Site icon Vistara News

Virat kohli : ದ್ರಾವಿಡ್​, ಸೆಹ್ವಾಗ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ವಿರಾಟ್​ ಕೊಹ್ಲಿ

Virat kohli

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್​ ಕೊಹ್ಲಿ (Virat kohli) ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಹೋಗಲು ಸಿದ್ಧರಾಗಿದ್ದಾರೆ. ಟೆಸ್ಟ್​ ಮುಖಾಮುಖಿಯು ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲವಿನ ಬರವನ್ನು ನೀಗಿಸಲು ಅಪಾರ ಅವಕಾಶವನ್ನು ಸೃಷ್ಟಿಸಿದೆ. ಹೀಗಾಗಿ ಕೊಹ್ಲಿ ಸೇರಿದಂತೆ ಭಾರತದ ಬ್ಯಾಟರ್​ಗಳಿಗೆ ಮಿಂಚಲು ಸಾಕಷ್ಟು ಅವಕಾಶಗಳಿವೆ. ಏತನ್ಮಧ್ಯೆ, ವಿರಾಟ್​ ಕೊಹ್ಲಿ ಆಡಲು ಕಣಕ್ಕೆ ಇಳಿಯುವ ಮೊದಲು ವೈಯಕ್ತಿಕ ದಾಖಲೆಯ ಮೇಲೂ ಗಮನ ಹರಿಸಿರುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಭಾರತದ ಬ್ಯಾಟರ್​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಅವರಿಗೆ ಇದೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ,ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಂತಕಥೆಗಳನ್ನು ಹಿಂದಿಕ್ಕಬಹುದು.

ಟೆಸ್ಟ್ ಕ್ರಿಕೆಟ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1236 ರನ್ ಗಳಿಸಿರುವ ಕೊಹ್ಲಿ ದಕ್ಷಿಣ ಆಫ್ರಿಕಾದ ಬೌಲಿಂಗ್ ವಿರುದ್ಧ ಕಚ್ಛೆದೆಯ ಪ್ರದರ್ಶನ ನೀಡುತ್ತಾರೆ. ಈ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ ಭಾರತೀಯ ಕೋಚ್ ರಾಹುಲ್ ದ್ರಾವಿಡ್ ಅವರಿಗಿಂತ 16 ರನ್ ಹಿಂದಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ನಲ್ಲಿಯೇ ‘ದಿ ವಾಲ್’ ಅನ್ನು ಹಿಂದಿಕ್ಕುವ ಎಲ್ಲ ಅವಕಾಶಗಳು ಇವೆ.

ದ್ರಾವಿಡ್ ಮಾತ್ರವಲ್ಲ, ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಕೊಹ್ಲಿಗೆ ಮಾಜಿ ಸ್ಫೋಟಕ ಬ್ಯಾಟರ್ ಹಿಂದಿಕ್ಕಲು 71 ರನ್​ಗಳ ಅಗತ್ಯವಿದೆ. ಆದಾಗ್ಯೂ, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಯವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ಸಚಿನ್ ಮತ್ತು ಕೊಹ್ಲಿಯ ರನ್​ಗಳ ಅಂತರವು 506 ರನ್​ಗಳಷ್ಟಿದೆ. ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ ಒಂದು ಸರಣಿಯ ಅಗತ್ಯವಿದೆ.

ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕುವ ಗುರಿಯನ್ನು ಕೊಹ್ಲಿ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗರಿಷ್ಠ ರನ್ ಗಳಿಸಿದವರ ಪಟ್ಟಿ

ದಕ್ಷಿಣ ಆಫ್ರಿಕಾದಿಂದ ದಿಢೀರ್​ ಭಾರತಕ್ಕೆ ಮರಳಿದ ವಿರಾಟ್​ ಕೊಹ್ಲಿ

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ದಿಢೀರ್​ ಭಾರತಕ್ಕೆ ಮರಳಿದ್ದಾರೆ. ಬೆರಳಿನ ಗಾಯಕ್ಕೀಡಾದ ಯುವ ಬ್ಯಾಟರ್​ ಋತುರಾಜ್ ಗಾಯಕ್ವಾಡ್​(Ruturaj Gaikwad) ಟೆಸ್ಟ್​ ಸರಣಿಯಿಂದ ಹೊರಬಿದ್ದಾರೆ.

ಇದನ್ನೂ ಓದಿ : Dean Elgar: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೀನ್​ ಎಲ್ಗರ್

ಟೆಸ್ಟ್ ಸರಣಿ ಆರಂಭಕ್ಕೂ 10 ದಿನ ಮುಂಚಿತವಾಗಿ ಕೊಹ್ಲಿ ಏಕಾಂಗಿಯಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲದೆ ಅಭ್ಯಾಸ ಕೂಡ ಆರಂಭಿಸಿದ್ದರು. ಇದೀಗ ಕೊಹ್ಲಿ ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಮತ್ತೆ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಟೆಸ್ಟ್​ ಸರಣಿ ಡಿಸೆಂಬರ್​ 26ರಿಂದ ಆರಂಭಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ಶನಿವಾರ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮ ಗರ್ಭಿಣಿಯಾಗಿರುವುದು ಈಗಾಗಲೇ ತಿಳಿದ ವಿಚಾರ, ಅವರ ಆರೋಗ್ಯದ ಸಲುವಾಗಿಯೇ ಕೊಹ್ಲಿ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ. ಆದರೆ ಇದು ಖಚಿತವಾಗಿಲ್ಲ.

Exit mobile version