Site icon Vistara News

Virat Kohli : ರಿಂಕು ಸಿಂಗ್​ಗೆ ಬ್ಯಾಟ್ ಕೊಟ್ಟು ಅಭಿನಂದಿಸಿದ ಕೊಹ್ಲಿ

Virat Kohli

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್​ ತಂಡದ ಸ್ಫೋಟಕ ಬ್ಯಾಟರ್​ ರಿಂಕು ಸಿಂಗ್ ಗೆ (Rinku Singh) ತಮ್ಮ ಬ್ಯಾಟ್​ ಉಡುಗೊರೆಯಾಗಿ ನೀಡುವ ಮೂಲಕ ಮೂಲಕ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಪಿಚ್​ನಲ್ಲಿ ಮತ್ತು ಎಲ್ಲರ ಹೃದಯ ಗೆದ್ದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinn swamy Stadium) ಕಳೆದ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದ ನಂತರ ಕೆಕೆಆರ್​​ನ ಅಧಿಕೃತ ಇನ್​ಸ್ಟಾಗ್ರಾಮ್​ ಹ್ಯಾಂಡಲ್​​ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಪಂದ್ಯವು ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ಕೊಡುವ ಜತೆಗೆ ಕೊಹ್ಲಿಯ ಈ ಕೊಡುಗೆಯೂ ಗಮನ ಸೆಳೆಯಿತು.

ಐಪಿಎಲ್ 2024 ರ 10 ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಿತು. ಈ ಪಂದ್ಯವು ಈ ವಾರದ ಅತ್ಯಂತ ರೋಮಾಂಚಕಾರಿ ಪಂದ್ಯ ಎನಿಸಿಕೊಂಡಿತು. ಪಂದ್ಯದಲ್ಲಿ ಆರ್​ಸಿಬಿ ತಂಡ ಹೀನಾಯವಾಗಿ 7 ವಿಕೆಟ್​​ಗಳಿಂದ ಸೋತ ಹೊರತಾಗಿಯೂ ಪಂದ್ಯದ ಕೆಲವು ಕ್ಷಣಗಳು ಗಮನ ಸೆಳೆಯಿತು. ಮೊದಲಾಗಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪೈಪೋಟಿ ಕೊನೆಗೊಂಡಿತು.

ಕಳೆದ ವರ್ಷ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರಿಂಗ್ ಮಾಡುತ್ತಿದ್ದಾಗ ಅವರಿಬ್ಬರೂ ಜಗಳವಾಡಿಕೊಂಡಿದ್ದರು. ಚಿನ್ನಸ್ವಾಮಿಯಲ್ಲಿ ಅವೇಶ್ ಖಾನ್ ಅವರ ಹೆಲ್ಮೆಟ್ ಎಸೆತದಿಂದ ಉಂಟಾದ ಆರಂಭಿಕ ಗಲಾಟೆ ನಂತರ, ಲಕ್ನೋದಲ್ಲಿ ನಡೆದ ಪಂದ್ಯದ ಸಮಯದಲ್ಲಿ ನವೀನ್-ಉಲ್-ಹಕ್ ವಿರಾಟ್ ಕೊಹ್ಲಿಯನ್ನು ಪ್ರಚೋದಿಸುವ ತನಕ ಮುಂದುವರಿದಿತ್ತು. ಅಲ್ಲಿ, ಗಂಭೀರ್ ಮತ್ತು ಕೊಹ್ಲಿ ನಡುವೆ ತೀವ್ರವಾದ ವಾಗ್ವಾದ ನಡೆಯಿತು. ಇದು ನಂತರ ಐಪಿಎಲ್ 2023 ರ ಅತ್ಯಂತ ವೈರಲ್ ಕ್ಷಣವಾಯಿತು. ಆದರೆ ಈ ಪಂದ್ಯದಲ್ಲಿ ಅವರಿಬ್ಬರೂ ತಬ್ಬಿಕೊಂಡರು. ಬಳಿಕ ಪರಸ್ಪರ ಮುಗುಳ್ನಕ್ಕರು. ಇದಾದ ಬಳಿಕ , ಕೊಹ್ಲಿ ತಮ್ಮ ಬ್ಯಾಟ್ ಅನ್ನು ರಿಂಕು ಸಿಂಗ್​ಗೆ ಉಡುಗೊರೆಯಾಗಿ ನೀಡಿದರು.

ರಿಂಕು ಸಿಂಗ್ ತಬ್ಬಿಕೊಂಡ ವಿರಾಟ್ ಕೊಹ್ಲಿ

ಕೆಕೆಆರ್ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್​ನಲ್ಲಿ ವಿರಾಟ್ ಕೊಹ್ಲಿ ರಿಂಕು ಸಿಂಗ್​ಗೆ ಬ್ಯಾಟ್​ ನೀಡಿದ್ದು ಕಾರಣಬಹುದು. ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಿದ ಟಿ 20 ಐ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ರಿಂಕು ಅವರ ಚಿತ್ರಗಳನ್ನು ಸಹ ಪೋಸ್ಟ್ ಮಾಡಲಾಗಿತ್ತು.

ಇದನ್ನೂ ಓದಿ: IPL 2024 : ಕೊಹ್ಲಿ, ಗ್ರೀನ್​ ಆರ್​​ಸಿಬಿ ​ಸೋಲಿಗೆ ಕಾರಣವೇ? ಮಾಜಿ ಆಟಗಾರನ ಅಭಿಪ್ರಾಯ ಸರಿಯೇ?

ಅದೇ ಪೋಸ್ಟ್ ಅನ್ನು ನಂತರ ರಿಂಕು ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದು, “ಸಲಹೆಗಾಗಿ ಧನ್ಯವಾದಗಳು ಅಣ್ಣ ಮತ್ತು ಬ್ಯಾಟ್​ಗಾಗಿ ಎಂದು ಬರೆದಿದ್ದಾರೆ.

ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಸ್ಪರ್ಧೆಯ ಸಮಯದಲ್ಲಿ ಎಲ್ಲವೂ ಸ್ನೇಹಪರವಾಗಿತ್ತು. ದ್ವೇಷ, ಜಗಳ ಅಥವಾ ಕೋಪಕ್ಕೆ ಅವಕಾಶ ಸಿಗಲಿಲ್ಲ. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಕ್ರೀಸ್ ನಲ್ಲಿದ್ದಾಗ ಪಂದ್ಯದ ಮೊದಲ ಸ್ಟ್ರಾಟಜಿಕ್ ಟೈಮ್​ಔಟ್ ವೇಳೆ ಇದು ಸ್ಪಷ್ಟವಾಯಿತು. ಸ್ವತಃ ಗೌತಮ್ ಗಂಭೀರ್ ಅವರೇ ಕೊಹ್ಲಿ ಬಳಿಗೆ ಬಂದು ಅವರ ನಡುವಿನ ಸಂಪೂರ್ಣ ದ್ವೇಷವನ್ನು ಕೊನೆಗೊಳಿಸಿದರು.

Exit mobile version