ಮುಂಬಯಿ: ಏಷ್ಯಾಕಪ್ ಟೂರ್ನಿಗೆ(Asia Cup 2023) ಸೋಮವಾರ ಭಾರತ ತಂಡ ಪ್ರಕಟಗೊಂಡಿದೆ. ಅತ್ತ ತಂಡದ ಸ್ಟಾರ್ ಆಟಗಾರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.(virat kohli new style) ಕಿವಿಯೋಲೆ(virat kohli earrings) ಹಾಕಿಕೊಂಡು ಸ್ಟೈಲೀಸ್ ಆಗಿರುವ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಕೊಹ್ಲಿಯ ಈ ಹೊಸ ಲುಕ್ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವೇಳೆಯೂ ಅವರು ಕಿವಿಯೋಲೆಯಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಕೊಹ್ಲಿ ತಮ್ಮ ಲುಕ್ ಹಾಗೂ ಫಿಸಿಕ್ ಬದಲಿಸಿದ್ದರು. ಮೈತುಂಬಾ ಟ್ಯಾಟುಗಗಳನ್ನು ಹಾಕಿಸಿಕೊಂಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಎರಡು ಸ್ಟೈಲೀಶ್ ಇಯರಿಂಗ್ಸ್ ಹಾಕಿದ್ದಾರೆ. ಆದರೆ ಈ ಇಯರಿಂಗ್ಸ್ಗಳ ಹಿಂದಿರುವ ರಹಸ್ಯವನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಕೊಹ್ಲಿಯ ಈ ಹೊಸ ಅವತಾರ ಸುಂದರವಾಗಿ ಕಾಣಿಸುತ್ತಿದೆ. ಕೆಲವೇ ದಿನಗಳಲ್ಲಿ ಕೊಹ್ಲಿಯಂತೆ ಅವರ ಅಭಿಮಾನಿಗಳು ಕೂಡ ಇದೇ ಶೈಲಿಯ ಕಿವಿಯೋಲೆ ತೊಡಿಸಿಕೊಂಡರೂ ಅಚ್ಚರಿಯಿಲ್ಲ.
ಧೋನಿಯ ಪರಂಪರೆ
ಭಾರತ ಕ್ರಿಕೆಟ್ ತಂಡದಲ್ಲಿ ನ್ಯೂ ಟ್ರೆಂಡ್ ಸೆಟ್ ಮಾಡಿದ್ದೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni). ಆರಂಭಿಕ ದಿನಗಳಲ್ಲಿ ಉದ್ದನೇಯ ಕೂದಲಿನ ಟ್ರೆಂಡ್ ಸೆಟ್ ಮಾಡಿದ ಅವರು ಬಳಿಕ ಪ್ರತಿಯೊಂದು ಮಹತ್ವದ ಟೂರ್ನಿಯ ವೇಳೆಯೂ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಪರಂಪರೆಯನ್ನು ಎಂ.ಎಸ್.ಧೋನಿ ಹುಟ್ಟು ಹಾಕಿದ್ದರು. ಇದಾದ ಬಳಿಕ ಧೋನಿಯ ಹಾದಿಯನ್ನೇ ಹಿಡಿದ ಅನೇಕ ಟೀಮ್ ಇಂಡಿಯಾ ಆಟಗಾರರು ಕೂಡ ಹೊಸ ಪ್ರಯೋಗದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಸರದಿ. ಏಷ್ಯಾಕಪ್ ಟೂರ್ನಿಗೂ ಮುನ್ನ ಸ್ಟೈಲೀಸ್ ಆಗಿ ಕಾಣಿಸಿಕೊಂಡಿದ್ದಾರೆ.
15 ವರ್ಷದ ಕ್ರಿಕೆಟ್ ಬಾಳ್ವೆ ಪೂರ್ತಿಗೊಳಿಸಿದ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಆಗಸ್ಟ್ 18ರಂದು ತಮ್ಮ ಕ್ರಿಕೆಟ್ ಬಾಳ್ವೆಯ 15 ವರ್ಷಗಳನ್ನು ಪೂರ್ತಿಗೊಳಿಸಿದರು.ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಆಗ ತಾನೆ ಅಂಡರ್-19 ವಿಶ್ವಕಪ್ ಗೆದ್ದಿದ್ದ ಅವರಿಗೆ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹವಾಗ್ ಅವರ ಅನುಪಸ್ಥಿತಿಯಲ್ಲಿ ಆರಂಭಿಕಾಗಿ ಆಡುವ ಅವಕಾಶ ನೀಡಲಾಗಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 12 ರನ್ ಗಳಿಸಿ ನುವಾನ್ ಕುಲಶೇಖರ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 54 ರನ್ ಗಳಿಸಿ ತಮ್ಮ ಚೊಚ್ಚಲ ಅರ್ಧಶತಕವನ್ನು ಬಾರಿಸಿದ್ದರು. ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ವೇಳೆ ಕೇವಲ 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು.
ಇದನ್ನೂ ಓದಿ Virat kohli : ವಿರಾಟ್ ಕೊಹ್ಲಿಗೆ ಡೈಮಂಡ್ ಬ್ಯಾಟ್ ಉಡುಗೊರೆ ಕೊಟ್ಟ ಸೂರತ್ ಉದ್ಯಮಿ
ಅಮೋಘ ಸಾಧನೆ
34 ವರ್ಷದ ವಿರಾಟ್ ಕೊಹ್ಲಿ ಅವರು ತಮ್ಮ 15 ವರ್ಷದ ಕ್ರಿಕೆಟ್ ಜರ್ನಿಯಲ್ಲಿ ಇದುವರೆಗೆ ಒಟ್ಟು 275 ಏಕದಿನ ಪಂದ್ಯಗಳನ್ನು ಆಡಿದ್ದು 57.32 ರ ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. ಇದರಲ್ಲಿ 46 ಶತಕ ಮತ್ತು 65 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 111 ಪಂದ್ಯಗಳಲ್ಲಿ 8,676 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 29 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಲ್ತಿಕ ಮೊತ್ತಾವಾಗಿದೆ. 115 ಟಿ20 ಪಂದ್ಯವಾಡಿ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ.