Site icon Vistara News

Virat Kohli: ಅವಾಚ್ಯ ಪದ ಬಳಕೆ, ದುರ್ವರ್ತನೆ ತೋರಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli Gesture Viral

ಚೆನ್ನೈ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಮೈದಾನದಲ್ಲಿ ದುರ್ವರ್ತನೆ, ಅತಿರೇಕದ ವರ್ತನೆ ತೋರುವುದು ಹೊಸತೇನಲ್ಲ. ಓರ್ವ ಆಟಗಾರ ಉತ್ತಮವಾಗಿ ಆಡಿ ಔಟಾದಾಗ ಆತನ ಮೇಲೆ ರೇಗಾಡುವುದು ಕೊಹ್ಲಿಯ ಮೂಲ ಸ್ವಭಾವ. ಇದನ್ನು ಈಗಾಗಲೇ ಹಲವು ಬಾರಿ ಮೈದಾನದಲ್ಲಿ ನೋಡಿದ್ದೇವೆ. ಇದೀಗ ಶುಕ್ರವಾರ ನಡೆದ ಚೆನ್ನೈ(CSK vs RAB) ವಿರುದ್ಧದ ಐಪಿಎಲ್(IPL 2024)​ ಪಂದ್ಯದಲ್ಲಿಯೂ ಕೊಹ್ಲಿ ಇದೇ ರೀತಿಯ ದುರ್ವರ್ತನೆ ತೋರಿದ್ದಾರೆ. ಇದರ ವಿಡಿಯೊ ವೈರಲ್(viral video)​ ಆಗಿದೆ.

ಚೆನ್ನೈ ತಂಡ ಚೇಸಿಂಗ್​ ನಡೆಸುವ ವೇಳೆ ಈ ಘಟನೆ ನಡೆದಿದೆ. ಚೊಚ್ಚಲ ಐಪಿಎಲ್​ ಆಡಿದ ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರು ಅತ್ಯಂತ ಕೂಲ್​ ಆಗಿ ಬ್ಯಾಟಿಂಗ್​ ನಡೆಸುತ್ತಿದ್ದರು. ಆರ್​ಸಿಬಿ ಸ್ಪಿನ್ನರ್ ಕರ್ಣ್ ಶರ್ಮಾ ಓವರ್​ನಲ್ಲಿ ರಚಿನ್ ರವೀಂದ್ರ ಸಿಕ್ಸರ್​ ಒಂದನ್ನು ಬಾರಿಸಿದರು. ಮುಂದಿನ ಎಸೆತವನ್ನು ಕೂಡ ಸಿಕ್ಸರ್​ಗೆ ಬಾರಿಸುವ ಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಪಾಟೀದಾರ್​ಗೆ ಕ್ಯಾಚ್​ ನೀಡಿ ಔಟಾದರು.

ರಚಿನ್​ ಔಟಾಗುತ್ತಿದ್ದಂತೆ ವಿರಾಟ್​ ಕೊಹ್ಲಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸುವ ಜತೆಗೆ ಬೇಗ ಪೆವಿಲಿಯನ್​ಗೆ ನಟಿ ಎನ್ನುವಂತೆ ಕೈ ಸನ್ನೆ ಮಾಡಿದರು. ಕೊಹ್ಲಿ ಈ ಅತಿರೇಕದ ವರ್ತನೆಗೆ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ದುರ್ವರ್ತನೆಯೇ ನಿಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ IPL 2024 : ಸಂಜು ಬಳಗದ ಸವಾಲು ಮೀರುವುದೇ ರಾಹುಲ್ ಪಡೆ?

2 ತಿಂಗಳ ಬಳಿಕ ಕ್ರಿಕೆಟ್​ ಆಡಲೀದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದರು. 21 ಎಸೆತಗಳಿಂದ ಕೇವಲ 20 ರನ್​ ಗಳಿಸಿದರು. ಆದರೆ ರಚೀನ್​ ರವೀಂದ್ರ ಕೇವಲ 15 ಎಸೆತಗಳಿಂದ ತಲಾ 3 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 37 ರನ್​ ಬಾರಿಸಿದರು.

ಆರ್​ಸಿಬಿಗೆ ಸೋಲು


ಶುಕ್ರವಾರ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 174 ರನ್ ಗಳ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ 18.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಜಯ ಸಾಧಿಸಿತು. ಚೊಚ್ಚಲ ಐಪಿಎಲ್​ ಆಡಿದ ರಚಿನ್ ರವೀಂದ್ರ 15 ಎಸೆತಗಳಲ್ಲಿ 37 ರನ್ ಗಳಿಸಿ ಮಿಂಚಿದರು. ಶಿವಂ ದುಬೆ 34, ರವೀಂದ್ರ ಜಡೇಜ 25 ರನ್ ಗಳಿಸಿ ಔಟಾಗದೆ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯಕ್ಕೂ ಮುನ್ನ ರಾಹುಲ್ ಗಾಂಧಿಯ ಸುದ್ದಿಗೋಷ್ಠಿ ವೀಕ್ಷಿಸಿದ ಕೊಹ್ಲಿ


ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ ಅವರು ಡ್ರೆಸಿಂಗ್​ ರೂಮ್​ನಲ್ಲಿ ರಾಹುಲ್​ ಗಾಂಧಿ(Rahul Gandhi) ನಡೆಸಿದ ಸುದ್ದಿಗೋಷ್ಠಿಯನ್ನು(Rahul Gandhi Press Conference) ವೀಕ್ಷಿಸಿದ್ದರು. ಈ ಫೋಟೊ ವೈರಲ್​ ಆಗಿತ್ತು. ಗುರುವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಹುಲ್​ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕೇಲವ ಕಲ್ಪನೆಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಕಲ್ಪನೆಯೇ ಸುಳ್ಳು, ಇದು ಸಂಪೂರ್ಣ ಸುಳ್ಳು ಎಂದು ಕಿಡಿಕಾರಿದ್ದರು. ಈ ವಿಡಿಯೊವನ್ನು ಕೊಹ್ಲಿ ನೋಡುತ್ತಿರುವ ಫೋಟೊ ವೈರಲ್​ ಆಗಿತ್ತು.

Exit mobile version