Site icon Vistara News

Virat kohli : ಕೊಹ್ಲಿ ಒಬ್ಬ ಸುಳ್ಳ; ಮಾಜಿ ಕ್ರಿಕೆಟಿಗನ ಆರೋಪ

Virat Kohli

ಬೆಂಗಳೂರು: ಶನಿವಾರ ನಡೆದ ರಾಜಸ್ಥಾನ್​ ರಾಯಲ್ಸ್​ ಮತ್ತು ಆರ್​ಸಿಬಿ ನಡುವಿನ ಐಪಿಎಲ್ (IPL 2024)​ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿಯ (Virat kohli) ಸ್ಟ್ರೈಕ್ ರೇಟ್​ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಅವರು ನಿಧಾನವಾಗಿ ಆಡಿರುವುರಿಂದ ಆರ್​​ಸಿಬಿಗೆ ಸೋತಿದೆ ಎನ್ನಲಾಗುತ್ತಿದೆ. ಆದರೆ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ ಪಿಚ್​ ಕಷ್ಟವಿತ್ತು ಎಂಬುದಾಗಿ ಹೇಳಿದ್ದಾರೆ. ಜೈಪುರ ಕ್ರೀಡಾಂಗಣದಲ್ಲಿ ಪಿಚ್ ಹೊರಗಿನಿಂದ ವಿಭಿನ್ನವಾಗಿ ಕಾಣುತ್ತದೆ. ಪಂದ್ಯದ ಸಮಯದಲ್ಲಿ ಬೇರೆ ರೀತಿ ಇತ್ತು ಎಂದಿದ್ದರು. ಆದರೆ, ಕ್ರಿಕೆಟ್ ವೀಕ್ಷಕ ವಿವರಣೆಗಾರ ಅಜಯ್ ಜಡೇಜಾ ಪಂದ್ಯದ ನಂತರ ಕೊಹ್ಲಿಯ ಹೇಳಿಕೆಗಳನ್ನು ನಿರಾಕರಿಸಿದ್ದು, ಅವರೊಬ್ಬ ಸುಳ್ಳ ಎಂದು ಖಡಕ್ ಕಾಮೆಂಟ್ ಮಾಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರ್​ಸಿಬಿ ಆರಂಭಿಕ ಆಟಗಾರ 72 ಎಸೆತಗಳಲ್ಲಿ 113 ರನ್ ಗಳಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ತಮ್ಮ 8 ನೇ ಶತಕ ದಾಖಲಿಸಿ ಕೊಹ್ಲಿ ಅಜೇಯ 12 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಂಡ ಹಿನ್ನೆಲೆಯಲ್ಲಿ ಅವರ ಇನ್ನಿಂಗ್ಸ್ ವ್ಯರ್ಥಗೊಂಡಿತ್ತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಬಾರಿಸಿ ಪಂದ್ಯವನ್ನು ಆರ್​ಆರ್​ ಪರ ಮಾಡಿದ್ದರು. ಕೊಹ್ಲಿಯನ್ನು ಬೆಂಬಲಿಸಲು ಇತರ ಬ್ಯಾಟರ್​ಗಳು ವಿಫಲವಾದ ಕಾರಣ ಆರ್​​ಸಿಬಿ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್​ಆರ್​ 5 ಎಸೆತಗಳು ಬಾಕಿ ಇರುವಾಗ ಗೆಲುವು ಪಡೆಯಿತು.

ವಿರಾಟ್ ಕೊಹ್ಲಿ ಊಹೆಗೆ ಅಜಯ್ ಜಡೇಜಾ ವಿರೋಧ

ಪಂದ್ಯದ ನಂತರ, ವಿರಾಟ್ ಕೊಹ್ಲಿ ಜೈಪುರ ಕ್ರೀಡಾಂಗಣದ ಪಿಚ್ ಬಗ್ಗೆ ಕೆಲವು ಕಾಮೆಂಟ್​ಗಳನ್ನು ಮಾಡಿದ್ದರು. ಪಿಚ್ ಹೊರಗಿನಿಂದ ರನ್​ಗಳಿಸಲು ಸುಲಭ ಎಂಬಂತೆ ಕಾಣುತ್ತಿತ್ತು. ಆದರೆ, ನೈಜವಾಗಿ ಹಾಗೆ ಇರಲಿಲ್ಲ ಎಂದಿದ್ದರು.

