T20 World Cup| ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್​; ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್ - Vistara News

T20 ವಿಶ್ವಕಪ್

T20 World Cup| ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್​; ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಆ್ಯಡಂ ಝಂಪಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಪಂದ್ಯದಿಂದ ಹೊರಗುಳಿದಿದ್ದಾರೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಟಿ20 ವಿಶ್ವ ಕಪ್​ (T20 World Cup)ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಮತ್ತೆ ಆಘಾತ ಎದುರಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ಪ್ರಮುಖ ಆಟಗಾರ ಆ್ಯಡಂ ಜಂಪಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಪಂದ್ಯದಿಂದ ಹೊರಗುಳಿದಿದ್ದಾರೆ.

ಪರ್ತ್​ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಮೊದಲೇ ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಜಂಪಾ ಅವರನ್ನು ಕೊರೊನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿದೆ. ಅವರ ಸ್ಥಾನಕ್ಕೆ ಮತ್ತೋರ್ವ ಸ್ಪಿನ್ನರ್​ ಆಸ್ಟನ್​ ಅಗರ್​ಗೆ​ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿದೆ.

ಟಿ20 ವಿಶ್ವ ಕಪ್‌ಗಾಗಿ ಕೊರೊನಾ ನಿಯಮದಲ್ಲಿ ಐಸಿಸಿ ಬದಲಾವಣೆ ತಂದಿದೆ. ಅದರಂತೆ ಆಟಗಾರನಿಗೆ ಕೊರೊನಾ ಸೋಂಕು ದೃಢಪಟ್ಟರೆ, ಅವರು ಕಡ್ಡಾಯ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ಕ್ವಾರಂಟೈನ್​ನಲ್ಲಿ ಇರಬೇಕಿಲ್ಲ. ಬದಲಾಗಿ ಪಂದ್ಯವಾಡಲು ವೈದ್ಯರಿಂದ ಫಿಟ್​ನೆಸ್ ಟೆಸ್ಟ್ ಮಾಡಿಸಿಕೊಂಡು ಕಣಕ್ಕಿಳಿಯಬಹುದು. ಹೀಗಾಗಿ ಕೊರೋನಾ ಸೋಂಕಿಗೆ ಒಳಗಾದರೆ ತಂಡದ ವೈದ್ಯರ ನಿರ್ಧಾರ ಅಂತಿಮವಾಗಿರಲಿದೆ.

ಇದನ್ನೂ ಓದಿ | IND VS PAK | ಧ್ವಜ ಸರಿಯಾಗಿ ಹಿಡಿಯಲು ಬಾರದ ಪಾಕಿಸ್ತಾನಿಗೆ ಕಾಶ್ಮೀರ ಬೇಕಂತೆ! ಫುಲ್‌ ಟ್ರೋಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Virat Kohli: ಸತತವಾಗಿ 2 ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡ ಬೆನ್ನಲ್ಲೇ ವಿರಾಟ್​ ಕೊಹ್ಲಿ ಅವರು ನ್ಯೂಯಾರ್ಕ್​ನಲ್ಲಿರುವ ಸಚಿನ್​ ತೆಂಡೂಲ್ಕರ್​ ಅವರನ್ನು ಭೇಟಿಯಾಗಿದ್ದಾರೆ. ಉಭಯ ಆಟಗಾರರ ಭೇಟಿಯ ಫೋಟೊ ವೈರಲ್​ ಆಗಿದೆ. ಮೂಲಗಳ ಪ್ರಕಾರ ಬ್ಯಾಟಿಂಗ್​ ಸಲಹೆ ಪಡೆಯಲೆಂದೇ ಕೊಹ್ಲಿ ಸಚಿನ್​ ಭೇಟಿಯಾಗಿದ್ದು ಎನ್ನಲಾಗಿದೆ.

VISTARANEWS.COM


on

Virat Kohli
Koo

ನ್ಯೂಯಾರ್ಕ್​: ಕಳೆದ ಎರಡು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ(Virat Kohli) ಅಮೆರಿಕ(United States vs India) ವಿರುದ್ಧ ಇಂದು(ಬುಧವಾರ) ನಡೆಯುವ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ. ಜತೆಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವೂ ಅವರ ಮುಂದಿದೆ.

