ಕೇಪ್ ಟೌನ್ : ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ದಾಳಿಯನ್ನು ಹತ್ತಿಕ್ಕಲು ವಿರಾಟ್ ಕೊಹ್ಲಿ (Virat Kohli) ತಯಾರಿ ನಡೆಸುತ್ತಿದ್ದಾರೆ. ಮೊದಲ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ 76 ರನ್ ಬಾರಿಸಿದ ಕಿಂಗ್ ಕೊಹ್ಲಿ ಇದೀಗ ಹೊಸ ವರ್ಷದ ದಿನದಂದು ಕೇಪ್ಟೌನ್ಗೆ ಅಭ್ಯಾಸಕ್ಕಾಗಿ ಬಂದರು. ಹುಲ್ಲಿನಿಂದ ಆವೃತ್ತಗೊಂಡಿರುವ ಬೌನ್ಸಿ ಪಿಚ್ನಲ್ಲಿ ಸತತವಾಗಿ ವೇಗದ ಬೌಲಿಂಗ್ ಅನ್ನು ಅವರು ಎದುರಿಸಿದರು. ಇದೇ ವೇಳೆ ಹಿರಿಯ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದರು. ಅವರು ಜನವರಿ 3 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ 2ನೇ ಟೆಸ್ಟ್ಗೆ ಸಂಪೂರ್ಣ ಸಜ್ಜಾದರು.
ಬೆಳಿಗ್ಗೆ ಅಭ್ಯಾಸದ ಸಮಯದಲ್ಲಿ, ವಿರಾಟ್ ಕೊಹ್ಲಿ ಅಶ್ವಿನ್ ಅವರ ಬೌಲಿಂಗ್ಗೆ ಸಿಕ್ಸರ್ ಬಾರಿಸಿದರು. ಈ ಮೂಲಕ ಕೊಹ್ಲಿ ಅನುಭವಿ ಆಫ್-ಸ್ಪಿನ್ನರ್ ಬೆಕ್ಕಸ ಬೆರಗಾಗುವಂತೆ ನೋಡಿಕೊಂಡರು. ಪಂದ್ಯದಲ್ಲಿ ಇರುವಷ್ಟೇ ತೀವ್ರತೆಯನ್ನು ಅಭ್ಯಾಸದಲ್ಲಿ ತೋರಿಸಿದರು ವಿರಾಟ್ ಕೊಹ್ಲಿ. ಸಾಮಾನ್ಯವಾಗಿ ನೆಟ್ಸ್ನಲ್ಲಿ ಬೌಲರ್ಗಳನ್ನು ಬೆಂಡೆತ್ತುತ್ತಾರೆ. ಅಂತೆಯೇ ಅವರು ಅಶ್ವಿನ್ ವಿರುದ್ಧವೂ ಬಿರುಗಾಳಿ ಬ್ಯಾಟಿಂಗ್ ಮಾಡಿದರು.
Virat Kohli at nets. Lofts Ashwin for a Six.#IndianCricketTeam #INDvsSA pic.twitter.com/W9MkUGMvwB
— Kushan Sarkar (@kushansarkar) January 1, 2024
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿ ಕೇಪ್ಟೌನ್ನಲ್ಲಿ ನಡೆಯುವ ಟೆಸ್ಟ್ನಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ. ಕೆಎಲ್ ರಾಹುಲ್ ಹೊರತುಪಡಿಸಿ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ದಾಖಲೆ ಹೊಂದಿರುವ ಏಕೈಕ ಭಾರತೀಯ ಬ್ಯಾಟರ್ ಕೊಹ್ಲಿ. ದಕ್ಷಿಣ ಆಫ್ರಿಕಾದ ವೇಗದ ದಾಳಿಯ ವಿರುದ್ಧ ಭಾರತೀಯ ಬ್ಯಾಟರ್ಗಳು ಹೆಣಗಾಡುತ್ತಿರುವಾಗ ಕೊಹ್ಲಿ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : Team India : ಭಾರತ ತಂಡದಲ್ಲಿ ಇವರೇ ಬೆಸ್ಟ್; ಪಠಾಣ್, ಗವಾಸ್ಕರ್ ಲಿಸ್ಟ್ನಲ್ಲಿ ಇನ್ಯಾರಿದ್ದಾರೆ
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ಅಂತರದ ಹಿನ್ನಡೆ ಅನುಭವಿಸಿದ್ದು, ಕೇಪ್ಔಟ್ನಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲದ ಕಾರಣ ಪುಟಿದೇಳುವ ಗುರಿ ಹೊಂದಿದೆ. ಆದರೆ ಕೇಪ್ ಟೌನ್ ಕೋಟೆಯನ್ನು ಮುರಿಯುವುದು ಭಾರತವು ಸರಣಿಯನ್ನು ಡ್ರಾ ಮಾಡಿಕೊಳ್ಳುವ ಏಕೈಕ ಮಾರ್ಗವಾಗಿದೆ.
