Site icon Vistara News

Virat Kohli: ಕುಮಾರ ಸಂಗಕ್ಕರ ವಿಶ್ವ ದಾಖಲೆಯ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

Virat Kohli takes part in India's training session

ಜೊಹಾನ್ಸ್​ಬರ್ಗ್​: ಈಗಾಗಲೇ ಹಲವು ದಿಗ್ಗಜ ಆಟಗಾರರ ದಾಖಲೆಗಳನ್ನು ಮುರಿದಿರುವ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಅವರು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕುಮಾರ ಸಂಗಕ್ಕರ(Kumar Sangakkara) ಅವರ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ವಿರಾಟ್​ ಕೊಹ್ಲಿ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಕುಮಾರ ಸಂಗಕ್ಕರ ಅವರ ವಿಶ್ವ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದಾರೆ. ಈ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು ಕೇವಲ 66 ರನ್​. ಸದ್ಯ ಕೊಹ್ಲಿ ಎಲ್ಲ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರು ಬಾರಿ 2000-ಪ್ಲಸ್ ರನ್‌ಗಳನ್ನು ಬಾರಿಸಿ ಪ್ರಸ್ತುತ ಈ ದಾಖಲೆಯ ಪಟ್ಟಿಯಲ್ಲಿ ಸಂಗಕ್ಕಾರ ಅವರೊಂದಿಗೆ ಜಂಟಿಯಾಗಿದ್ದಾರೆ.

ಕೊಹ್ಲಿ 2012, 2014, 2016, 2017, 2018 ಮತ್ತು 2019 ರಲ್ಲಿ 2000 ರನ್ ಗಳಿಸಿದ್ದಾರೆ. ಸಂಗಕ್ಕರ ಅವರು 2004, 2006, 2009, 2011, 2012 ಮತ್ತು 2013 ರಲ್ಲಿ 2000 ರನ್ ಗಳಿಸಿದ್ದರು.

ಅತಿ ಹೆಚ್ಚು ಬಾರಿ 2000 ರನ್ ಗಳಿಸಿದ ಆಟಗಾರರು

ಕುಮಾರ ಸಂಗಕ್ಕರ-6

ವಿರಾಟ್​ ಕೊಹ್ಲಿ-6

ಮಹೇಲಾ ಜಯವರ್ಧನೆ-5

ಸಚಿನ್​ ತೆಂಡೂಲ್ಕರ್-5

ಜಾಕ್​ ಕ್ಯಾಲಿಸ್​-4

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಬಾಕ್ಸಿಂಗ್​ ಡೇ ಟೆಸ್ಟ್​ ಮಂಗಳವಾರದಿಂದ ಆರಂಭಗೊಳ್ಳಲಿದೆ. ಈಗಾಗಲೇ ಭಾರತೀಯ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ದ್ರಾವಿಡ್​, ಸೆಹವಾಗ್​ ದಾಖಲೆ ಮುರಿಯಲು ಸಜ್ಜಾದ ಕಿಂಗ್​ ಕೊಹ್ಲಿ

ವಿರಾಟ್​ ಕೊಹ್ಲಿಗೆ ಈ ಸರಣಿಯಲ್ಲಿ ವೀರೇಂದ್ರ ಸೇಹವಾಗ್(Virender Sehwag)​ ಮತ್ತು ಹಾಲಿ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ.

ಹೌದು, ವಿರಾಟ್​ ಕೊಹ್ಲಿ ಅವರು 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಒಟ್ಟಾರೆ 71 ರನ್​ ಬಾರಿಸಿದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ 2ನೇ ಭಾರತೀಯ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ದ್ರಾವಿಡ್​ ಮತ್ತು ಸೆಹವಾಗ್​ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ಇದನ್ನೂ ಓದಿ ಕೊಹ್ಲಿಯ ವಿಕೆಟ್​ ಪಡೆಯಲು ದಕ್ಷಿಣ ಆಫ್ರಿಕಾ ಬೌಲರ್​ಗಳಿಗೆ ಸಲಹೆ ನೀಡಿದ ಕುಚಿಕು ಗೆಳೆಯ

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಭಾರತೀಯ ದಾಖಲೆ ದಿಗ್ಗಜ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಅಲ್ಲದೆ ಉಭಯ ತಂಡಗಳ ಆಟಗಾರರ ಪೈಕಿಯೂ ಸಚಿನ್​ ಮೊದಲ ಸ್ಥಾನ ಪಡೆದಿದ್ದಾರೆ. ತೆಂಡೂಲ್ಕರ್​ 25 ಪಂದ್ಯಗಳನ್ನು ಆಡಿ 1,741 ರನ್​ ಬಾರಿಸಿದ್ದಾರೆ.

ಭಾರತೀಯ ಆಟಗಾರರ ಪೈಕಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿರುವ ವಿರೇಂದ್ರ ಸೆಹವಾಗ್,​ 15 ಟೆಸ್ಟ್​ ಪಂದ್ಯಗಳಿಂದ 1306 ರನ್ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಾಹುಲ್​ ದ್ರಾವಿಡ್​ 21 ಟೆಸ್ಟ್​ ಆಡಿ 1252 ರನ್​ ಗಳಿಸಿದ್ದಾರೆ.


35ರ ಹರೆಯದ ವಿರಾಟ್ ಕೊಹ್ಲಿ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿ 56.18. ಸರಾಸರಿಯಲ್ಲಿ 1236 ರನ್ ಬಾರಿಸಿದ್ದಾರೆ. ಕೊಹ್ಲಿ 71 ರನ್​ ಬಾರಿಸಿದರೆ ದ್ರಾವಿಡ್​ ಮತ್ತು ಸೆಹವಾಗ್​ ದಾಖಲೆ ಪತನಗೊಳ್ಳಲಿದೆ. ಪ್ರಚಂಡ ಫಾರ್ಮ್​ನಲ್ಲಿರುವ ಕೊಹ್ಲಿ ಈ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಗ್ರ ಸ್ಥಾನದಲ್ಲಿರುವ ಸಚಿನ್​ ದಾಖಲೆ ಮುರಿಯುವು ಕೊಂಚ ಕಷ್ಟವಾಗಿದೆ. ಈ ದಾಖಲೆ ಮುರಿಯಲು 505 ರನ್​ ಬೇಕಿದೆ.

Exit mobile version