ಹೌದು, ವಿರಾಟ್​ ಕೊಹ್ಲಿ ಅವರು ಇಂದಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 103* ಬೌಂಡರಿ ಬಾರಿಸಿದ್ದಾರೆ. 

ಕಳೆದ ಐರ್ಲೆಂಡ್​ ಮತ್ತು ಪಾಕ್​ ವಿರುದ್ಧದ ಪಂದ್ಯದಲ್ಲಿಯೇ ಕೊಹ್ಲಿಗೆ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ ಪಾಕ್​ ವಿರುದ್ಧ ಒಂದು ಬೌಂಡರಿ ಮಾತ್ರ ಬಾರಿಸಿದ್ದರು. ಇದೀಗ ಈ ಪಂದ್ಯದಲ್ಲಾದರೂ ಅವರು ಉತ್ತಮ ಬ್ಯಾಟಿಂಗ್​ ನಡೆಸಿ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರಾ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

ಜೈಸ್ವಾಲ್​ ಓಪನಿಂಗ್​?


ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

ಟ20 ವಿಶ್ವಕಪ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​ಬೌಂಡರಿ
ಮಹೇಲಾ ಜಯವರ್ಧನೆಶ್ರೀಲಂಕಾ31111
ವಿರಾಟ್ ಕೊಹ್ಲಿಭಾರತ29104*
ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
ಡೇವಿಡ್​ ವಾರ್ನರ್ಆಸ್ಟ್ರೇಲಿಯಾ3797*
ರೋಹಿತ್​ ಶರ್ಮ​ಭಾರತ3896*
ಕ್ರಿಸ್​ ಗೇಲ್​ವೆಸ್ಟ್​ ಇಂಡೀಸ್​3178
ಜಾಸ್​ ಬಟ್ಲರ್​ಇಂಗ್ಲೆಂಡ್​2974*
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​2669*
ಬ್ರೆಂಡನ್ ಮೆಕಲಮ್ನ್ಯೂಜಿಲ್ಯಾಂಡ್2567
ಕುಮಾರ್ ಸಂಗಕ್ಕಾರಶ್ರೀಲಂಕಾ3163

ಸಚಿನ್​ ಭೇಟಿಯಾದ ಕೊಹ್ಲಿ


ಸತತವಾಗಿ 2 ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡ ಬೆನ್ನಲ್ಲೇ ವಿರಾಟ್​ ಕೊಹ್ಲಿ ಅವರು ನ್ಯೂಯಾರ್ಕ್​ನಲ್ಲಿರುವ ಸಚಿನ್​ ತೆಂಡೂಲ್ಕರ್​ ಅವರನ್ನು ಭೇಟಿಯಾಗಿದ್ದಾರೆ. ಉಭಯ ಆಟಗಾರರ ಭೇಟಿಯ ಫೋಟೊ ವೈರಲ್​ ಆಗಿದೆ. ಮೂಲಗಳ ಪ್ರಕಾರ ಬ್ಯಾಟಿಂಗ್​ ಸಲಹೆ ಪಡೆಯಲೆಂದೇ ಕೊಹ್ಲಿ ಸಚಿನ್​ ಭೇಟಿಯಾಗಿದ್ದು ಎನ್ನಲಾಗಿದೆ.

2 ಬದಲಾವಣೆ


ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್​ರೌಂಡರ್​ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.

​ಶಿವಂ ದುಬೆ ಆಲ್​ರೌಂಡರ್​ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್​ ನಡೆಸಿರಲಿಲ್ಲ. ಅಲ್ಲದೆ ಪಾಕ್​ ವಿರುದ್ಧ ಬ್ಯಾಟಿಂಗ್​ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್​ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್​ ಮೂಲಕ ಕ್ಯಾಚ್​ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್​ ಲೆಸ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್​ ಮತ್ತು ಕುಲ್​ದೀಪ್​ ಯಾದವ್​ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Continue Reading

ಕ್ರೀಡೆ

Harbhajan Singh: ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್

Harbhajan Singh: ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದಾರೆ.

