Site icon Vistara News

virat kohli | ಕೊಹ್ಲಿ ಇನಿಂಗ್ಸ್​ನಿಂದ ಜೀವನ ಪಾಠ ಕಲಿಯಬೇಕು; ಐಎಎಸ್​ ಅಧಿಕಾರಿ ಅವನೀಶ್ ಕಿವಿಮಾತು

ಮುಂಬಯಿ: ಟಿ20 ವಿಶ್ವ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವು ಸಾಧಿಸಲು ವಿರಾಟ್​ ಕೊಹ್ಲಿ ಹೋರಾಡಿದ ಪರಿ ಎಲ್ಲರ ಜೀವನ ಪಾಠ ಆಗಬೇಕು ಎಂದು ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅಭಿಪ್ರಾಯ ಪಟ್ಟಿದ್ದಾರೆ. ಅದರಂತೆ ಕೊಹ್ಲಿ ಇನಿಂಗ್ಸ್​ನಿಂದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಮುಖ 5 ಅಂಶಗಳನ್ನು ಟ್ವೀಟ್​ ಮೂಲಕ ತಿಳಿಸಿದ್ದಾರೆ.

2009ನೇ ಬ್ಯಾಚ್​ನ ಅವನೀಶ್ ಶರಣ್ ಅವರು ಕೊಹ್ಲಿಯ ಇನಿಂಗ್ಸ್‌ನಿಂದ ಕಲಿಯಬೇಕಾದ ಐದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಂತೆ ಅವನೀಶ್ ತಿಳಿಸಿದ 5 ಅಂಶಗಳು ಯಾವುದೆಂದು ನೋಡುವುದಾದರೆ ಮೊದಲನೆಯದಾಗಿ ಕೆಟ್ಟ ಸಮಯ ಎನ್ನುವುದು ತಾತ್ಕಾಲಿಕ. ಇದು ಶಾಶ್ವತವಲ್ಲ. 2. ನಮ್ಮ ಕಾರ್ಯಕ್ಷಮತೆಯ ಮೂಲಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು. 3.ಕೊನೆಯ ಕ್ಷಣದ ವರೆಗೂ ಭಾವನೆಗಳನ್ನು ನಿಯಂತ್ರಿಸಬೇಕು. 4. ಜನರ ಅಭಿಪ್ರಾಯ ಮತ್ತು ನೆನಪುಗಳು ಅಲ್ಪಾವಧಿಗೆ ಸೀಮಿತವಾರುತ್ತದೆ. 5. ಆತ್ಮಸ್ಥೈರ್ಯ ಹೆಚ್ಚಾದರೆ ಎಷ್ಟೇ ದೊಡ್ಡ ಕಷ್ಟವಾದರೂ ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದು ಅವನೀಶ್ ಶರಣ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಕೊಹ್ಲಿಯ ವಿಚಾರವನ್ನು ಮುಂದಿಟ್ಟು ಅವನೀಶ್ ಹೇಳಿದ ಮಾತು ಅಕ್ಷರಶಃ ಸತ್ಯ. ಹೌದು.. ಕಳೆದ 2 ವರ್ಷಗಳಿಂದ ಕೊಹ್ಲಿ ಫಾರ್ಮ್ ಚೆನ್ನಾಗಿರಲಿಲ್ಲ, ಶತಕದ ಮಾತು ಬದಿಗಿರಲಿ. ಕನಿಷ್ಠ 30ರನ್​ ಗಳಿಸಲು ಪರದಾಟುತ್ತಿದ್ದರು. ಈ ವೇಳೆ ಇಡೀ ಕ್ರಿಕೆಟ್​ ಜಗತ್ತೆ ಕೊಹ್ಲಿ ಕ್ರಿಕೆಟ್​ ಯುಗ ಅಂತ್ಯವಾಯಿತು. ಆತ ತಂಡದಲ್ಲಿ ಲೆಕ್ಕಭರ್ತಿಗೆ ಮಾತ್ರ ಆಡುತ್ತಿದ್ದಾನೆ. ಹೀಗೆ ಹಲವಾರು ತೀಕ್ಷ್ಣ ಮಾತುಗಳಿಂದ ಕೊಹ್ಲಿಯನ್ನು ನಿಂದಿಸಿದ್ದರು. ಆದರೆ ಕೊಹ್ಲಿ ತನ್ನನ್ನು ಟೀಕಿಸಿದ ಯಾರ ವಿರುದ್ಧವೂ ನೇರವಾಗಿ ಒಂದೇ ಒಂದು ಮಾತನ್ನೂ ಹೇಳದೆ ಶಾಂತ ಸ್ವಭಾವದಿಂದ ಇದ್ದರು.

ಏಷ್ಯಾ ಕಪ್​ಗೂ ಮುನ್ನ ವಿಶ್ರಾಂತಿ ಪಡೆದು ಬಂದ ಕೊಹ್ಲಿ ಏಷ್ಯಾ ಕಪ್​ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದ್ದರು. ಅದಾಗಲೇ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ 20 ವಿಶ್ವ ಕಪ್​ನಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೊಹ್ಲಿಯ ಈ ಬ್ಯಾಟಿಂಗ್​ ಪ್ರದರ್ಶನ ಕಂಡು ನಿನ್ನೆ ಮೊನ್ನೆಯವರೆಗೂ ಕೊಹ್ಲಿ ಕ್ರಿಕೆಟ್​ಗೆ​ ವಿದಾಯ ಹೇಳುತ್ತಾರೆ ಎನ್ನುವವರು ಇದೀಗ ಮತ್ತೆ “ಕಿಂಗ್ ಈಸ್ ಬ್ಯಾಕ್” ಎನ್ನುತ್ತಿದ್ದಾರೆ. ಕಷ್ಟ ಕಾಲ ಎಂಬುವುದು ಶಾಶ್ವತವಲ್ಲ. ಆತ್ಮಸ್ಥೈರ್ಯ ಹೆಚ್ಚಾದರೆ ಎಂತಹ ದೊಡ್ಡ ಗುರಿಯನ್ನಾದರೂ ಸಾಧಿಸಬಹುದು. ಇದಕ್ಕೆ ಪಾಕಿಸ್ತಾನದ ವಿರುದ್ಧದ ಕೊಹ್ಲಿಯ ಪ್ರದರ್ಶನವೇ ಜೀವಂತ ಸಾಕ್ಷಿ ಎಂದು ಅವನೀಶ್ ತಿಳಿಸಿದ್ದಾರೆ.

ಇದನ್ನೂ ಓದಿ | T20 World Cup| ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್​; ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್

Exit mobile version