ಅಹಮದಾಬಾದ್: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ 62ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಚೊಚ್ಚಲ ಐಪಿಎಲ್ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಐಪಿಎಲ್ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಗುಜರಾತ್ ಜೈಂಟ್ಸ್ ತಂಡಕ್ಕೆ 20 ಓವರ್ಗಳಲ್ಲಿ 188 ರನ್ ಬಾರಿಸಲು ನೆರವಾಗಿದ್ದರು. ಗಿಲ್ 58 ಎಸೆತಗಳಲ್ಲಿ 13 ಫೋರ್ಗಳೊಂದಿಗೆ 101 ರನ್ ಗಳಿಸಿದ್ದರ.
ಗಿಲ್ ಅವರ ಶತಕದ ಪ್ರಯತ್ನ ಹಾಗೂ ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ಅವರ ಮಾರಕ ದಾಳಿಯ ನೆರವು ಪಡೆದ ಗುಜರಾತ್ ತಂಡ ಹೈದರಾಬಾದ್ ತಂಡವನ್ನು 34 ರನ್ಗಳಿಂದ ಸೋಲಿಸಿತು. ಏಡೆನ್ ಮಾರ್ಕ್ರಮ್ ಪಡೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಅದ್ಭುತ ಶತಕ ಗಳಿಸಿದ ನಂತರ, ಗಿಲ್ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, 2023 ರ ಆರೆಂಜ್ ಕ್ಯಾಪ್ಗೆ ಸ್ಪರ್ಧಿಯಾದರು. ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಯುವ ಬ್ಯಾಟರ್ ಶುಭ್ಮನ್ ಗಿಲ್, ನನ್ನ ಆಟಕ್ಕೆ ವಿರಾಟ್ ಕೊಹ್ಲಿಯೇ ಸ್ಫೂರ್ತಿ. ಬಾಲ್ಯದಿಂದಲೂ ಅವರು ನನ್ನ ಆರಾಧ್ಯ ದೈವ. ಭಾರತದ ಮಾಜಿ ನಾಯಕನ ಬ್ಯಾಟಿಂಗ್, ಉತ್ಸಾಹ ಮತ್ತು ಬದ್ಧತೆ ನನಗೆ ಪ್ರೇರಣೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Shubhman Gill : ಶುಭ್ಮನ್ ಗಿಲ್ಗೆ ಐಸಿಸಿಯ ಜನವರಿ ತಿಂಗಳ ಉತ್ತಮ ಆಟಗಾರ ಗೌರವ
ನಾನು 12-13 ವರ್ಷದವನಿದ್ದಾಗ ನಾನು ವಿರಾಟ್ ಕೊಹ್ಲಿ ಅವರನ್ನು ಹೆಚ್ಚು ಅನುಸರಿಸಿದೆ, ನಾನು ಕ್ರಿಕೆಟ್ ಅನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಅವರು ನನಗೆ ಆದರ್ಶವಾಗಿದ್ದಾರೆ. ನಾನು ವಿರಾಟ್ ಅವರಿಂದ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಗಿಲ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
ಭುವನೇಶ್ವರ್ ಕುಮಾರ್ 4 ಓವರ್ಗಳಲ್ಲಿ 5/30
ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರಲ್ಲದೆ ಸಾಯಿ ಸುದರ್ಶನ್ ಅವರು 36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 47 ರನ್ ಗಳಿಸಿದ್ದರು. ಈ ಮೂಲಕ ಹಾಲಿ ಚಾಂಪಿಯನ್ಗಳಿಗೆ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು. ಆದರೆ, ಆಲ್ರೌಂಡರ್ ಮಾರ್ಕೊ ಜಾನ್ಸೆನ್ ಎಡಗೈ ಬ್ಯಾಟರ್ನನ್ನು ಪೆವಿಲಿಯನ್ಗೆ ಕಳುಹಿಸಿದರು. ಹೀಗಾಗಿ ಗುಜರಾತ್ ಟೈಟನ್ಸ್ ತಂಡದ ಮಧ್ಯಮ ಕ್ರಮಾಂಕ ಬೇಗ ಕುಸಿದು ಬಿತ್ತು. ವಿಶೇಷವೆಂದರೆ ಈ ತಂಡದ ಹನ್ನೊಂದು ಬ್ಯಾಟರ್ಗಳಲ್ಲಿ ಒಂಬತ್ತು ಮಂದಿ ಒಂದಂಕಿಗಳಲ್ಲಿ ಸ್ಕೋರ್ ಮಾಡಿದ್ದಾರೆ. ಅವರಲ್ಲಿ ನಾಲ್ವರು ಗೋಲ್ಡನ್ ಡಕ್. ಏತನ್ಮಧ್ಯೆ, ಗಿಲ್ 19 ನೇ ಓವರ್ನಲ್ಲಿ ತಮ್ಮ ಶತಕ ಪೂರೈಸಿದರು. ಆದರೆ ಅಂತಿಮ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಒಂದು ರನ್ಔಟ್ ಸೇರಿದಂತೆ ನಾಲ್ಕು ವಿಕೆಟ್ ಪಡೆದರು. ಅಲ್ಲದೆ, 4 ಓವರ್ಗಳ ಸ್ಪೆಲ್ನಲ್ಲಿ 30 ರನ್ ವೆಚ್ಚದಲ್ಲಿ ಐದು ವಿಕೆಟ್ ಕಬಳಿಸಿದ್ದರು.