ನ್ಯೂಯಾರ್ಕ್: ವಿರಾಟ್ ಕೊಹ್ಲಿ(Virat Kohli) ಮೈದಾನದಲ್ಲಿ ಎಷ್ಟು ಬದ್ಧತೆ, ಗಮನ ಕೇಂದ್ರೀಕರಿಸಿ ಅಬ್ಬರಿಸುತ್ತಾರೋ, ಅಷ್ಟೇ ನಿಷ್ಠೆಯಿಂದ ಫಿಟ್‌ನೆಸ್‌ಗೂ(Virat Kohli Fitness) ಆದ್ಯತೆ ಕೊಡುತ್ತಾರೆ. ಅದರಲ್ಲೂ, ಯಾವುದಾದರೂ ಸರಣಿ, ವಿಶ್ವಕಪ್ ಆರಂಭವಾಗುವ ಕೆಲ ದಿನಗಳ ಮೊದಲಂತೂ ಅವರು ಹೆಚ್ಚು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾರೆ. ಹಾಗೆಯೇ, ಜಿಮ್‌ನಲ್ಲಿ ತಾಸುಗಟ್ಟಲೆ ವರ್ಕೌಟ್ ಮಾಡುವ ಮೂಲಕ ಹೆಚ್ಚು ಫಿಟ್ ಆಗಿರಲು, ಮೈದಾನದಲ್ಲಿ ಮಿಂಚಲು ಸಿದ್ಧರಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಮೆರಿಕ ಮತ್ತು ವೆಸ್ಟ್ ಇಂಡಿಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ಗೂ(T20 World Cup 2024) ಮುನ್ನ ಕೊಹ್ಲಿ ಸಿಕ್ಸ್ ಪ್ಯಾಕ್(Virat Kohli Six-Pack) ತೋರಿಸಿದ್ದಾರೆ.
ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ತಯಾರಿ ನಡೆಸುವ ವೇಳೆ ವಿರಾಟ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಿನ್ನೆ(ಶನಿವಾರ) ನಡೆದಿದ್ದ ಅಭ್ಯಾಸ ಪಂದ್ಯ ಆಡಿರಲಿಲ್ಲ. ವಿಶ್ರಾಂತಿ ಪಡೆದಿದ್ದರು. ಅಭ್ಯಾಸದ ವೇಳೆ ನೃತ್ಯವೊಂದನ್ನು ಕೂಡ ಮಾಡಿ ಗಮನಸೆಳೆದರು. ಕೊಹ್ಲಿಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು. ಪಂದ್ಯದ ವೇಳೆಯೂ ಅವರು ಹಲವು ಬಾರಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಹಲವರಿಗೆ ಸ್ಫೂರ್ತಿ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ವಿಶ್ವ ಕ್ರಿಕೆಟ್ನ ಅತ್ಯಂತ ಫಿಟ್ ಆಗಿರುವ ಕ್ರಿಕೆಟಿಗ ಅವರ ಫಿಟ್‌ನೆಸ್ ಬಗ್ಗೆ ಬದ್ಧ ವೈರಿ ಪಾಕ್ ತಂಡದ ಆಟಗಾರರು ಸೇರಿ ವಿಶ್ವದ ಅನೇಕರು ಸಲಾಂ ಹೊಡೆದಿದ್ದಾರೆ. ಅದೆಷ್ಟೋ ಕ್ರಿಕೆಟ್ ಆಟಗಾರರಿಗೆ ಅವರು ಫಿಟ್‌ನೆಸ್ ವಿಚಾರದಲ್ಲಿಯೂ ಸ್ಫೂರ್ತಿಯಾಗಿದ್ದಾರೆ. ಇತರ ಆಟಗಾರರಂತೆ ವಿರಾಟ್ ಕೊಹ್ಲಿ ಗಾಯಗೊಂಡು ತಂಡದಿಂದ ಹೊರಗುಳಿದ ನಿದರ್ಶನ ಇದುವರೆಗೂ ಕಂಡುಬಂದಿಲ್ಲ. ಕ್ರಿಕೆಟ್ ಆಡಲು ಆರಂಭಿಸಿದ ದಿನದಿಂದಲೂ ಕೊಹ್ಲಿ ತಮ್ಮ ಫಿಟ್‌ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ(Virat Kohli) ಅವರು ಐಸಿಸಿ ವರ್ಷದ(ICC ODI Player Of The Year 2023) ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾನುವಾರ ಕೊಹ್ಲಿ ಈ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಮತ್ತೊಂದು ಬೃಹತ್ ಉತ್ತುಂಗಕ್ಕೆ ಏರಿದ್ದಾರೆ. ಟಿ20 ವಿಶ್ವಕಪ್ ಆಡುವ ಸಲುವಾಗಿ ನ್ಯೂಯಾರ್ಕ್ನಲ್ಲಿರು ಕೊಹ್ಲಿ ಈ ಪ್ರಶಸ್ತಿಯನ್ನು ಇಲ್ಲಿಯೇ ಸ್ವೀಕರಿಸಿದ್ದಾರೆ. ಇದರ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. 2012, 2017, 2018 ರಲ್ಲಿಯೂ ಕೊಹ್ಲಿ ಈ ಪ್ರಶಸ್ತಿ ಪಡೆದಿದ್ದರು.
35 ವರ್ಷದ ಕೊಹ್ಲಿ 2023 ರಲ್ಲಿ 27 ಏಕದಿನ ಪಂದ್ಯಗಳಿಂದ 24 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳೊಂದಿಗೆ 72.47 ರ ಸರಾಸರಿ ಮತ್ತು 99.13 ರ ಸ್ಟ್ರೈಕ್ ರೇಟ್‌ನಲ್ಲಿ 1,377 ರನ್ ಗಳಿಸಿದ್ದಾರೆ. ಈ ಪೈಕಿ ಗರಿಷ್ಠ ಸ್ಕೋರ್ 166* ಆಗಿತ್ತು. ಏಷ್ಯಾ ಕಪ್ 2023 ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿರ್ಣಾಯಕ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 94 ಎಸೆತಗಳಲ್ಲಿ ಅಜೇಯ 122* ರನ್ ಗಳಿಸಿದ್ದರು.
ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ, ವಿರಾಟ್ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು, ಆರು ಅರ್ಧ ಶತಕಗಳು ದಾಖಲಾಗಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದೀಗ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.