Site icon Vistara News

Virat Kohli : ವಿಂಡೀಸ್ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಕೊಹ್ಲಿ ದಾಖಲಿಸಬಹುದಾದ 4 ರೆಕಾರ್ಡ್​ಗಳ ವಿವರ ಇಲ್ಲಿದೆ

Virat Kohli

ನವದೆಹಲಿ: ಜುಲೈ 20ರಂದು ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಹಿರಿಯ ಬ್ಯಾಟರ್​ ವಿರಾಟ್ ಕೊಹ್ಲಿ ಕೆಲವು ದಾಖಲೆಗಳನ್ನು ಮುರಿಯಲಿದ್ದಾರೆ. ಈ ಮೂಲಕ ಅವರ ಪಂದ್ಯವನ್ನು ಸ್ಮರಣೀಯ ಮಾಡಿಕೊಳ್ಳಲಿದ್ದಾರೆ. ಎರಡನೇ ಪಂದ್ಯಕ್ಕೂ ಮುನ್ನ ಕೊಹ್ಲಿ ತಮ್ಮ 500 ನೇ ಅಂತರರಾಷ್ಟ್ರೀಯ ಪಂದ್ಯ ಸೇರಿದಂತೆ ಕೆಲವು ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವುಗಳ ವಿವರ ಇಲ್ಲಿದೆ.

500ನೇ ಅಂತಾರಾಷ್ಟ್ರೀಯ ಪಂದ್ಯ

ವಿರಾಟ್​ ಕೊಹ್ಲಿ ಭಾರತ ತಂಡದ ಪರವಾಗಿ 500ನೇ ಪಂದ್ಯವನ್ನು ಆಡಲು ಕೇವಲ ಒಂದು ಪಂದ್ಯ ಬಾಕಿ ಇದೆ. ಭಾರತ ಪರ 110 ಟೆಸ್ಟ್, 274 ಏಕದಿನ ಹಾಗೂ 115 ಟಿ20 ಪಂದ್ಯಗಳನ್ನಾಡಿದ್ದಾರೆ. ಆಧುನಿಕ ಕಾಲದ ಶ್ರೇಷ್ಠ ಆಟಗಾರ ಮತ್ತೊಂದು ಟೆಸ್ಟ್​​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲು ಇಳಿದರೆ ಹೆಸರು ದಾಖಲೆ ಪುಸ್ತಕ ಸೇರುತ್ತದೆ. ಧೋನಿ, ದ್ರಾವಿಡ್​ ಹಾಗೂ ಸಚಿನ್​ ತೆಂಡೂಲ್ಕರ್​ 500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಭಾರತ ತಂಡದ ಇತರ ಆಟಗಾರರು.

ಜಾಕ್ ಕಾಲಿಸ್ ರನ್ ದಾಖಲೆ

ಕ್ರಿಕೆಟ್ ಕ್ಷೇತ್ರದ ಸಾರ್ವಕಾಳಿಕ ಶ್ರೇಷ್ಠ ಆಲ್ರೌಂಡರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಜಾಕ್ ಕಾಲಿಸ್ ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ 617 ಇನಿಂಗ್ಸ್​​ಗಳಲ್ಲಿ 25,534 ರನ್ ಗಳಿಸಿದ್ದಾರೆ. ಕೊಹ್ಲಿ ಈಗಾಗಲೇ 558 ಇನ್ನಿಂಗ್ಸ್​ಗಳಲ್ಲಿ 5,461 ರನ್ ಗಳಿಸಿರುವುದರಿಂದ ಕಾಲಿಸ್ ಅವರನ್ನು ಹಿಂದಿಕ್ಕಲು ಸಾಧ್ಯವಿದೆ. ಬಲಗೈ ಬ್ಯಾಟರ್​ ಜಾಕ್​ ಕಾಲಿಸ್ ಅವರನ್ನು ಹಿಂದಿಕ್ಕಲು ಮತ್ತು ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 73 ರನ್ ಗಳಿಸಬೇಕಾಗಿದೆ. ಈ ಮೂಲಕ ಗರಿಷ್ಠ ರನ್​ ಗಳಿಸಿದವರ ಸಾಲಿನಲ್ಲಿ ಐದನೇ ಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ : Virat kohli : ಧೋನಿ- ತೆಂಡೂಲ್ಕರ್ ಸಾಲಿಗೆ ಸೇರಲಿದ್ದಾರೆ ವಿರಾಟ್ ಕೊಹ್ಲಿ, ಏನದು ದಾಖಲೆ?

ಟೆಸ್ಟ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಸೆಹ್ವಾಗ್ ದಾಖಲೆ

ಟೆಸ್ಟ್ ಮಾದರಿಯಲ್ಲಿ ಗಳಿಸಿದ ರನ್​ಗಳ ವಿಚಾರದಲ್ಲಿ ವಿರಾಟ್​​ ಕೊಹ್ಲಿ ಭಾರತದ ಮಾಜಿ ಸಹ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಲು ಸಜ್ಜಾಗಿದ್ದಾರೆ. ಸೆಹ್ವಾಗ್ 104 ಪಂದ್ಯಗಳಲ್ಲಿ 8586 ರನ್ ಗಳಿಸಿದರೆ, ಕೊಹ್ಲಿ 110 ಪಂದ್ಯಗಳಲ್ಲಿ 8555 ರನ್ ಗಳಿಸಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ ಅವರನ್ನು ಹಿಂದಿಕ್ಕಲು ಸಾಧ್ಯವಿದೆ.

76 ನೇ ಅಂತಾರಾಷ್ಟ್ರೀಯ ಶತಕ

ಕೆರಿಬಿಯನ್​ ರಾಷ್ಟ್ರದ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ ತಮ್ಮ 76ನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸುವ ಸನಿಹದಲ್ಲಿದ್ದರು. ರಕೀಮ್ ಕಾರ್ನ್​ವಾಲ್​ ಎಸೆತಕ್ಕೆ ಔಟಾಗದೇ ಹೋಗಿದ್ದರೆ ಶತಕ ದಾಖಲೆಯಾಗುತ್ತಿತ್ತು. ಅದಕ್ಕಿಂತ ಮೊದಲು 24 ರನ್​ಗಳಿಂದ ಶತಕದಿಂದ ವಂಚಿತರಾದರು. ಎರಡನೇ ಟೆಸ್ಟ್ ಪಂದ್ಯಕ್ಕೆ ಬಂದರೆ, ಕಿಂಗ್ ಕೊಹ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಲು ಅವಕಾಶ ಇದೆ. ಹೀಗಾಗಿ 76ನೇ ಶತಕವನ್ನು ನಿರೀಕ್ಷೆ ಮಾಡಬಹುದು.

    Exit mobile version