫಿಟ್ ಆಗಿರಲು, ಮೈದಾನದಲ್ಲಿ ಮಿಂಚಲು ಸಿದ್ಧರಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಆಗಸ್ಟ್ 30 ರಿಂದ ಆರಂಭವಾಗುವ ಏಷ್ಯಾ ಕಪ್ ಟೂರ್ನಿಗೆ(Asia Cup 2023) ಮುನ್ನ ವಿರಾಟ್ ಕೊಹ್ಲಿ (Virat Kohli) ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ಅವರ ಕಸರತ್ತಿನ ವಿಡಿಯೊ ವೈರಲ್(viral video) ಆಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನಾಡಿ ವಿಶ್ರಾಂತಿಯಲ್ಲಿರುವ ಕೊಹ್ಲಿ ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಏಷ್ಯಾಕಪ್‌ಗೆ ಭಜರಿ ಸಿದ್ಧತೆಗಳನ್ನು ಮಾಡಲಾರಂಭಿಸಿದ್ದಾರೆ. ಜಿಮ್‌ನಲ್ಲಿ ಟ್ರೆಡ್ ಮಿಲ್‌ನಲ್ಲಿ ಓಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ರಜೆಯಲ್ಲಿದ್ದರೂ ನಾವು ಓಡುತ್ತಲೇ ಇರಬೇಕು ಎಂದು ಬರೆದುಕೊಂಡಿದ್ದಾರೆ. ಅವರ ಈ ಮಾತಿನ ಅರ್ಥ ಸಾಧಿಸಬೇಕಿದ್ದರೆ ಕಷ್ಟ ಪಡೆಲೇ ಬೇಕು, ರಜೆ ಎಂದು ಎಂಜಾಯ್ ಮಾಡಿದರೆ ಸಾಧಿಸಲು ಅಸಾಧ್ಯ ಎಂಬ ಅರ್ಥ ನೀಡುತ್ತದೆ.
ಹಲವರಿಗೆ ಸ್ಫೂರ್ತಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ವಿಶ್ವ ಕ್ರಿಕೆಟ್ನ ಅತ್ಯಂತ ಫಿಟ್ ಆಗಿರುವ ಕ್ರಿಕೆಟಿಗ ಅವರ ಫಿಟ್‌ನೆಸ್ ಬಗ್ಗೆ ಬದ್ಧ ವೈರಿ ಪಾಕ್ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ. ಅದೆಷ್ಟೋ ಕ್ರಿಕೆಟ್ ಆಟಗಾರರಿಗೆ ಅವರು ಫಿಟ್‌ನೆಸ್ ವಿಚಾರದಲ್ಲಿಯೂ ಸ್ಫೂರ್ತಿಯಾಗಿದ್ದಾರೆ. ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್‌ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ Virat Kohli : ಸುಳ್ಳು ಸುದ್ದಿಗಳ ಬಗ್ಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ವಿರಾಟ್ ಕೊಹ್ಲಿ
ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.
4ನೇ ಸ್ಥಾನಕ್ಕೆ ಕೊಹ್ಲಿ ಸೂಕ್ತ
ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿಯ ದಾಖಲೆಯನ್ನು ಉಲ್ಲೇಖಿಸಿ, ಸ್ಟಾರ್ ಭಾರತೀಯ ಬ್ಯಾಟರ್ ಏಳು ಶತಕಗಳೊಂದಿಗೆ 55.21 ಸರಾಸರಿಯಲ್ಲಿ 1767 ರನ್ ಗಳಿಸಿದರು, ಶಾಸ್ತ್ರಿ ಅವರು ಅಗ್ರ ನಾಲ್ಕು ಆಟಗಾರರು ಹೊಂದಿಕೊಳ್ಳಲು ಬಯಸಿದ್ದರು ಮತ್ತು ಕೊಹ್ಲಿ ತಂಡಕ್ಕೆ ಅಗತ್ಯವಿರುವಲ್ಲೆಲ್ಲಾ ಬ್ಯಾಟಿಂಗ್ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ರವಿಶಾಸ್ತ್ರಿ ಪ್ರಕಟಿಸಿದ ತಂಡ
ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ.