Site icon Vistara News

IPL 2023 : ವಿರಾಟ್​ ಕೊಹ್ಲಿಗೆ ಗಾಯ, ಟೆಸ್ಟ್​​ ಚಾಂಪಿಯನ್​ಷಿಪ್​ ಮೊದಲೇ ಟೀಮ್​ ಇಂಡಿಯಾಗೆ ಆತಂಕ

Virat Kohli injured, team India worried ahead of Test championship

#image_title

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ. ಅವರು ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯದದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮೊಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ಗೆ ತಯಾರಾಗಬೇಕಾಗಿದ್ದ ಟೀಮ್ ಇಂಡಿಯಾಗೆ ಆತಂಕ ಎದುರಾಗಿದೆ. ವಿಶ್ವದ ಅತ್ಯಂತ ಫಿಟ್ ಅಥ್ಲೀಟ್ ಎನಿಸಿಕೊಂಡಿರುವ ವಿರಾಟ್​ ಕೊಹ್ಲಿ ಗಾಯದ ಸಮಸ್ಯೆಗೆ ಒಳಗಾಗುವುದು ಕಡಿಮೆ. ತಮ್ಮ ವೃತ್ತಿ ಕ್ರಿಕೆಟ್​ನಲ್ಲಿ ನಾಲ್ಕು ಪಂದ್ಯಗಳನ್ನು ಗಾಯದ ಸಮಸ್ಯೆಯಿಂದ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಗಾಯಗೊಂಡರೂ ಅವರ ಪುನಶ್ಚೇತನ ಅತ್ಯಂತ ವೇಗವಾಗಿರುವ ಕಾರಣ ಟೆಸ್ಟ್​ ಚಾಂಪಿಯನ್​ಷಿಪ್​ ಮೊದಲು ಸುಧಾರಿಸಿಕೊಳ್ಳಬಹುದು ಎನ್ನಲಾಗಿದೆ.

ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್​ ಪಂದ್ಯದಲ್ಲಿ ಆಡಬೇಕಾಗಿದೆ. ಈ ತಂಡದ ಮಧ್ಯಮ ಕ್ರಮಾಂಕದ ಹೊಣೆ ವಿರಾಟ್​ ಕೊಹ್ಲಿ ಹೆಗಲಮೇಲಿದೆ. ಹೀಗಾಗಿ ಅವರು ಗಾಯಗೊಂಡರೆ ಟೀಮ್​ ಇಂಡಿಯಾಗೆ ಹಿನ್ನಡೆ ಉಂಟಾಗಬಹುದು.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುವಾಗ ಮೊಣಕಾಲಿಗೆ ಗಾಯವಾಗಿತ್ತು. ತಕ್ಷಣ ಅವರು ಮೈದಾನದಿಂದ ಹೊರನಡೆದಿದ್ದರು. ಆ ಬಳಿಕ ಅವರು ಆಡಲು ಮೈದಾನಕ್ಕೆ ಇಳಿದಿರಲಿಲ್ಲ. ಅಲ್ಲದೆ, ಸೋಲಿನ ಹತಾಶೆಯಲ್ಲಿ ನೀರಿನ ಬಾಟಲ್​ ಅನ್ನು ನೆಲಕ್ಕೆ ಎಸೆಯುವುದು ನೇರ ಪ್ರಸಾರ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿತ್ತು. ಆದರೆ, ಕೊನೆಯಲ್ಲಿ ಅವರು ಎದುರಾಳಿ ತಂಡದ ಆಟಗಾರರನ್ನು ಅಭಿನಂದಿಸಲು ಮೈದಾನಕ್ಕೆ ಇಳಿದಿದ್ದರು.

ಕೊಹ್ಲಿಯ ಗಾಯದ ಕುರಿತು ಆರ್​ಸಿಬಿ ಕೋಚ್ ಸಂಜರ್​ ಬಂಗಾರ್​ ಮಾಹಿತಿ ನೀಡಿದ್ದಾರೆ. ಆದರೆ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ. ಹೌದು, ಕೊಹ್ಲಿಯ ಮೊಣಕಾಲಿನಲ್ಲಿ ಸ್ವಲ್ಪ ಗಾಯವಾಗಿತ್ತು. ಆದರೆ ಗಂಭೀರವಾದದ್ದೇನೂ ಇದೆ ಎಂದು ನಾನು ಭಾವಿಸುವುದಿಲ್ಲ. 4 ದಿನಗಳ ಅಂತರದಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ ಎಂದು ಬಂಗಾರ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅವರು ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್ ಮಾಡುವಾಗಲೂ ತಂಡಕ್ಕೆ ಕೊಡುಗೆ ನೀಡಲು ಬಯಸುವ ವ್ಯಕ್ತಿ. ಅವರು ಫೀಲ್ಡಿಂಗ್​ ವೇಳೆ ಚುರುಕಿನಂದ ಓಡಾಡುತ್ತಿದ್ದರು. ನಾಲ್ಕು ದಿನಗಳ ಅಂತರದಲ್ಲಿ ಸತತವಾಗಿ 20. 20 ಓವರ್​ಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಹೀಗಾಗಿ ಸ್ವಲ್ಪ ಸಮಸ್ಯೆ ಎದುರಾಗಿದೆ. ಆದರೆ ಹೆದರುವ ಅವಶ್ಯಕತೆ ಇಲ್ಲ, ಎಂದು ಹೇಳಿದ್ದಾರೆ.

ಇದನ್ನೂ ಓದಿ : ICC Rankings: ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಕೊಹ್ಲಿ,ರೋಹಿತ್​ ಹಿಂದಿಕ್ಕಿದ ಹ್ಯಾರಿ ಟೆಕ್ಟರ್

ವಿರಾಟ್​ ಕೊಹ್ಲಿ ಗುಜರಾತ್​ ಟೈಟನ್ಸ್ ತಂಡದ ಬ್ಯಾಟರ್​ ವಿಜಯ್​ ಶಂಕರ್ ಅವರ ಕ್ಯಾಚ್​ ಹಿಡಿಯುವ ವೇಳೆ ಗಾಯಗೊಂಡಿದ್ದರು. ವಿಜಯ್ ಶಂಕರ್​ 35 ಎಸೆತಗಳಲ್ಲಿ 53 ರನ್​ ಬಾರಿಸಿ ಗುಜರಾತ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ವಿರಾಟ್​ ಹಿಡಿದ ಕ್ಯಾಚ್​ನಿಂದಾಗಿ ಶಂಕರ್ ಮತ್ತು ಗಿಲ್ ನಡುವಿನ 123 ರನ್ ಗಳ ಜೊತೆಯಾಟ ಕೊನೆಗೊಂಡಿತ್ತಯ. ನಂತ ಗಿಲ್ 52 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಅದಕ್ಕಿಂತ ಮೊದಲು ಕೊಹ್ಲಿ ಕೊಹ್ಲಿ 61 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ಇದು ಈ ಋತುವಿನಲ್ಲಿ ಕೊಹ್ಲಿಯ ಸತತ ಎರಡನೇ ಶತಕ ಹಾಗೂ ಐಪಿಎಲ್​​ನಲ್ಲಿ ಏಳನೇ ಶತಕವಾಗಿದೆ. ಈ ಮೂಲಕ ಕ್ರಿಸ್ ಗೇಲ್ ಅವರ ಹಿಂದಿನ 6 ಶತಕಗಳ ದಾಖಲೆಯನ್ನು ಮುರಿದಿದ್ದಾರೆ.

Exit mobile version