ಜೊಹಾನ್ಸ್ಬರ್ಗ್: ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ(South Africa vs India, 1st Test) ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಂಗಳವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ತಂಡದ ಮಾಜಿ ಆಟಗಾರರಾದ ವೀರಂದ್ರ ಸೇಹವಾಗ್(Virender Sehwag) ಮತ್ತು ಹಾಲಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ.
ಹೌದು, ವಿರಾಟ್ ಕೊಹ್ಲಿ ಅವರು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟಾರೆ 71 ರನ್ ಬಾರಿಸಿದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ರನ್ಗಳಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ದ್ರಾವಿಡ್ ಮತ್ತು ಸೆಹವಾಗ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ದಾಖಲೆ ಸಚಿನ್ ಹೆಸರಿನಲ್ಲಿದೆ
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅಲ್ಲದೆ ಉಭಯ ತಂಡಗಳ ಆಟಗಾರರ ಪೈಕಿಯೂ ಸಚಿನ್ ಮೊದಲ ಸ್ಥಾನ ಪಡೆದಿದ್ದಾರೆ. ತೆಂಡೂಲ್ಕರ್ 25 ಪಂದ್ಯಗಳನ್ನು ಆಡಿ 1,741 ರನ್ ಬಾರಿಸಿದ್ದಾರೆ.
ಭಾರತೀಯ ಆಟಗಾರರ ಪೈಕಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿರುವ ವಿರೇಂದ್ರ ಸೆಹವಾಗ್, 15 ಟೆಸ್ಟ್ ಪಂದ್ಯಗಳಿಂದ 1306 ರನ್ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ 21 ಟೆಸ್ಟ್ ಆಡಿ 1252 ರನ್ ಗಳಿಸಿದ್ದಾರೆ.
👑🏏❤️#ViratKohli #SAvIND @imVkohli pic.twitter.com/rB2KMdYWif
— virat_kohli_18_club (@KohliSensation) December 24, 2023
ಸಚಿನ್ ದಾಖಲೆ ಮುರಿಯುವುದು ಕಷ್ಟ
35ರ ಹರೆಯದ ವಿರಾಟ್ ಕೊಹ್ಲಿ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿ 56.18. ಸರಾಸರಿಯಲ್ಲಿ 1236 ರನ್ ಬಾರಿಸಿದ್ದಾರೆ. ಕೊಹ್ಲಿ 71 ರನ್ ಬಾರಿಸಿದರೆ ದ್ರಾವಿಡ್ ಮತ್ತು ಸೆಹವಾಗ್ ದಾಖಲೆ ಪತನಗೊಳ್ಳಿದೆ. ಪ್ರಚಂಡ ಫಾರ್ಮ್ನಲ್ಲಿರುವ ಕೊಹ್ಲಿ ಈ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಗ್ರ ಸ್ಥಾನದಲ್ಲಿರುವ ಸಚಿನ್ ದಾಖಲೆ ಮುರಿಯುವು ಕೊಂಚ ಕಷ್ಟವಾಗಿದೆ. ಈ ದಾಖಲೆ ಮುರಿಯಲು 505 ರನ್ ಬೇಕಿದೆ.
ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಆಡುತ್ತಿರುವ ಮೊದಲ ಕ್ರಿಕೆಟ್ ಸರಣಿ ಇದಾಗಿದೆ. ಇವರೆಲ್ಲ ಇಂದು(ಭಾನುವಾರ) ಅಭ್ಯಾಸ ನಡೆಸಿದ ಫೋಟೊಗಳು ವೈರಲ್ ಆಗಿವೆ.
ಇದನ್ನೂ ಓದಿ ಕೊಹ್ಲಿಯ ವಿಕೆಟ್ ಪಡೆಯಲು ದಕ್ಷಿಣ ಆಫ್ರಿಕಾ ಬೌಲರ್ಗಳಿಗೆ ಸಲಹೆ ನೀಡಿದ ಕುಚಿಕು ಗೆಳೆಯ
ರಾಹುಲ್ಗೆ ಕೀಪಿಂಗ್ ಹೊಣೆ
ಇಶಾನ್ ಕಿಶನ್ ಅವರು ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಾಗ ಕೀಪಿಂಗ್ ಹೊಣೆ ಕೆ.ಎಲ್ ರಾಹುಲ್ಗೆ ನೀಡಬಹುದು ಎಂದು ಹೇಳಲಾಗಿತ್ತು. ಇದೀಗ ಖಚಿತವಾಗಿದೆ. ಕೋಚ್ ದ್ರಾವಿಡ್ ಈ ಬಗ್ಗೆ ಖಚಿತ ಮಾಹಿತಿ ನೀಡಿ ರಾಹುಲ್ ಅವರೇ ಕೀಪಿಂಗ್ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೆ ರಾಹುಲ್ ಏಕದಿನ ವಿಶ್ವಕಪ್ನಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಯಶಸ್ಸು ಕಂಡಿದ್ದಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.
Rahul Dravid "KL Rahul is confident to keep wickets in Test cricket". [Star Sports] pic.twitter.com/emDFioAc6a
— Johns. (@CricCrazyJohns) December 24, 2023