Site icon Vistara News

Virat Kohli: ಚಾರ್ಟರ್‌ ಫ್ಲೈಟ್‌ ಬಳಸಿ ಟ್ರೋಲ್​ ಆದ ಕಿಂಗ್​ ಕೊಹ್ಲಿ

virat kohli trolls flight

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(Virat Kohli) ವೆಸ್ಟ್ ಇಂಡೀಸ್ ಸರಣಿ ಮುಗಿಸಿ ಚಾರ್ಟರ್‌ ಫ್ಲೈಟ್‌ ಮೂಲಕ ಏಕಾಂಗಿಯಾಗಿ ತವರಿಗೆ ವಾಪಸ್​ ಆಗಿದ್ದಾರೆ. ಆದರೆ ಇದೇ ವಿಚಾರದಲ್ಲಿ ಕೊಹ್ಲಿ ಸಿಕ್ಕಾಪಟ್ಟೆ ಟ್ರೋಲ್(virat kohli trolls flight) ಆಗಿದ್ದಾರೆ.

ವಿರಾಟ್​ ಕೊಹ್ಲಿ ಅವರು ಕಳೆದ ವರ್ಷ ಜಾಗತಿಕ ತಾಪಮಾನದ ಕುರಿತಂತೆ ಮಾತನಾಡಿ ಜನರು ಸಾರ್ವಜನಿಕ ಸಂಪರ್ಕ ಸಾರಿಗೆಗಳಾದ ಬಸ್‌ಗಳನ್ನು, ಮೋಟರ್‌ಗಳನ್ನು ಹಾಗೂ ರೈಡ್‌ ಶೇರ್ ಸರ್ವಿಸ್‌ಗಳನ್ನು ಹೊಂದಿರುವಂತಹ ಓಲಾ ಇತ್ಯಾದಿ ಸೌಕರ್ಯಗಳನ್ನು ಬಳಸುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದ್ದರು. ಇದೇ ವಿಚಾರವಾಗಿ ಕೊಹ್ಲಿ ಈಗ ಟ್ರೋಲ್​ ಆಗಿದ್ದಾರೆ. ಚಾರ್ಟರ್‌ ಫ್ಲೈಟ್‌ (ಖಾಸಗಿ ವಿಮಾನ) ಬಳಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

“ಪರಿಸರ ಸಂರಕ್ಷಣೆ ಬಗ್ಗೆ ತಿಳುವಳಿಕೆ ಹೇಳುವ ವ್ಯಕ್ತಿಗಳೇ ಈ ನಿಯಮವನ್ನು ಪಾಲಿಸದೇ ಇರುವುದು ಎಷ್ಟು ಸರಿ” ಎಂದು ನೆಟ್ಟಿಗರು ಕೊಹ್ಲಿ ಚಾರ್ಟರ್‌ ಫ್ಲೈಟ್​ನಲ್ಲಿ ಕುಳಿತಿರುವ ಫೋಟೊವನ್ನು ಹಂಚಿಕೊಂಡು ಟ್ರೋಲ್​ ಮಾಡಿದ್ದಾರೆ.

“ಚಾರ್ಟರ್‌ ಫ್ಲೈಟ್​ನಿಂದ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡೈ ಆಕ್ಸೈಡ್‌ ಬಿಡುಗಡೆಯಾಗುತ್ತದೆ. ಇದರಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ. ಬುದ್ಧಿವಾದ ಹೇಳಿದ ನೀವೇ ಈಗ ಪರಿಸರಕ್ಕೆ ಹಾನಿ ಮಾಡಲು ಮುಂದಾಗಿದ್ದೀರ” ಎಂದು ಕೊಹ್ಲಿ ಅಂದು ಪರಿಸರ ಕಾಳಜಿ ಬಗ್ಗೆ ಹೇಳಿರುವ ವಿಡಿಯೊವನ್ನು ಶೇರ್​ ಮಾಡುವ ಮೂಲಕ ಕೆಲ ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?

ಟ್ರೋಲ್​ ಆಗಲು ಕಾರಣ

2021ರ ದೀಪಾವಳಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಜಾಗತಿಕ ತಾಪಮಾನ ಹಾಗೂ ಪರಿಸರ ಕಾಳಜಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸಿದ್ದರು. ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪಟಾಕಿ ಸುಡಲೇ ಬೇಕಿಲ್ಲ. ಪಟಾಕಿಯಿಂದ ಬರುವಂತಹ ಹೊಗೆ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ. ವಾಯುಮಾಲಿನ್ಯ ಸಮಸ್ಯೆ ಉಂಟಾಗಿ ಹಲವರಿಗೆ ಸಮಸ್ಯೆಗಳಾಗುತ್ತದೆ. ಹೀಗಾಗಿ ಪಟಾಕಿ ಬದಲು ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸುವಂತೆ ಕರೆ ನೀಡಿದ್ದರು. ಆದರೆ ಇದೀಗ ಅವರು ಹೆಚ್ಚಿನ ಪ್ರಮಾಣದ ಕಾರ್ಬನ್‌ ಡೈ ಆಕ್ಸೈಡ್‌ ಬಿಡುಗಡೆಯಾಗುವ ಚಾರ್ಟರ್‌ ಫ್ಲೈಟ್ ಬಳಿಸಿದ್ದು ಟ್ರೋಲ್​ಗೆ ಪ್ರಮುಖ ಕಾರಣವಾಗಿದೆ.

ಜಾಗತಿಕ ತಾಪಮಾನದ ಕುರಿತಂತೆಯೂ ಅಂದು ಕೊಹ್ಲಿ ಕೆಲ ಉಪಯುಕ್ತ ಸಲಹೆಯನ್ನು ನೀಡಿದ್ದರು. ಜನರು ಸಾರ್ವಜನಿಕ ಸಂಪರ್ಕ ಸಾರಿಗೆಗಳಾದ ಬಸ್‌ಗಳನ್ನು, ಮೋಟರ್‌ಗಳನ್ನು ಬಳಸುವ ಬಳಸುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದ್ದರು. ಆದರೆ ಸ್ವತಃ ಕೊಹ್ಲಿಯೇ ಈ ನಿಯಮ ಪಾಲಿಸುತ್ತಿಲ್ಲ ಎನ್ನುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣ. ಕೊಹ್ಲಿ ಈ ಹಿಂದೆ ಪರಿಸರ ಸಂರಕ್ಷಣೆ ಕುರಿತು ಹೇಳಿರುವ ಎಲ್ಲ ವಿಡಿಯೊಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಮತ್ತೆ ಕೊಹ್ಲಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವ ಕೆಲಸ ನೆಟ್ಟಿಗರು ಮಾಡಲಾರಂಭಿಸಿದ್ದಾರೆ.

Exit mobile version