ವಿಕೆಟ್ ಹೊರಗಿನಿಂದ ಸಾಕಷ್ಟು ಭಿನ್ನವಾಗಿ ಕಾಣುತ್ತದೆ. ಇದು ಸಮತಟ್ಟಾಗಿದೆ ಎಂದು ಅನಿಸುತ್ತದೆ, ಆದರೆ ಚೆಂಡು ಪಿಚ್​ನಲ್ಲಿ ಹೆಚ್ಚು ತಿರುವು ಪಡೆಯುತ್ತಿತ್ತು ಎಂದು ಕೊಹ್ಲಿ ಹೇಳಿದ್ದರು. ಭಾರತದ ಮಾಜಿ ಬ್ಯಾಟರ್​ ಅಜಯ್ ಜಡೇಜಾ ನಂತರ ಅವರ ಹೇಳಿಕೆಗಳನ್ನು ನಿರಾಕರಿಸಿದರು. ಕೊಹ್ಲಿ ತಮ್ಮ ಇನ್ನಿಂಗ್ಸ್ ಆಡಿದ ರೀತಿಯನ್ನು ನೋಡಿದರೆ, ಪಿಚ್​ನಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಿಲ್ಲ ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: IPL 2024 : ಅಪರೂಪಕ್ಕೆ ಧೋನಿಯನ್ನು ಹೊಗಳಿದ ಗೌತಮ್ ಗಂಭೀರ್​

“ಅವರು (ಕೊಹ್ಲಿ) ಉತ್ತಮವಾಗಿ ಆಡಿದರು. ಆದರೆ, ಒಂದೇ ಆಶ್ಚರ್ಯಕರ ವಿಷಯವೆಂದರೆ ಅವರು ಈ ಪಿಚ್​ನಲ್ಲಿ ಎಸೆತಗಳು ಬ್ಯಾಟರ್​ಗೆ ಪೂರಕವಾಗಿರಲಿಲ್ಲ ಎಂಬುದರ ಬಗ್ಗೆ ಮಾತನಾಡಿದರು. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ಸರಿ ಇರಲಿಲ್ಲ ಅಷ್ಟೆ. ಪಿಚ್​ನಲ್ಲಿ ಯಾವುದೇ ನ್ಯೂನತೆಗಳನ್ನು ಇರಲಿಲ್ಲ “ಎಂದು ಜಡೇಜಾ ಜಿಯೋ ಸಿನೆಮಾದಲ್ಲಿ ಹೇಳಿದರು.

1992 ರಿಂದ 2000 ರವರೆಗೆ ಭಾರತಕ್ಕಾಗಿ ಆಡಿದ ಅಜಯ್ ಜಡೇಜಾ, ಕೊಹ್ಲಿ ತಮ್ಮ ಶತಕ ಬಾರಿಸುವ ವೇಳೆ ಮೈದಾನದ ಪ್ರತಿಯೊಂದು ಮೂಲೆಯಲ್ಲೂ ರನ್ ಗಳಿಸಿದ್ದಾರೆ. ಆದ್ದರಿಂದ, ಪಿಚ್​ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ನುಡಿದರು.

“ಅವರ ಶಾಟ್ ಮೇಕಿಂಗ್​ಗೆ ಬಗ್ಗೆ ಮಾತನಾಡುವುದಾದರೆ ಅವರು ಚೆಂಡನ್ನು ಹೊಡೆಯದ ಮೈದಾನದ ಯಾವುದೇ ಮೂಲೆ ಉಳಿದಿಲ್ಲ. ಅವರು ಹೇಳಿದ್ದು ಪಿಚ್​ನಲ್ಲಿ ಏನೋ ತಪ್ಪಾಗಿರಬಹುದು ಎಂದು ನಾವು ಭಾವಿಸುವಂತೆ ಮಾಡಿತು. ಆದರೆ ಅವರು ಆಡಿದ ರೀತಿಯಲ್ಲಿ, ಒಂದೇ ಒಂದು ನ್ಯೂನತೆ ಕಾಣಲಿಲ್ಲ , “ಎಂದು 53 ವರ್ಷದ ಆಟಗಾರ ಹೇಳಿದರು.

Exit mobile version