ಭಾರತ ತಂಡವೂ ಚೋಕರ್ಗಳಾ? ವೆಂಕಟೇಶ್ ಪ್ರಸಾದ್ ಉತ್ತರ ಹೀಗಿದೆ
ಬೆಂಗಳೂರು: 2023 ರಲ್ಲಿ ಟೀಮ್ ಇಂಡಿಯಾಗೆ (Team India) ಮತ್ತೊಂದು ಆಘಾತಕಾರಿ ವರ್ಷವಿತ್ತು. ಏಕೆಂದರೆ ಹತ್ತು ವರ್ಷಗಳ ಸುದೀರ್ಘ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಮತ್ತೊಮ್ಮೆ ವಿಫಲವಾಯಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಮೊದಲು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 2023 ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳಿಂದ ಸೋತಿತ್ತು. ಅಹಮದಾಬಾದ್ನಲ್ಲಿ ನಡೆದ ಏಕದಿನ ವಿಶ್ವಕಪ್ 2023 ಫೈನಲ್ನಲ್ಲಿ ಅದೇ ಎದುರಾಳಿಯಿಂದ ಆರು ವಿಕೆಟ್ಗಳಿಂದ ಸೋತಿತ್ತು.
ವಿಶ್ವಕಪ್ ಫೈನಲ್ನಲ್ಲಿ ಸೋಲು, ಕಳೆದ ಹತ್ತು ವರ್ಷಗಳಲ್ಲಿ ಐಸಿಸಿ ನಾಕೌಟ್ ಹಂತಗಳಿಗೆ ಅರ್ಹತೆ ಪಡೆದ ನಂತರ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ಭಾರತದ ಒಂಬತ್ತನೇ ಬಾರಿಗೆ ವಿಫಲವಾದಂತಾಗಿದೆ. ನಾಕೌಟ್ ಹಂತಗಳಲ್ಲಿ ಭಾರತದ ನಿರಂತರ ವೈಫಲ್ಯದಿಂದ ಹತಾಶರಾದ ಅಭಿಮಾನಿಯೊಬ್ಬರು ಭಾರತ ತಂಡವೂ ಚೋಕರ್ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ವಿಭಿನ್ನ ಉತ್ತರ ಕೊಟ್ಟಿದ್ದಾರೆ.
ಅಭಿಮಾನಿಗೆ ಉತ್ತರಿಸಿದ ಪ್ರಸಾದ್, ಸ್ವಲ್ಪ ಸಮಯದವರೆಗೆ ಯಾವುದೇ ಪ್ರಮುಖ ಟ್ರೋಫಿಯನ್ನು ಗೆಲ್ಲದಿರುವುದು ಬೇಸರದ ಸಂಗತಿ ಎಂದು ಒಪ್ಪಿಕೊಂಡರು. ಆದರೆ ಆಸ್ಟ್ರೇಲಿಯಾದಲ್ಲಿ ಭಾರತದ ಎರಡು ಟೆಸ್ಟ್ ಸರಣಿ ಗೆಲುವುಗಳನ್ನು 2020-21 ತಮ್ಮ ಶ್ರೇಷ್ಠ ಪ್ರದರ್ಶನ ಎಂಬುದಾಗಿ ಹೇಳಿದ್ದಾರೆ.
ನಾವು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 2 ಟೆಸ್ಟ್ ಸರಣಿಗಳನ್ನು ಗೆದ್ದಿದ್ದೇವೆ. 2020-21ರಲ್ಲಿ ರನ್ಗೆ 36 ಆಲ್ಔಟ್ ಆಗಿದ್ದೇವೆ. ನಾನು ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸುತ್ತೇನೆ. ವಿಶೇಷವಾಗಿ ಅರ್ಧಕ್ಕಿಂತ ಹೆಚ್ಚು ಮೊದಲ ಆಯ್ಕೆಯ ಆಟಗಾರರು ಕಾಣೆಯಾಗಿದ್ದಾರೆ. ಆದರೆ 11 ವರ್ಷಗಳಲ್ಲಿ ಯಾವುದೇ ಪ್ರಮುಖ ಪಂದ್ಯಾವಳಿಯನ್ನು ಗೆಲ್ಲದಿರುವ ಬಗ್ಗೆ ಖಂಡಿತವಾಗಿಯೂ ಸರಿಯಲ್ಲ ಎಂದು ಪ್ರಸಾದ್ ಉತ್ತರಿಸಿದ್ದಾರೆ.
2013ರಲ್ಲಿ ಭಾರತ ಕೊನೆಯ ಬಾರಿ ಐಸಿಸಿ ಟ್ರೋಫಿ ಗೆದ್ದಿತ್ತು
ಎಂಎಸ್ ಧೋನಿ ನಾಯಕತ್ವದಲ್ಲಿ 2013ರಲ್ಲಿ ಇಂಗ್ಲೆಂಡ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತವು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಅಂದಿನಿಂದ, ಏಷ್ಯಾದ ದೈತ್ಯರು ಐದು ಐಸಿಸಿ ಪಂದ್ಯಾವಳಿಗಳ ಫೈನಲ್ ಮತ್ತು ನಾಲ್ಕು ಸೆಮಿಫೈನಲ್ಗಳನ್ನು ತಲುಪಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021 ರ ಟಿ 20 ವಿಶ್ವಕಪ್ನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮೆನ್ ಇನ್ ಬ್ಲೂ ತಂಡವು ನಾಕೌಟ್ಗೆ ಅರ್ಹತೆ ಪಡೆಯಲು ವಿಫಲವಾದ ಏಕೈಕ ಉದಾಹರಣೆಯಾಗಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ಜೂನ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024ರೊಂದಿಗೆ ಅಂತಿಮವಾಗಿ ಪದಕ ಗೆಲ್ಲಬಹುದೇ ಎಂದು ಕಾದು ನೋಡಬೇಕಾಗಿದೆ.