ಲಕ್ನೋ: ಇಂಗ್ಲೆಂಡ್(IND vs ENG) ವಿರುದ್ಧ ಭಾನುವಾರ ಲಕ್ನೋದಲ್ಲಿ ನಡೆದ ವಿಶ್ವಕಪ್ನ 29ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 100 ರನ್ಗಳ ಗೆಲುವು ಸಾಧಿಸಿ 12 ಅಂಕದೊಂದಿಗೆ ಅಣಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ನಾಯಕ ರೋಹಿತ್ ಶರ್ಮ(Rohit Sharma) ಅವರನ್ನು ಓಡೋಡಿ ಬಂದು ತಬ್ಬಿಕೊಂಡು ಸಂಭ್ರಮಾಚರಣೆ ಮಾಡಿದ ವಿಡಿಯೊ(video goes viral) ಮತ್ತು ಫೋಟೊ ವೈರಲ್ ಆಗಿದೆ.
ಭಾರತ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ, ಈ ಪಟ್ಟವನ್ನು ರೋಹಿತ್ ಶರ್ಮಗೆ(Rohit Sharma) ನೀಡಿದಾಗ ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ನಡುವೆ ಏನೂ ಸರಿ ಇಲ್ಲ ಎಂಬ ಟಾಕ್ ಕ್ರಿಕೆಟ್ ವಲಯದಲ್ಲಿ ಭಾರಿ ಸುದ್ದು ಮಾಡಿತ್ತು. ಆದರೆ ರೋಹಿತ್ ಆಗಲಿ ಕೊಹ್ಲಿಯಾಗಲಿ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಜತೆಯಾಗಿ ಕ್ರಿಕೆಟ್ ಆಡುತ್ತಲೇ ಇದ್ದರು. ಆದರೂ ನೆಟ್ಟಿಗರು ಮಾತ್ರ ಉಭಯ ಆಟಗಾರರ ಮಧ್ಯೆ ಎಲ್ಲವು ಸರಿಯಿಲ್ಲ ಎಂದು ಪಂದ್ಯದ ವೇಳೆ ನಡೆದ ಕೆಲ ಘಟನೆಯನ್ನು ಮುಂದಿಟ್ಟುಕೊಂಡು ಈ ವಿಚಾರವನ್ನು ಹೇಳುತ್ತಲೇ ಬರುತ್ತಿದ್ದರು.
ಪಂದ್ಯದುದ್ದಕ್ಕೂ ಜೋಶ್ ತೋರಿದ ಕೊಹ್ಲಿ-ರೋಹಿತ್
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಮೊಯಿನ್ ಅಲಿ ವಿಕೆಟ್ ಕಿತ್ತ ಸಂದರ್ಭದಲ್ಲಿ ವಿರಾಟ್ ಮತ್ತು ರೋಹಿತ್ ಓಡೋಡಿ ಬಂದು ತಪ್ಪಿಕೊಂಡು ಸಂಭ್ರಮಿಸಿದ್ದಾರೆ. ರೋಹಿತ್ ಅವರನ್ನು ಎರಡು ಕೈಗಳಿಂದ ವಿರಾಟ್ ಮೇಲೆತ್ತುವ ಮೂಲಕ ವಿಕೆಟ್ ಬಿದ್ದ ಜೋಶ್ ತೋರಿದರು. ಅಲ್ಲದೆ ತಮ್ಮ ಮಧ್ಯೆ ಯಾರು ಎಷ್ಟೇ ಹುಳಿ ಹಿಂಡಿದರೂ ನಾವಿಬ್ಬರು ಗೆಳೆಯರು ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಸದ್ಯ ರೋಹಿತ್ ಮತ್ತು ಕೊಹ್ಲಿಯ ಈ ಸಂಭ್ರಮಾಚರಣೆ ದೃಶ್ಯ ಕಂಡ ನಟ್ಟಿಗರು ಅನ್ಯಾಯವಾಗಿ ನಿಮ್ಮಿಬ್ಬರ ಬಗ್ಗೆ ತಪ್ಪು ಕಲ್ಪನೆ ಮಾಡಿದ್ದೆವು ಎಂದಿದ್ದಾರೆ. ನಿಮ್ಮ ಈ ಸ್ನೇಹ ಇದೇ ರೀತಿ ಶಾಶ್ವತವಾಗಿರಲಿ ಎಂದು ನೆಟ್ಟಿಗರೊಬ್ಬರು ಈ ಫೋಟೊಗೆ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮಗುವಿನಿಂತ ಮನಸ್ಸು ಎಂದಿದ್ದಾರೆ. ಪಂದ್ಯದುದ್ದಕ್ಕೂ ಉಭಯ ಆಟಗಾರರು ಇದೇ ಜೋಶ್ನಲ್ಲಿ ವಿಕೆಟ್ ಬಿದ್ದಾಗ ಸಂಭ್ರಮಿಸಿದ್ದು ಕಂಡು ಬಂತು.
ಇದನ್ನೂ ಓದಿ ICC World Cup 2023: ವಿಶ್ವಕಪ್ನಲ್ಲಿ ಆಸೀಸ್ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್
Kids at heart. Absolutely love it. https://t.co/sOalTjqKDp pic.twitter.com/8iR3BYqaQ6
— Jaanvi🏏 (@that_shutterbug) October 29, 2023
ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ನಿರೀಕ್ಷತ ಬ್ಯಾಟಿಂಗ್ ನಡೆಸುವಲ್ಲಿ ಎಡವಿದರು. 9 ಎಸೆತ ಎದುರಿಸಿದರೂ ಶೂನ್ಯ ಗಳಿಕೆ ಸಂಪಾದಿಸಿ ವಿಕೆಟ್ ಕೈಚೆಲ್ಲಿದರು. ಇದೇ ಸಿಟ್ಟಿನಲ್ಲಿ ಕೊಹ್ಲಿ ಅವರು ಡ್ರೆಸ್ಸಿಂಗ್ ರೂಮ್ಗೆ ತೆರಳಿದ ಬಳಿಕ ತಮ್ಮ ಕೈಯನ್ನು ಕುರ್ಚಿಗೆ ಬಡಿದು ಆಕ್ರೋಶವನ್ನು ಹೊರಹಾಕಿದ್ದರು. ರೋಹಿತ್ ಶರ್ಮ ಅವರು 87 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಅವರು ಈ ಇನಿಂಗ್ಸ್ ಕಟ್ಟುತ್ತಿಲ್ಲವಾದರೆ ಭಾರತ ಸೋಲು ಕಾಣುತ್ತಿತ್ತು.
ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದ ರೋಹಿತ್
ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಆಸರೆಯಾದದ್ದು ವಿರಾಟ್ ಕೊಹ್ಲಿ. 53 ಎಸೆತದಲ್ಲಿ ಅಜೇಯ 82 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊಹ್ಲಿಯ ಈ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಕೂಡ ಸಂತಸದ ಅಲೆಯಲ್ಲಿ ತೇಲಿದ್ದರು. ಅಶ್ವಿನ್ ಗೆಲುವಿನ ರನ್ ಬಾರಿಸಿದ ಬಳಿಕ ಮೈದಾನಕ್ಕೆ ಓಡಿ ಬಂದ ರೋಹಿತ್, ಕಿಂಗ್ ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದ್ದರು.