Site icon Vistara News

ind vs pak : ಕೊಹ್ಲಿ – ರಾಹುಲ್ ಜತೆಯಾಟದಲ್ಲಿ ಸೃಷ್ಟಿಯಾದ ದಾಖಲೆಗಳು ಹಲವು

Viratr kohli

ಕೊಲಂಬೊ: ಮೀಸಲು ದಿನವಾದ ಸೋಮವಾರ ಕೊಲಂಬೊದಲ್ಲಿ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಪಾಕಿಸ್ತಾನ (ind vs pak) ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರಿಂದ ಅಭಿಮಾನಿಗಳು ಖಂಡಿತವಾಗಿಯೂ ಖುಷಿಯಾಗಿದ್ದಾರೆ. ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗಬೇಕಿದ್ದ ಆಟ ಹವಾಮಾನ ವೈಪರೀತ್ಯದಿಂದಾಗಿ ಮತ್ತೊಮ್ಮೆ ವಿಳಂಬವಾದವು, ಆದರೆ ನಂತರ ನಡೆದದ್ದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತದ ಅತ್ಯುತ್ತಮ ಬ್ಯಾಟರ್​ಗಳ ಬ್ಯಾಟಿಂಗ್ ವೈಭವ.

24.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದ್ದ ಭಾರತದ ಇನ್ನಿಂಗ್ಸ್ ಅನ್ನು ಪುನರಾರಂಭಿಸಿದ ಕೊಹ್ಲಿ ಮತ್ತು ರಾಹುಲ್ ತಮ್ಮ ಉದ್ದೇಶಗಳನ್ನು ಆರಂಭದಲ್ಲೇ ಸ್ಪಷ್ಟಪಡಿಸಿದರು. ಸ್ಕೋರ್​ಬೋರ್ಡ್​ ಚುರುಕಾಗಿ ಸಾಗುವಂತೆ ಮಾಡಿದರು. ನಂತರ ಇವರಿಬ್ಬರು ತಮ್ಮ ಶತಕಗಳನ್ನು ಬಾರಿಸಿ ಅಜೇಯರಾಗಿ ಉಳಿದರು. ಈ ಜೋಡಿ 50 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಭಾರತ ತಂಡಕ್ಕೆ 356 ರನ್​ಗಳನ್ನು ತಂದುಕೊಟ್ಟರು. ಇದು ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತದ ಜಂಟಿ ಗರಿಷ್ಠ ಏಕದಿನ ಮೊತ್ತ,. ಇದು 2005ರಲ್ಲಿ ವಿಶಾಖಪಟ್ಟಣಂನಲ್ಲಿ ಭಾರತ ಸಾಧಿಸಿದ 356/9 ರ ಒಟ್ಟು ಮೊತ್ತವನ್ನು ಸರಿಗಟ್ಟುತ್ತದೆ ಕೂಡ.

ಕೊಹ್ಲಿ 94 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 122* ರನ್ ಗಳಿಸಿದರು. ಗಾಯದಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವನ್ನು ಆಡುತ್ತಿರುವ ರಾಹುಲ್ 106 ಎಸೆತಗಳಲ್ಲಿ 111* ರನ್ ಗಳಿಸಿದರು. ಅವರ ಇನ್ನಿಂಗ್ಸ್ 12 ಬೌಂಡರಿಗಳು ಮತ್ತು 2 ಸಿಕ್ಸರ್​ಗಳಿದ್ದವು.

ಹಲವು ದಾಖಲೆಗಳು ಸೃಷ್ಟಿ

ಈ ಜೋಡಿ ಮೂರನೇ ವಿಕೆಟ್​ಗೆ ಅಜೇಯ 233 ರನ್​ಗಳ ಜೊತೆಯಾಟವಾಡಿತು. ಇದು ಏಷ್ಯಾಕಪ್ ಇತಿಹಾಸದಲ್ಲಿ ಯಾವುದೇ ಜೋಡಿಯ ಅತ್ಯಧಿಕ ಜೊತೆಯಾಟವಾಗಿದೆ. ಇದು ಪಾಕಿಸ್ತಾನದ ವಿರುದ್ಧ ಭಾರತದ ಜೋಡಿಯ ಅತ್ಯಧಿಕ ಜೊತೆಯಾಟವಾಗಿದೆ.

