Site icon Vistara News

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ ನೋಡಲು ಮುಗಿಬಿದ್ದ ಅಭಿಮಾನಿಗಳು

virat kohli

ಜೈಪುರ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಕೊಹ್ಲಿ ಮೇಲಿನ ಅಭಿಮಾನಕ್ಕೋಸ್ಕರ ಜೈಪುರದಲ್ಲಿ ಕೊಹ್ಲಿಯ ಮೇಣದ ಪ್ರತಿಮೆಯೊಂದನ್ನು(Virat Kohli wax statue) ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ಜೈಪುರದ ವ್ಯಾಕ್ಸ್‌ ಮ್ಯೂಸಿಯಂನಲ್ಲಿದೆ. ಗುರುವಾರ ಇದನ್ನು ಅನಾವರಣಗೊಳಿಸಲಾಗಿತ್ತು.

35 ಕೆ.ಜಿ. ತೂಕದ ಕೊಹ್ಲಿ ಅವರ ಪ್ರತಿಮೆಯನ್ನು ಸುಮಾರು ಎರಡು ತಿಂಗಳಲ್ಲಿ ಕೆತ್ತಲಾಗಿದೆ. ಈ ಮ್ಯೂಸಿಯಂನಲ್ಲಿ ಈಗಾಗಗಲೇ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌ ಮತ್ತು ಎಂ.ಎಸ್‌. ಧೋನಿ ಸಹಿತ 44 ಮಂದಿಯ ಮೇಣದ ಪ್ರತಿಮೆಗಳಿವೆ. ಮಹಾತ್ಮಾ ಗಾಂಧಿ, ಜವಾಹರ್‌ಲಾರ್‌ ನೆಹರೂ, ಎಪಿಜೆ ಅಬ್ದುಲ್‌ ಕಲಾಂ, ಸುಭಾಷ್‌ಚಂದ್ರ ಬೋಸ್‌, ಭಗತ್‌ ಸಿಂಗ್‌, ಕಲ್ಪನಾ ಚಾವ್ಲಾ, ಅಮಿತಾಭ್‌ ಬಚ್ಚನ್‌ ಮತ್ತು ಮದರ್‌ ತೆರೇಸಾ ಅವರ ಪ್ರತಿಮೆಯಿದೆ. ಕೊಹ್ಲಿಯ ಪ್ರತಿಮೆಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಬರುತ್ತಿದ್ದಾರೆ ಎಂದು ಮ್ಯೂಸಿಯಂನ ಸಂಸ್ಥಾಪಕ ನಿರ್ದೇಶಕ ಅನೂಪ್‌ ಶ್ರೀವಾಸ್ತವ ಹೇಳಿದ್ದಾರೆ.

ಕಳೆದ ವರ್ಷ ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿರುವ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಗೆ ಯುವತಿಯೊಬ್ಬಳು ಲಿಪ್ ಕಿಸ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜತೆಗೆ ಮೇಣದ ಪ್ರತಿಮೆಯೊಂದಿಗೆ ಯುವತಿ ಪೋಸ್ ನೀಡಿರುವ ಫೋಟೋಗಳು ಕೂಡ ವೈರಲ್ ಆಗಿತ್ತು.

ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿ ಆರ್​ಸಿಬಿ ಪರ ಆಡಿದ 7 ಪಂದ್ಯಗಳಲ್ಲಿ 361 ರನ್​ ಬಾರಿಸಿ ಸದ್ಯ ಟೂರ್ನಿಯಲ್ಲಿ ಅತ್ಯಧಿಕ ರನ್​ಗಳಿಸಿ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ವಿರಾಟ್​ ಅವರು ರೋಹಿತ್​ ಜತೆ ಆರಂಭಿಕನಾಗಿ ಆಡಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

ಏಕದಿನ ವಿಶ್ವಕಪ್​ನಲ್ಲಿ ಹಲವು ದಾಖಲೆ


ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ವಿರಾಟ ದರ್ಶನ ತೋರಿದ್ದ ಕೊಹ್ಲಿ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಹೊರಮೊಮ್ಮಿದ್ದರು. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆದಿದ್ದರು. ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ ಗಳಿಸಿ ಸಚಿನ್​ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್‌ ಗಳಿಸಿದ ಕೊಹ್ಲಿ, ಸಚಿನ್​ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದ್ದರು. ಒಟ್ಟಾರೆಯಾಗಿ ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 765 ರನ್​ ಬಾರಿಸಿದ್ದರು.

Exit mobile version