Site icon Vistara News

Virat Kohli: ವಿರಾಟ್​ ಕೊಹ್ಲಿಯ ಮ್ಯಾಜಿಕ್​ಗೆ ಡಿ ಜೋರ್ಜಿ ವಿಕೆಟ್​ ಪತನ

Virat Kohli Magic

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಮ್ಯಾಜಿಕ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡುತ್ತಿದೆ. ಭಾರತ ನೀಡಿದ ಮೊತ್ತವನ್ನು ಹರಿಣ ಪಡೆ ಉತ್ತಮವಾಗಿ ಚೇಸಿಂಗ್​ ನಡೆಸುತ್ತಿತ್ತು. ಇದೇ ವೇಳೆ ಕೊಹ್ಲಿ ನಾನ್​ ಸ್ಟ್ರೇಕ್​ನಲ್ಲಿದ್ದ ವಿಕೆಟ್​ಗಳ ಎರಡು ಬೇಲ್ಸ್​ಗಳನ್ನು ತೆಗೆದಿದ್ದಾರೆ. ಇದಾದ ಎರಡು ಎಸೆತಗಳಲ್ಲಿ ವಿಕೆಟ್​ ಬಿದ್ದಿದೆ. ಕೊಹ್ಲಿಯ ಈ ಮ್ಯಾಜಿಕ್​ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಮೊದಲ ವಿಕೆಟ್​ ಕೇವಲ 11 ರನ್​ಗೆ ಬಿದ್ದರೂ ಆ ಬಳಿಕ ಡೀನ್​ ಎಲ್ಗರ್​ ಮತ್ತು ಡಿ ಜೋರ್ಜಿ ಸೇರಿಕೋಂಡು ಉತ್ತಮ ಇನಿಂಗ್ಸ್​ ಕಟ್ಟಿದರು. ವಿಕೆಟ್​ ಕಳೆದುಕೊಳ್ಳದಂತೆ ಆಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಟೀಮ್​ ಇಂಡಿಯಾದ ಬೌಲರ್​ಗಳು ಹರ ಸಾಹಸ ಪಡುತ್ತಿದ್ದರು. ಇದೇ ವೇಳೆ ಕೊಹ್ಲಿ ನಾನ್​ ಸ್ಟ್ರೇಕ್​ನಲ್ಲಿದ್ದ ವಿಕೆಟ್​ಗಳ ಎರಡು ಬೇಲ್ಸ್​ಗಳನ್ನು ತೆಗೆದು ಮತ್ತೆ ಅದೇ ರೀತಿ ಜೋಡಿಸಿದ್ದಾರೆ. ಅಚ್ಚರಿ ಎಂದರೆ ಕೊಹ್ಲಿ ಹೀಗೆ ಮಾಡಿದ ಬಳಿಕ ಮುಂದಿನ 2ನೇ ಎಸೆತದಲ್ಲಿ ಜೊರ್ಜಿ ವಿಕೆಟ್​ ಪತನಗೊಂಡಿತು. ಬುಮ್ರಾ ಎಸೆತ ಓವರ್​ ಇದಾಗಿತ್ತು.

ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧದ ತವರಿನ ಟೆಸ್ಟ್​ ಸರಣಿಯ ವಿದಾಯ ಪಂದ್ಯವನ್ನು ಆಡಿದ್ದ ಸ್ಟವರ್ಟ್​ ಬ್ರಾಡ್ ಅವರು ಇದೇ ರೀತಿ ಬೆಲ್ಸ್​ ತೆಗೆದು ಮುಂದಿನ ಎಸೆತದಲ್ಲಿ ವಿಕೆಟ್​ ಪಡೆದಿದ್ದರು. ಇದೀಗ ಕೊಹ್ಲಿ ಕೂಡ ಸ್ಟವರ್ಟ್​ ಬ್ರಾಡ್ ಅವರ ತಂತ್ರವನ್ನೇ ಅನುಸರಿಸಿ ಯಶಸ್ವಿ ಕಂಡಿದ್ದಾರೆ. ಇನ್ನು ಮುಂದೆ ಈ ರೀತಿಯ ನಂಬಿಕೆಯ ತಂತ್ರಗಳು ಕ್ರಿಕೆಟ್​ನಲ್ಲಿ ಪದೇಪದೆ ಕಂಡರೂ ಕೂಡ ಅಚ್ಚರಿಯಿಲ್ಲ. ಏಕೆಂದರೆ ಹೀಗೆ ಮಾಡಿದ ಬಳಿಕ ವಿಕೆಟ್​ ಕೂಡ ಬೀಳುತ್ತಿದೆ.​

ಸ್ಟುವರ್ಟ್​ ಬ್ರಾಡ್​ ಅವರು ಒಂದಲ್ಲ ಎಡರು ಬಾಶರಿ ಹೀಗೆ ಮಾಡಿ ವಿಕೆಟ್​ ಬೀಳುವಂತೆ ಮಾಡಿದ್ದರು. ಬೇಲ್ಸ್​ಗಳನ್ನು ಅದಲು ಬದಲಾಗಿ ಮಾಡಿದರೆ ಮುಂದಿನ ವಿಕೆಟ್​ ಬೇಳುತ್ತದೆ ಎನ್ನುವ ನಂಬಿಕೆ ಬೌಲರ್​ಗಳದ್ದಾಗಿದೆ. ಬಾಲ್ಯದಲ್ಲಿ ಗಲ್ಲಿಯಲ್ಲಿ ಕ್ರಿಕೆಟ್​ ಆಡುವ ವೇಳೆ ನಾವು ಕೂಡ ಕೆಲ ಮೂಡನಂಬಿಕೆಯ ತಂತ್ರಗಳನ್ನು ಪ್ರಯೋಗಿಸಿದ್ದೇವೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿಯೂ ಈ ನಂಬಿಕೆ ಇದೆ ಎಂದರೆ ನಿಜಕ್ಕೂ ಅಚ್ಚರಿ ಪಡಲೇಬೇಕು.

Exit mobile version