ಏಕದಿನ ಏಷ್ಯಾಕಪ್​​ನಲ್ಲಿ ಅತ್ಯಧಿಕ ರನ್​ಗಳ ಜೊತೆಯಾಟ

233 – ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (ಭಾರತ), ಪಾಕ್ ವಿರುದ್ಧ*

224 – ಎಂ ಹಫೀಜ್ ಮತ್ತು ಎನ್ ಜೆಮ್ಷೆಡ್ (ಪಾಕಿಸ್ತಾನ). ಭಾರತ ವಿರುದ್ಧ , 2012

223 – ಶೋಯೆಬ್​ ಮಲಿಕ್ ಮತ್ತು ಯೂನಿಸ್ ಖಾನ್ (ಪಾಕಿಸ್ತಾನ) ಹಾಂಕಾಂಗ್ ವಿರುದ್ಧ 2004

214 – ಬಾಬರ್ ಮತ್ತು ಇಫ್ತಿಖರ್ ಅಹ್ಮದ್ (ಪಾಕಿಸ್ತಾನ) ವಿರುದ್ಧ ನೇಪಾಳ 2023

ಭಾರತ ಮತ್ತು ಪಾಕ್​ ನಡುವಿನ ಪಂದ್ಯದಲ್ಲ ಮೂಡಿ ಬಂದ ಗರಿಷ್ಠ ಜತೆಯಾಟಗಳು

233* – ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್, ಕೊಲಂಬೊ (), ಆಗಸ್ಟ್​11 2023 * (3 ನೇ ವಿಕೆಟ್)

231 – ನವಜೋತ್​ ಸಿಂಗ್​ ಸಿಧು ಮತ್ತು ಎಸ್ಆರ್ ತೆಂಡೂಲ್ಕರ್, ಶಾರ್ಜಾ, 1996 (2 ನೇ ವಿಕೆಟ್)

210 – ಶಿಖರ್​ ಧವನ್ ಮತ್ತು ಆರ್ ಶರ್ಮಾ, ದುಬೈ (ಡಿಎಸ್ಸಿ), 2018 (1 ನೇ ವಿಕೆಟ್)

201 – ರಾಹುಲ್ ದ್ರಾವಿಡ್ ಮತ್ತು ವಿ ಸೆಹ್ವಾಗ್, ಕೊಚ್ಚಿ, 2005 (3 ನೇ ವಿಕೆಟ್ ಕೀಪರ್)

ಕೊಲಂಬೊ ಕೊಹ್ಲಿಗೆ ಅತ್ಯಂತ ಪ್ರಿಯವಾದ ಮೈದಾನವಾಗಿ ಮುಂದುವರಿದಿದೆ, ಏಕೆಂದರೆ ಈ ತಾಣದಲ್ಲಿ ಅವರ ಸತತ ನಾಲ್ಕನೇ ಏಕದಿನ ಶತಕವಾಗಿದೆ. ಇದರೊಂದಿಗೆ ಕೊಹ್ಲಿ ಈ ಸ್ವರೂಪದಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 47 ಕ್ಕೆ ಏರಿಸಿಕೊಂಡರು. ಈಗ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಲು ಕೇವಲ ಎರಡು ಶತಕಗಳ ದೂರದಲ್ಲಿದ್ದಾರೆ.

ಇದನ್ನೂ ಓದಿ : Virat Kohli : ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ದಾಖಲೆಗಳ ಮೇಲೆ ದಾಖಲೆ ಬರೆದ ವಿರಾಟ್​ ಕೊಹ್ಲಿ

ಏಕದಿನ ಪಂದ್ಯಗಳಲ್ಲಿ ಒಂದೇ ಸ್ಥಳದಲ್ಲಿ ಸತತ ಶತಕಗಳು

  1. ಹಶೀಮ್ ಆಮ್ಲಾ, ಸೆಂಚುರಿಯನ್

4* ವಿರಾಟ್ ಕೊಹ್ಲಿ, ಕೊಲಂಬೊ

3- ಜಹೀರ್ ಅಬ್ಬಾಸ್, ಲಾಹೋರ್

3- ಸಯೀದ್ ಅನ್ವರ್, ಶಾರ್ಜಾ

3- ಸನತ್ ಜಯಸೂರ್ಯ, ಸಿಡ್ನಿ

3- ಕ್ವಿಂಟನ್ ಡಿ ಕಾಕ್, ಸೆಂಚೂರಿಯನ್

3* ರೋಹಿತ್ ಶರ್ಮಾ, ಬರ್ಮಿಂಗ್ಹಮ್​

ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 13,000 ರನ್ ಪೂರೈಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ತಮ್ಮ 267ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು ಈಗಾಗಲೇ 8000, 9000, 10000, 11000, 120000 ಏಕದಿನ ರನ್ ಗಳಿಸಿದ ವೇಗದ ಬ್ಯಾಟರ್​ ಆಗಿದ್ದಾರೆ.

Exit mobile version