VISTARANEWS.COM


on

Harbhajan Singh
Koo

ಮುಂಬಯಿ: ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್(Kamran Akmal) ವಿರುದ್ಧ ಹರ್ಭಜನ್​ ಸಿಂಗ್(Harbhajan Singh) ಮತ್ತೆ ಕಿಡಿ ಕಾರಿದ್ದಾರೆ. ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದಾರೆ.

ಇದಕ್ಕೂ ಮುನ್ನ ಹರ್ಭಜನ್​ ಸಿಂಗ್​ ಅವರು ಟ್ವೀಟ್​ ಮಾಡಿ ಅಕ್ಮಲ್​ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಿಮ್ಮ ಕೊಳಕು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಆಕ್ರಮಣಕಾರರು ಅಪಹರಿಸಿದಾಗ ಅವರನ್ನು ರಕ್ಷಿಸಿದ್ದೇವೆ. ನಿಮಗೆ ನಾಚಿಕೆಯಾಗಬೇಕು… ಸ್ವಲ್ಪ ಕೃತಜ್ಞತೆ ಇರಲಿ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

ಕ್ಷಮೆ ಕೇಳಿದ್ದ ಅಕ್ಮಲ್​


ವಿವಾದಾತ್ಮಕ ಹೇಳಿಕೆಗೆ ಭಾರೀ ಟಿಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಮ್ರಾನ್​ ಅಕ್ಮಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕ್ಷಮೆ ಯಾಚಿಸಿದ್ದರು. “ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ. ನಿಜವಾಗಿಯೂ ಕ್ಷಮೆ ಯಾಚಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದರು.

ಏನಿದು ಪ್ರಕರಣ?


ಭಾನುವಾರ ಪಾಕ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡದ ವೇಗಿ ಅರ್ಶ್​ದೀಪ್ ಅವರು ಪಂದ್ಯದ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಅಕ್ಮಲ್​ “ಕುಚ್ ಭೀ ಹೋ ಸಕ್ತಾ ಹೈ.. 12 ಬಜ್ ಗಯೇ ಹೈ (ಏನು ಬೇಕಾದರೂ ಸಂಭವಿಸಬಹುದು. 12 ರ ನಂತರ ಯಾವುದೇ ಸಿಖ್ಖರನ್ನು ನೀಡಲಾಗುವುದಿಲ್ಲ) ಎಂದು ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ಪಾಕ್​ ಬೌಲರ್​ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್​ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಇಲ್ಲಿಂದ ಪಾಕ್​ ಕುಸಿತ ಕೂಡ ಆರಂಭವಾಯಿತು. ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತ್ತು.

Continue Reading

ಕ್ರಿಕೆಟ್

IND vs USA: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಯಾರಿಗೆ ಕೊಕ್​?

IND vs USA: ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

VISTARANEWS.COM


on

IND vs USA
Koo

ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧ ಇಂದು(ಬುಧವಾರ) ನಡೆಯುವ ಟಿ20 ವಿಶ್ವಕಪ್​ ಲೀಗ್(T20 World Cup 2024) ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್​ರೌಂಡರ್​ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.

​ಶಿವಂ ದುಬೆ ಆಲ್​ರೌಂಡರ್​ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್​ ನಡೆಸಿರಲಿಲ್ಲ. ಅಲ್ಲದೆ ಪಾಕ್​ ವಿರುದ್ಧ ಬ್ಯಾಟಿಂಗ್​ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್​ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್​ ಮೂಲಕ ಕ್ಯಾಚ್​ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್​ ಲೆಸ್​ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್​ ಮತ್ತು ಕುಲ್​ದೀಪ್​ ಯಾದವ್​ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈಸ್ವಾಲ್​ ಓಪನಿಂಗ್​?


ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್​ ಖ್ಯಾತಿಯ ವಿರಾಟ್​​ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದರು. ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್​ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್​ ಜತೆ ಜೈಸ್ವಾಲ್​ ಇನಿಂಗ್ಸ್​ ಆರಂಭಿಸಬಹುದು.

ಇದನ್ನೂ ಓದಿ AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

ಅಮೆರಿಕ ತಂಡ ಕ್ರಿಕೆಟ್​ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್​ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ.

ಸಂಭಾವ್ಯ ತಂಡ


ಭಾರತ:
 ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಕುಲ್​ದೀಪ್​ ಯಾದವ್​, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

Continue Reading

ಕ್ರೀಡೆ

AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್

AUS vs NAM: ಗೆರ್ಹಾರ್ಡ್ ಎರಾಸ್ಮಸ್ ಅವರು ಖಾತೆ ತೆರೆಯಲು ಬರೋಬ್ಬರಿ 17 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ರನ್​ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಮೊದಲ ಬ್ಯಾಟರ್​ ಎನ್ನುವ ಕೆಟ್ಟ ಹಣೆಪಟ್ಟಿಯನ್ನು ತಮ್ಮ ಹೆಸರಿಗೆ ಸೇರಿಕೊಂಡರು

VISTARANEWS.COM


on

AUS vs NAM
Koo

ಆಂಟಿಗುವಾ: ಆಸ್ಟ್ರೇಲಿಯಾ(Australia vs Namibia) ವಿರುದ್ಧ ನಡೆದ ಪಂದ್ಯದಲ್ಲಿ ನಮೀಬಿಯಾ(AUS vs NAM) ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್(Gerhard Erasmus) 17 ವರ್ಷಗಳ ಹಿಂದಿನ ಅನಗತ್ಯ ದಾಖಲೆಯೊಂದನ್ನು ಮುರಿದಿದ್ದಾರೆ. ಮೊದಲ ರನ್​ ಗಳಿಸಲು ಅತ್ಯಧಿಕ ಎಸೆತ ಎದುರಿಸಿದ ಬ್ಯಾಟರ್​ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಗೆರ್ಹಾರ್ಡ್ ಎರಾಸ್ಮಸ್ ಅವರು ಖಾತೆ ತೆರೆಯಲು ಬರೋಬ್ಬರಿ 17 ಎಸೆತಗಳನ್ನು ತೆಗೆದುಕೊಂಡರು. ಈ ವೇಳೆ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ರನ್​ ಗಳಿಸಲು ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಮೊದಲ ಬ್ಯಾಟರ್​ ಎನ್ನುವ ಕೆಟ್ಟ ಹಣೆಪಟ್ಟಿಯನ್ನು ತಮ್ಮ ಹೆಸರಿಗೆ ಸೇರಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕೀನ್ಯಾ ತಂಡದ ತನ್ಮಯ್ ಮಿಶ್ರಾ(Tanmay Mishra) ಹೆಸರಿನಲ್ಲಿತ್ತು. 2007ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತನ್ಮಯ್ ಮಿಶ್ರಾ 16 ಎಸೆತಗಳನ್ನು ಎದುರಿಸಿ ಖಾತೆ ತೆರೆದಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ.

ಆರಂಭಿಕ ರನ್​ ಗಳಿಸಲು 17 ಎಸೆತ ಎದುರಿಸಿದರೂ ಆ ಬಳಿಕ ಎರಾಸ್ಮಸ್ ಉತ್ತಮ ಬ್ಯಾಟಿಂಗ್​ ನಡೆಸಿದರು. 4 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 36 ರನ್​ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರ್​ ಗಳಿಸಿ ಆಟಗಾರನಾಗಿ ಮೂಡಿಬಂದರು.

ಟೂರ್ನಿಯಿಂದ ಹೊರಬಿದ್ದ ನಮೀಬಿಯಾ


ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಮೀಬಿಯಾ ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 17 ಓವರ್​ಗೆ ಕೇವಲ 72 ರನ್ ಗಳಿಸಿ ಆಲೌಟ್ ಆಯಿತು. ಮಾರಕ ಸ್ಪಿನ್​ ದಾಳಿ ನಡೆಸಿದ ಆ್ಯಡಂ ಝಂಪಾ 4 ವಿಕೆಟ್ ಕಬಳಿಸಿದರೆ ಜೋಶ್ ಹೇಝಲ್ ವುಡ್, ಮಾರ್ಕಸ್​ ಸ್ಟೋಯಿನಿಸ್​ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ IND vs USA: ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಉಭಯ ತಂಡಗಳು ಸೂಪರ್​-8 ಪ್ರವೇಶ

ಸಣ್ಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 5.4 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ 74 ರನ್​ ಬಾರಿಸಿ 9 ವಿಕೆಟ್​ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ 20 ರನ್​ ಗಳಿಸಿ ಔಟಾದರು. ಬಳಿಕ ಬಂದ ಮಿಚೆಲ್ ಮಾರ್ಷ್ 18* ಹಾಗೂ ಟ್ರಾವಿಸ್ ಹೆಡ್ 34* ರನ್​ ಬಾರಿಸಿ ಅಜೇಯರಾಗಿ ಉಳಿದರು.

ಆ್ಯಡಂ ಝಂಪಾ 4 ವಿಕೆಟ್​ ಕೀಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳ ಮೇಲುಗಲ್ಲು ತಲುಪಿದರು. ಆಸ್ಟ್ರೇಲಿಯಾ ‘ಬಿ’ ಗುಂಪಿನಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ಸೂಪರ್​-8 ಪ್ರವೇಶ ಪಡೆಯಿತು. ಇನ್ನೊಂದು ಸ್ಥಾನಕ್ಕಾಗಿ ಸ್ಕಾಟ್ಲೆಂಡ್​ ಮತ್ತು ಇಂಗ್ಲೆಂಡ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಂದೊಮ್ಮೆ ಸ್ಕಾಟ್ಲೆಂಡ್​ ಮುಂದಿನ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್​ ಟೂರ್ನಿಯಿಂದ ಹೊರಬೀಳಲಿದೆ. ಅಥವಾ ಇಂಗ್ಲೆಂಡ್​ ಇನ್ನುಳಿದ 2 ಪಂದ್ಯಗಳ ಪೈಕಿ ಒಂದು ಪಂದ್ಯ ಸೋತರೂ ಹೋರಬೀಳಲಿದೆ. ಒಟ್ಟಾರೆಯಾಗಿ ಇಂಗ್ಲೆಂಡ್​ ಉಭಯ ಸಂಕಟಕ್ಕೆ ಸಿಲುಕಿದೆ.

Continue Reading
Advertisement
ICC T20 Rankings
ಕ್ರೀಡೆ4 mins ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ15 mins ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ21 mins ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ27 mins ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Terror attack
ದೇಶ32 mins ago

Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

Uttara Kannada MP Vishweshwara hegde kageri spoke in Thanksgiving ceremony for bjp party workers in banavasi
ಉತ್ತರ ಕನ್ನಡ40 mins ago

Uttara Kannada News: ಉ.ಕ ಜಿಲ್ಲೆ ಬಿಜೆಪಿ ಕಾರ್ಯಕರ್ತರ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತು: ಕಾಗೇರಿ

chandrababu naidu takes oath as andhra chief minister mlc TA Sharavana Congratulated
ಬೆಂಗಳೂರು42 mins ago

TA Sharavana: ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು ಪದಗ್ರಹಣ; ಶರವಣ ಅಭಿನಂದನೆ

Hindu Jana Jagruti Samiti demands immediate ban on Maharaj movie
ದೇಶ44 mins ago

Maharaj Movie: `ಮಹಾರಾಜ್’ ಚಲನಚಿತ್ರ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Minister Dr.Sharanaprakash patil spoke in World Homeopathy Day Celebration and Seminar Programme in Bengaluru
ಕರ್ನಾಟಕ48 mins ago

Bengaluru News: ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಶರಣಪ್ರಕಾಶ್‌ ಪಾಟೀಲ್‌

Opposition party leader r ashok visit mangalore hospital
ಕರ್ನಾಟಕ50 mins ago

R Ashok: ಗೂಂಡಾಗಳ ಕೈಗೆ ರಾಜ್ಯ ನೀಡಿದ ಕಾಂಗ್ರೆಸ್‌ ಸರ್ಕಾರ: ಆರ್‌. ಅಶೋಕ್‌ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